ವಿಟಮಿನ್ ಬಿ6
ಪರಿಚಯ:
ವಿಟಮಿನ್ ಬಿ6 ಅಥವಾ ಪಿರಿಡಾಕ್ಸಿನ್ (pyridoxine) ದೇಹದಲ್ಲಿನ ಪ್ರೋಟೀನ್ ನ ಜೀರ್ಣಕ್ರಿಯೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿದ್ದು, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅಪಸ್ಮಾರ/ ಮೂರ್ಛೆ ರೋಗ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಬಿ6, ನೀರಿನಲ್ಲಿ ಕರಗುವ ಗುಣವನ್ನು ಹೊಂದಿರುವುದರಿಂದ, ಕಡಿಮೆ ಪ್ರಮಾಣದಲ್ಲಿ (ಡೋಸೇಜ್) ಇದನ್ನು ಸೇವಿಸಿದಲ್ಲಿ ಮೂತ್ರದ ಮೂಲಕ ಸುಲಭ ವಿಸರ್ಜನೆ ಸಾಧ್ಯ.
ದಿನನಿತ್ಯ ಬೇಕಾಗುವ ಪ್ರಮಾಣ:
ಮೂಲಗಳು
ಅ. ನೈಸರ್ಗಿಕ ಮೂಲಗಳು:
ಮಾಂಸ, ಕೋಳಿ, ಮೀನು, ಮೊಟ್ಟೆ, ಬೀಜಗಳು, ಆಲೂಗಡ್ಡೆ, ಹಾಗೂ ಹಸಿರು ತರಕಾರಿಗಳು ವಿಟಮಿನ್ ಬಿ 6 ನ ಉತ್ತಮ ಮೂಲಗಳಾಗಿವೆ. ಭಾರತದಲ್ಲಿ, ಸೋಯಾ, ಹುರುಳಿ, ದ್ವಿದಳ ಧಾನ್ಯಗಳು (ದಾಲ್) ಕಡಲೆಕಾಯಿ, ಬಾಳೆಹಣ್ಣು ಮತ್ತು ಧಾನ್ಯಗಳು ಪಿರಿಡಾಕ್ಸಿನ್ ಅಂಶವನ್ನು ಸಮೃದ್ಧವಾಗಿ ಹೊಂದಿವೆ.
ಆ. ಪೂರಕಗಳು: ಸಿರಿಧಾನ್ಯಗಳನ್ನು ಸೇವಿಸುವ ಜೊತೆಗೆ ವಿಟಮಿನ್ ಬಿ6 ಅನ್ನು ಪೂರಕವಾಗಿ ತೆಗೆದುಕೊಳ್ಳಬಹುದು. ವಿಟಮಿನ್ ಬಿ6, ಪ್ರತ್ಯೇಕವಾಗಿ ಪಿರಿಡಾಕ್ಸಿನ್ ಹೈಡ್ರೋಕ್ಲೋರೈಡ್ (pyridoxine hydrochloride) ರೂಪದಲ್ಲಿಯೂ ಕೂಡ ಲಭ್ಯವಿದೆ.
ವಿಟಮಿನ್ ಬಿ6 ನ ಸೇವನೆಯಿಂದಾಗುವ ಪ್ರಯೋಜನಗಳು
ವಿಟಮಿನ್ ಬಿ6 ನ ಕೊರತೆ ಉಂಟಾಗಲು ಕಾರಣಗಳು
ವಿಟಮಿನ್ ಬಿ6 ನ ಕೊರತೆಯಿಂದಾಗಿ ಉಂಟಾಗಬಹುದಾದ ಸಮಸ್ಯೆಗಳು
ಪಿರಿಡಾಕ್ಸಿನ್ ನ ಅತಿಯಾದ ಸೇವನೆ
ವಿಟಮಿನ್ ಬಿ6 ಮತ್ತು ಇತರೆ ಔಷಧಿಗಳು
ದೇಹದಲ್ಲಿ ವಿಟಮಿನ್ ಬಿ 6 ಕೊರತೆಯನ್ನು ಗುರುತಿಸುವುದು
ಪಿರಿಡಾಕ್ಸಿನ್ ಮಟ್ಟವನ್ನು ದೇಹದ ರಕ್ತ ಅಥವಾ ಮೂತ್ರದಿಂದ ನಿರ್ಧರಿಸಬಹುದು
ಚಿಕಿತ್ಸೆ
ಇತರೆ ಔಷಧಿಗಳನ್ನು ಸೇವಿಸುವವರು ಕಡಿಮೆ ಪ್ರಮಾಣದಲ್ಲಿ ಪಿರಿಡಾಕ್ಸಿನ್ ಅನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ಅದರೊಂದಿಗೆ ವಿಟಮಿನ್ ಬಿ 6 ನ ಪೂರಕಗಳನ್ನು ಸೇವಿಸಬೇಕು. ವಿಟಮಿನ್ ಅಥವಾ ಪೌಷ್ಠಿಕಾಂಶದ ಕೊರತೆ ಅಥವಾ ರಕ್ತಹೀನತೆಯುಳ್ಳ ವ್ಯಕ್ತಿಗಳಿಗೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಮತ್ತು ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.

ವಯಸ್ಸು | ಪುರುಷರು | ಮಹಿಳೆಯರು | ಗರ್ಭಿಣಿಯರು | ಸ್ತನಪಾನ್ಯ ಮಾಡಿಸುವ ಮಹಿಳೆಯರು |
0- 6 ತಿಂಗಳು | 0.1 mg | 0.1 mg | ||
7–12 ತಿಂಗಳು | 0.3 mg | 0.3 mg | ||
1–3 ವರ್ಷ | 0.5 mg | 0.5 mg | ||
4–8 ವರ್ಷ | 0.6 mg | 0.6 mg | ||
9–13 ವರ್ಷ | 1.0 mg | 1.0 mg | ||
14–18 ವರ್ಷ | 1.3 mg | 1.2 mg | 1.9 mg | 2.0 mg |
19–50 ವರ್ಷ | 1.3 mg | 1.3 mg | 1.9 mg | 2.0 mg |
51ವರ್ಷ ಮೇಲ್ಪಟ್ಟವರು | 1.7 mg | 1.5 mg |
ಮೂಲಗಳು
ಅ. ನೈಸರ್ಗಿಕ ಮೂಲಗಳು:
ಮಾಂಸ, ಕೋಳಿ, ಮೀನು, ಮೊಟ್ಟೆ, ಬೀಜಗಳು, ಆಲೂಗಡ್ಡೆ, ಹಾಗೂ ಹಸಿರು ತರಕಾರಿಗಳು ವಿಟಮಿನ್ ಬಿ 6 ನ ಉತ್ತಮ ಮೂಲಗಳಾಗಿವೆ. ಭಾರತದಲ್ಲಿ, ಸೋಯಾ, ಹುರುಳಿ, ದ್ವಿದಳ ಧಾನ್ಯಗಳು (ದಾಲ್) ಕಡಲೆಕಾಯಿ, ಬಾಳೆಹಣ್ಣು ಮತ್ತು ಧಾನ್ಯಗಳು ಪಿರಿಡಾಕ್ಸಿನ್ ಅಂಶವನ್ನು ಸಮೃದ್ಧವಾಗಿ ಹೊಂದಿವೆ.
ಆ. ಪೂರಕಗಳು: ಸಿರಿಧಾನ್ಯಗಳನ್ನು ಸೇವಿಸುವ ಜೊತೆಗೆ ವಿಟಮಿನ್ ಬಿ6 ಅನ್ನು ಪೂರಕವಾಗಿ ತೆಗೆದುಕೊಳ್ಳಬಹುದು. ವಿಟಮಿನ್ ಬಿ6, ಪ್ರತ್ಯೇಕವಾಗಿ ಪಿರಿಡಾಕ್ಸಿನ್ ಹೈಡ್ರೋಕ್ಲೋರೈಡ್ (pyridoxine hydrochloride) ರೂಪದಲ್ಲಿಯೂ ಕೂಡ ಲಭ್ಯವಿದೆ.
ವಿಟಮಿನ್ ಬಿ6 ನ ಸೇವನೆಯಿಂದಾಗುವ ಪ್ರಯೋಜನಗಳು
- ಪಿರಿಡಾಕ್ಸಿನ್ ಕೇಂದ್ರ ನರಮಂಡಲದ ಸುಗಮ ಕಾರ್ಯನಿರ್ವಹಣೆಗೆ ಸಹಕಾರಿ ಮತ್ತು ಗ್ರಹಿಕಾ ಸಾಮರ್ಥ್ಯಾಭಿವೃದ್ಧಿ
- ದೇಹಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ಕೆಂಪು ರಕ್ತ ಕಣಗಳ ರಚನೆಗೆ ಸಹಕಾರಿ
- ಪ್ರೋಟೀನ್ ಮತ್ತು ಅಮೈನೊ ಆಸಿಡ್ ನ ಸುಗಮ ಚಯಾಪಚಯ/ ಜೀರ್ಣ ಕ್ರಿಯೆಗೆ ಉತ್ತಮವಾದ ವಿಟಮಿನ್
- ಅಧ್ಯಯನಗಳ ಪ್ರಕಾರ, ಇದು ದೇಹದಲ್ಲಿ ಹೋಮೋಸಿಸ್ಟೈನ್ (homocysteine) ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ. ಮಾತ್ರವಲ್ಲದೆ, ಗರ್ಭಾವಸ್ಥೆಯಲ್ಲಿ ತೀವ್ರವಾದ ವಾಂತಿ ಮತ್ತು ವಾಕರಿಕೆಯಂತಹ ಲಕ್ಷಣಗಳನ್ನು ಕಡಿಮೆ ಮಾಡಲು ಹಾಗೂ ಮುಟ್ಟಿನ ಪೂರ್ವದ ಸಿಂಡ್ರೋಮ್‌ನ ಲಕ್ಷಣಗಳನ್ನು ನಿವಾರಿಸಲು ಪಿರಿಡಾಕ್ಸಿನ್ ನ್ನು ಬಳಸಲಾಗುತ್ತದೆ.
ವಿಟಮಿನ್ ಬಿ6 ನ ಕೊರತೆ ಉಂಟಾಗಲು ಕಾರಣಗಳು
- ಪೌಷ್ಠಿಕಾಂಶ ಕೊರತೆ
- ಮೂತ್ರಪಿಂಡದ ಸಮಸ್ಯೆ
- ಅಲ್ಸರೇಟಿವ್ ಕೊಲೈಟಿಸ್ (cycloserine) ಅಥವಾ ಕ್ರೋನ್ಸ್ (Crohn’s) ಕಾಯಿಲೆಯಿಂದಾಗಿ ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದಿದ್ದಾಗ ಆಹಾರ ಮೂಲಗಳಿಂದ ವಿಟಮಿನ್ ನ್ನು ಹೀರುವ ಸಾಮರ್ಥ್ಯ ಕಡಿಮೆಯಾಗುವುದರಿಂದ
- ಆಲ್ಕೊಹಾಲ್ ಅವಲಂಬನೆ ಮತ್ತು ರುಮಟಾಯ್ಡ್ ಸಂಧಿವಾತದಂತಹ (rheumatoid arthritis) ನ್ಯೂನತೆಗಳು
- ಅಪಸ್ಮಾರದ ಚಿಕಿತ್ಸೆಯಲ್ಲಿ ಬಳಸುವ ಅಪಸ್ಮಾರ ವಿರೋಧಿ (anti-epileptic) ಔಷಧಿಗಳ ದೀರ್ಘಕಾಲೀನ ಬಳಕೆ
- ದೇಹದಲ್ಲಿ ವಿಟಮಿನ್ ಬಿ 6 ನ ಉತ್ಪಾದನೆಯಾಗದಿದ್ದಾಗ ಅಪರೂಪದ ಆನುವಂಶಿಕ ಚಯಾಪಚಯ ಕಾಯಿಲೆಯು (ಪಿರಿಡಾಕ್ಸಲ್ 5-ಫಾಸ್ಫೇಟ್-ಅವಲಂಬಿತ ಅಪಸ್ಮಾರ/ Pyridoxal 5-phosphate-dependent epilepsy) ಶಿಶುಗಳು ಜನಿಸಿದ ಕೂಡಲೇ ಮೂರ್ಛೆಯಂತಹ (ನವಜಾತ ಶಿಶುವಿನಲ್ಲಿ ಕಂಡುಬರುವ ಅಪಸ್ಮಾರ) ಸಮಸ್ಯೆಯನ್ನುಂಟು ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ನಿಯಮಿತ ಆಂಟಿಕಾನ್ವಲ್ಸೆಂಟ್‌ಗಳು (anticonvulsants) ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಆದರೆ, ಪಿರಿಡಾಕ್ಸಲ್ 5 ಫಾಸ್ಫೇಟ್ (pyridoxal 5 phosphate) ಅಥವಾ ಪಿರಿಡಾಕ್ಸಿನನ್ನು (pyridoxine) ಸೇವಿಸಿ ಸಮಸ್ಯೆಯನ್ನು ನಿಯಂತ್ರಿಸಬಹುದು. ಇವು ವಿಟಮಿನ್ ಬಿ 6 ನ ವಿಭಿನ್ನ ರೂಪಗಳಾಗಿದ್ದು, ಪೂರಕಗಳಾಗಿ ನೀಡಲಾಗುತ್ತದೆ.
ವಿಟಮಿನ್ ಬಿ6 ನ ಕೊರತೆಯಿಂದಾಗಿ ಉಂಟಾಗಬಹುದಾದ ಸಮಸ್ಯೆಗಳು
- ಮನಃಸ್ಥಿತಿ ಏರುಪೇರಾಗುವುದು ಮತ್ತು ಮಾನಸಿಕ ಕಿರಿಕಿರಿ ಉಂಟಾಗುವುದು
- ರೋಗನಿರೋಧಕ ಶಕ್ತಿ ಕಡಿಮೆಯಾಗಿ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುವುದು
- ಚೀಲೋಸಿಸ್ (Cheilosis): ಬಾಯಿಯ ಮೂಲೆಗಳಲ್ಲಿ, ತುಟಿಯಲ್ಲಿ ಬಿರುಕುಗಳು ಉಂಟಾಗಿ, ಅಗಿಯಲು ಮತ್ತು ಮಾತನಾಡಲು ಕಷ್ಟವಾಗುವುದು
- ಚರ್ಮದ ಮೇಲೆ ದದ್ದುಗಳು ಕಂಡು ಬರುವುದು
- ಗ್ಲೋಸಿಟಿಸ್ (Glossitis): ತುಟಿ ನಯವಾಗುವುದು, ನಾಲಿಗೆ ಕೆಂಪಾಗಿ ಊದಿಕೊಳ್ಳುವುದು
- ಪಿನ್ ಮತ್ತು ಸೂಜಿಗಳು ಚುಚ್ಚಿದಂತೆ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವುದು
- ಅಪಸ್ಮಾರ ಪದೇ ಪದೇ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದು
ಪಿರಿಡಾಕ್ಸಿನ್ ನ ಅತಿಯಾದ ಸೇವನೆ
- ಸುದೀರ್ಘ ಕಾಲ ವಿಟಮಿನ್ ಬಿ6 ಸೇವಿಸುವ ವ್ಯಕ್ತಿಗಳಲ್ಲಿ ಅಟಾಕ್ಸಿಯಾ (ataxia) ಹಾಗೂ ನರರೋಗದ ಸಮಸ್ಯೆಗಳುಂಟಾಗಬಹುದು ಅಥವಾ ಅವರು ತಮ್ಮ ದೇಹದ ಅಂಗಾಂಗಳ ಚಲನೆಯ ನಿಯಂತ್ರಣವನ್ನು ಕಳೆದುಕೊಳ್ಳಬಹುದು.
- ಚರ್ಮವು ಸೂರ್ಯನ ಬೆಳಕು ಅಥವಾ ಇತರ ರೀತಿಯ ನೇರಳಾತೀತ ಬೆಳಕಿಗೆ ಬಹಳ ಸೂಕ್ಷ್ಮವಾಗಿಬಿಡಬಹುದು ಹಾಗೂ ವಾಕರಿಕೆ ಮತ್ತು ಎದೆಯುರಿಯಂತಹ ಸಮಸ್ಯೆಗಳೂ ಸಹ ಕಂಡು ಬರಬಹುದು.
ವಿಟಮಿನ್ ಬಿ6 ಮತ್ತು ಇತರೆ ಔಷಧಿಗಳು
- ವಾಲ್ಪ್ರೊಯಿಕ್ ಆಮ್ಲ (valproic acid) ಅಥವಾ ಕಾರ್ಬಮಾಜೆಪೈನ್ (carbamazepine) ಮತ್ತು ಫೆನಿಟೋಯಿನ್ ನಂತಹ (phenytoin) ಅಪಸ್ಮಾರ ವಿರೋಧಿ ಔಷಧಿಗಳು ಪಿರಿಡಾಕ್ಸಿನ್ ನ ಚಯಾಪಚಯ ಸಾಮರ್ಥ್ಯವನ್ನು ಹೆಚ್ಚಿಸಿ, ವಿಟಮಿನ್ ಬಿ ನ ಮಟ್ಟ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ. ಇದರಿಂದ ಹೋಮೋಸಿಸ್ಟೈನ್‌ನ (homocysteine) ಮಟ್ಟ ಹೆಚ್ಚಾಗುತ್ತದೆ. ಆದರೆ, ಈ ಔಷಧಿಗಳ ತೀವ್ರತೆ ಮತ್ತು ಸೇವಿಸುವ ಅವಧಿಯನ್ನು ಕಡಿಮೆ ಮಾಡಬಹುದು. ದೀರ್ಘಾವಧಿಯರೆಗೆ ಈ ಔಷಧಿಗಳನ್ನು ಸೇವಿಸುವವರಿಗೆ ಪಿರಿಡಾಕ್ಸಿನ್ ಪೂರಕಗಳು ಬೇಕಾಗಬಹುದು.
- ಅಸ್ತಮಾ ಸಮಸ್ಯೆಗೆ ಥಿಯೋಫಿಲಿನ್, ಬ್ರಾಂಕೈಟಿಸ್ ಮತ್ತು ಎಂಫಿಸೆಮಾ (theophylline, bronchitis and emphysema) ಸೇವಿಸುವವರು ಅಥವಾ ಸೈಕ್ಲೋಸರೀನ್ (cycloserine – ಪ್ರತಿಜೀವಕ) ಅನ್ನು ಬಳಸುವ ಕ್ಷಯರೋಗಿಗಳಲ್ಲಿಯೂ ಸಹ ವಿಟಮಿನ್ ಬಿ 6 ಮಟ್ಟ ಕಡಿಮೆಯಾಗಬಹುದು. ಇದು ಅಪಸ್ಮಾರದಂತಹ ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ದೇಹದಲ್ಲಿ ವಿಟಮಿನ್ ಬಿ 6 ಕೊರತೆಯನ್ನು ಗುರುತಿಸುವುದು
ಪಿರಿಡಾಕ್ಸಿನ್ ಮಟ್ಟವನ್ನು ದೇಹದ ರಕ್ತ ಅಥವಾ ಮೂತ್ರದಿಂದ ನಿರ್ಧರಿಸಬಹುದು
ಚಿಕಿತ್ಸೆ
ಇತರೆ ಔಷಧಿಗಳನ್ನು ಸೇವಿಸುವವರು ಕಡಿಮೆ ಪ್ರಮಾಣದಲ್ಲಿ ಪಿರಿಡಾಕ್ಸಿನ್ ಅನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ಅದರೊಂದಿಗೆ ವಿಟಮಿನ್ ಬಿ 6 ನ ಪೂರಕಗಳನ್ನು ಸೇವಿಸಬೇಕು. ವಿಟಮಿನ್ ಅಥವಾ ಪೌಷ್ಠಿಕಾಂಶದ ಕೊರತೆ ಅಥವಾ ರಕ್ತಹೀನತೆಯುಳ್ಳ ವ್ಯಕ್ತಿಗಳಿಗೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಮತ್ತು ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.
ಉಲ್ಲೇಖಗಳು
ಆಂತರಿಕ ಲಿಂಕ್ ಗಳು
- https://ods.od.nih.gov/factsheets/VitaminB6-HealthProfessional/
- https://www.healthline.com/nutrition/vitamin-b6-deficiency-symptoms#section10
- https://www.mayoclinic.org/drugs-supplements-vitamin-b6/art-20363468
ಆಂತರಿಕ ಲಿಂಕ್ ಗಳು
- Pyridoxal 5 Phosphate Dependent Epilepsy
Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore