ಮಕ್ಕಳ ಪಾಲನೆಯಲ್ಲಿ, ಅದರಲ್ಲೂ ವಿಶೇಷವಾಗಿ ಶಿಶುಗಳು ಮತ್ತು ಅತಿ ಚಿಕ್ಕ ಮಕ್ಕಳ ಪೋಷಣೆಯಲ್ಲಿ ನಿದ್ರೆಯ ಅಭ್ಯಾಸವನ್ನು ರೂಪಿಸುವುದು ಅತ್ಯಂತ ಸವಾಲಿನ ಅಂಶ. ಮಗು ಜನಿಸಿದ ಮೊದಲ ಆರು ತಿಂಗಳಲ್ಲಿ ಅದರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸಮಯಗಳಲ್ಲಿ ಹಾಲುಣಿಸಬೇಕಾಗುತ್ತದೆ. ಹಾಗಾಗಿ, ಮಗುವು ನಿಯಮಿತ ಸಮಯಕ್ಕೆ ನಿದ್ರಿಸುವಂತೆ ಅಭ್ಯಾಸ ಮಾಡಿಸುವುದು ಕಠಿಣವೇ ಸರಿ! ಮಗುವಿಗೆ ಸೂಕ್ತ ನಿದ್ರೆಯ ದಿನಚರಿಯನ್ನು ರೂಪಿಸಿ ಪ್ರತಿದಿನ ಸಾಕಷ್ಟು ಸಮಯ ನಿದ್ರೆಯನ್ನು ಮಾಡುವಂತೆ ಮಾಡುವುದು ಬಹು ಮುಖ್ಯ. ಇದು ಬಹಳಷ್ಟು ಅನುಕೂಲಗಳನ್ನು ಹೊಂದಿರುವುದರಿಂದ ಪೋಷಕರ ಶ್ರಮ ವ್ಯರ್ಥವಾಗದು.
2016 ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (American Academy of Sleep Medicine – AASM) ವಿವಿಧ ವಯೋಮಾನದ ಮಕ್ಕಳಿಗೆ ಅಗತ್ಯವಿರುವ ಒಟ್ಟು ನಿದ್ರಾ ಸಮಯವನ್ನು ವಿವರಿಸುವ ಪಟ್ಟಿಯನ್ನು ನೀಡಿತು. ಅದರ ವಿವರ ಹೀಗಿದೆ:
ಮಗು ದಿನವೊಂದರಲ್ಲಿ ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡುತ್ತದೆ ಎಂಬುದರ ಜೊತೆಗೆ ನಿದ್ರೆಯ ಗುಣಮಟ್ಟಕ್ಕೂ ಗಮನ ಕೊಡುವುದು ಮುಖ್ಯವಾಗುತ್ತದೆ. ಇದು ಮಗುವು ಆರೋಗ್ಯಕರ ನಿದ್ರೆ ಮಾಡುತ್ತಿದೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಮಗುವು ಸಾಕಷ್ಟು ಕಿರು ನಿದ್ದೆಗಳು ಹಾಗೂ ಯಾವುದೇ ಅಡೆತಡೆಯಿಲ್ಲದೆ ನಿರಂತರ ನಿದ್ರೆಯನ್ನು ಮಾಡುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವುದರಿಂದ ಮಗುವಿನ ಆಂತರಿಕ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ನಿದ್ರೆಯ ದಿನಚರಿಯನ್ನು ರೂಪಿಸುವುದು ಸುಲಭ.
ನಿದ್ರೆಯ ದಿನಚರಿಯಿಂದಾಗುವ ಅನುಕೂಲಗಳು
1. ಮಗುವು ಚೆನ್ನಾಗಿ ವಿಶ್ರಾಂತಿ ಪಡೆಯುತ್ತದೆ ಹಾಗೂ ಸಂತೋಷ ಮತ್ತು ಲವಲವಿಕೆಯಿಂದ ಕೂಡಿರುತ್ತದೆ.
2. ಭಾವನಾತ್ಮಕವಾಗಿ ಉತ್ತಮ ನಿಯಂತ್ರಣ ಹೊಂದಿರುತ್ತದೆ, ಸಿಡಿಮಿಡಿಗೊಳ್ಳುವುದಿಲ್ಲ.
3. ಚಟುವಟಿಕೆಗಳು, ಶಾಲೆಯ ಆಟ-ಪಾಠಗಳಲ್ಲಿ ಏಕಾಗ್ರತೆಯಿಂದ ಭಾಗವಹಿಸುತ್ತದೆ.
4. ಮಗುವು ಹಗಲಿನಲ್ಲಿ ಸಾಕಷ್ಟು ಆಟ-ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಯಾಸಗೊಳ್ಳದಿದ್ದಲ್ಲಿ ರಾತ್ರಿ ವೇಳೆ ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿದ್ರಾಹೀನತೆ ಉಂಟಾಗುವುದರಿಂದ ಬೆಳಗಿನ ವೇಳೆಯಲ್ಲಿ ಶಾಲೆಯ ಆಟ-ಪಾಠಗಳು ಹಾಗೂ ಇತರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಾರೆ.
ಹೀಗೆ ನಿದ್ರೆಯ ದಿನಚರಿಯಲ್ಲಿ ವ್ಯತ್ಯಾಸವಾದಾಗ ಮಗುವು ಸಣ್ಣ-ಸಣ್ಣ ವಿಷಯಗಳಿಗೂ ಕಿರಿಕಿರಿಗೊಳ್ಳುತ್ತದೆ, ತಾಳ್ಮೆ ಕಳೆದುಕೊಳ್ಳುತ್ತದೆ ಹಾಗೂ ಗಲಾಟೆ ಸ್ವಭಾವ, ಕಾರಣವಿಲ್ಲದೆ ಅಳುವ ಮನಸ್ಥಿತಿ ಬೆಳೆಸಿಕೊಳ್ಳುತ್ತದೆ. ನಿದ್ರೆಯ ದಿನಚರಿಯಲ್ಲಿನ ಸಣ್ಣ ಬದಲಾವಣೆಗಳಿಂದಾಗಿ ಉಂಟಾಗುವ ದೀರ್ಘಕಾಲದ ನಿದ್ರಾಹೀನತೆಯು ಮಗುವಿನ ಮನಸ್ಥಿತಿ, ವರ್ತನೆ ಮತ್ತು ಏಕಾಗ್ರತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಮಗುವು ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾದರೆ, ಮರುದಿನ ಖುಷಿಯಾಗಿ ತನ್ನ ಕೆಲಸ-ಆಟ-ಪಾಠಗಳಲ್ಲಿ ತೊಡಗಲು ಅನುಕೂಲವಾಗುತ್ತದೆ.
ಇನ್ನು ನಿದ್ರಾಹೀನತೆಯಿಂದಾಗಿ ಹದಿಹರೆಯದವರಲ್ಲಿ ಅಸಮರ್ಪಕ ನಿದ್ರೆ, ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳು ಹೆಚ್ಚಾಗಬಹುದು. ಆದರೆ, ನಿಗದಿತ ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವುದು ಸಹ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಆದ್ದರಿಂದ, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ನಿದ್ರಾ ವೇಳಾಪಟ್ಟಿಯನ್ನು ರೂಪಿಸುವುದು ಒಳ್ಳೆಯದು. ಇದು ವಿವಿಧ ಹಂತಗಳನ್ನು ಒಳಗೊಳ್ಳುತ್ತದೆ.
1. ಪೌಷ್ಠಿಕಾಂಶವುಳ್ಳ ಆಹಾರ ಸೇವನೆ
ಮಗುವು ಹಗಲಿನಲ್ಲಿ ಸೇವಿಸುವ ಆಹಾರ ಮತ್ತು ಪಾನೀಯವು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ.
• ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವುದು ಅಜೀರ್ಣಕ್ಕೆ ಕಾರಣವಾಗಬಹುದು
• ಕೋಲಾಸ್, ಫಿಜ್ಜಿ ಡ್ರಿಂಕ್ಸ್ ಅಥವಾ ಸೋಡಾಗಳಂತಹ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಕುಡಿಯುವುದರಿಂದ ಕೆಫೀನ್ ಮಟ್ಟ ಹೆಚ್ಚಾಗಬಹುದು. ಕಾಫಿ ಮತ್ತು ಚಹಾದಲ್ಲಿಯೂ ಕೆಫೀನ್ ಅಂಶ ಹೆಚ್ಚಾಗಿರುವುದರಿಂದ ಊಟದ ನಂತರ ಇದರ ಸೇವನೆಯನ್ನು ಮಿತಿಗೊಳಿಸಬೇಕು. ಏಕೆಂದರೆ, ಕೆಫೀನ್ ಉತ್ತೇಜಕ ಅಂಶವುಳ್ಳ ಪದಾರ್ಥವಾಗಿದ್ದು, ಮಗುವಿನ ನಿದ್ರೆಗೆ ತೊಂದರೆಯನ್ನುಂಟು ಮಾಡಬಹುದು.
• ಬೆಚ್ಚಗಿನ ಹಾಲಿನ ಸೇವನೆಯು ಮಕ್ಕಳು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
2. ದೈಹಿಕ ಚಟುವಟಿಕೆ
ಮಗುವು ಹಗಲಿನಲ್ಲಿ ಕ್ರೀಡೆ ಅಥವಾ ಹೊರಾಂಗಣ ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ಹಾಗೂ ತಾಜಾ ಗಾಳಿಯಲ್ಲಿ ನಡೆಯುವುದರಿಂದ ಹೆಚ್ಚುವರಿ ಶಕ್ತಿ ವ್ಯಯವಾಗುತ್ತದೆ. ಇದರಿಂದ ಮಗುವು ಸಾಕಷ್ಟು ದಣಿಯುವುದರಿಂದ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡುತ್ತದೆ. ಆದರೆ, ಮಲಗುವ ಸ್ವಲ್ಪ ಸಮಯದ ಮುನ್ನ ವ್ಯಾಯಾಮ ಮಾಡಬಾರದು. ಏಕೆಂದರೆ, ಇದು ಮಗುವಿನಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿ ನಿದ್ರಾ ಸಮಯವನ್ನು ಮತ್ತಷ್ಟು ನಿಧಾನಗೊಳಿಸಬಹುದು.
3. ಸುತ್ತಮುತ್ತಲಿನ ಪರಿಸರ
ಮಗುವಿನ ವೈಯಕ್ತಿಕ ಸ್ವಭಾವವನ್ನು ಪರಿಗಣಿಸಿ ನಿದ್ರೆಯ ವಾತಾವರಣದಲ್ಲಿ ಕೆಲವು ಬದಲಾವಣೆ ಮಾಡಬಹುದು. ಉದಾಹರಣೆಗೆ, ಕೆಲವು ಮಕ್ಕಳು ಕತ್ತಲಿಗೆ ಹೆದರಬಹುದು, ಹಾಗಾಗಿ, ಸ್ವಲ್ಪ ಬೆಳಕಿದ್ದಲ್ಲಿ, ಅವರು ನಿದ್ರಿಸುತ್ತಾರೆ. ಆದರೆ, ಇನ್ನು ಕೆಲವು ಮಕ್ಕಳು ಕತ್ತಲೆಯಲ್ಲಿ ಮಲಗಲು ಬಯಸುತ್ತಾರೆ.
ಕೋಣೆಯ ಉಷ್ಣಾಂಶ ಮತ್ತು ಶಬ್ದ ಮಟ್ಟವನ್ನು ಮಗುವಿನ ಅಗತ್ಯಕ್ಕೆ ತಕ್ಕಂತೆ ಸರಿಹೊಂದಿಸಬೇಕು. ಕೋಣೆಯಲ್ಲಿ ಮಕ್ಕಳ ಕೈಗೆ ಸುಲಭವಾಗಿ ಸಿಗುವಂತಹ ಆಟಿಕೆಗಳು ಇರಬಾರದು. ಇದರಿಂದ ಮಗುವು ನಿದ್ರಿಸಲು ಬಯಸದೆ ಕೇವಲ ಆಟವಾಡುತ್ತಾ ಇರಲು ಇಚ್ಛಿಸಬಹುದು.
4. ವೇಳಾಪಟ್ಟಿ
ಮಕ್ಕಳಲ್ಲಿ ನಿಗದಿತ ವೇಳೆಗೆ ನಿದ್ರಿಸುವ ಪರಿಪಾಠವನ್ನು ಬೆಳೆಸುವುದರಿಂದ ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ರೂಪಿಸುವುದು ಬಹು ಸುಲಭ. ನಿದ್ರೆಯ ದಿನಚರಿಯು ಮಲಗುವ ಮುಂಚಿನ ನಿಗದಿತ ಸಮಯದ ಅರ್ಧ ಘಂಟೆಯಿಂದ ಪ್ರಾರಂಭಿಸಿ ಎರಡು ಗಂಟೆಗಳಿಷ್ಟರಬಹುದು. ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಆರಾಮಾಗಿ ನಿದ್ರಿಸಲು ಸಹಕರಿಸುವ ಪೈಜಾಮಾಗಳಂತಹ ಸೂಕ್ತ ಬಟ್ಟೆಗಳನ್ನು ಧರಿಸುವುದು, ಕಿರಿಯ ಮಕ್ಕಳಾಗಿದ್ದಲ್ಲಿ ಕಥೆಯನ್ನು ಓದಿ ಹೇಳುವುದರಿಂದಲೂ ಸಹ ನಿದ್ರೆಯ ಅಭ್ಯಾಸವನ್ನು ರೂಢಿಸಬಹುದು. ರಾತ್ರಿಯ ವೇಳೆ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ಏಳುವುದನ್ನು ತಪ್ಪಿಸಲು ಮಗುವು ಮಲಗುವ ಮುನ್ನ ಅವೆಲ್ಲವನ್ನು ಪೂರ್ಣಗೊಳಿಸುವಂತೆ ಮಾಡಿ. ಈ ವೇಳಾಪಟ್ಟಿಯನ್ನು ಪಾಲಿಸುವುದು ಮಕ್ಕಳಿಗೆ ನಿದ್ರೆಯ ಮೊದಲು ಮನಸ್ಸು ಸಮಾಧಾನದಿಂದಿರಲು ಸಹಾಯ ಮಾಡುತ್ತದೆ.
5. ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನ
ಮಲಗುವ ಮುನ್ನ ಟಿವಿಗಳು, ಟ್ಯಾಬ್ಲೆಟ್, ಫೋನ್‌ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯು ಮಕ್ಕಳ ಮಿದುಳಿಗೆ ವಿಶ್ರಾಂತಿ ನೀಡುವ ಬದಲು ಉತ್ತೇಜಿಸುತ್ತದೆ. ಇದು ಮಗುವು ನಿದ್ರಿಸುವ ಸಮಯವನ್ನು ಇನ್ನಷ್ಟು ನಿಧಾನವಾಗಿಸುತ್ತದೆ. ಹಾಗಾಗಿ, ಮಲಗುವ ಮೊದಲು ಮಕ್ಕಳಿಗೆ ಗ್ಯಾಜೆಟ್ ಗಳನ್ನು ನೀಡದಿರಿ.
6 ಶಾಂತ ಮನಸ್ಥಿತಿ
ಸಣ್ಣ ಮಕ್ಕಳು ಆಗಾಗ್ಗೆ ಎಚ್ಚರಗೊಳ್ಳುವ ಅಭ್ಯಾಸ ಹೊಂದಿದ್ದರೆ, ವಿಶೇಷವಾಗಿ ರಾತ್ರಿ ಸಮಯದಲ್ಲಿ ಅನೇಕ ಬಾರಿ ಎಚ್ಚರಗೊಳ್ಳುತ್ತಿದ್ದರೆ, ಅವರನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದು ಒಂದು ರೀತಿಯಲ್ಲಿ ಸುಲಭ ವಿಧಾನವೆನಿಸಬಹುದು. ಆದರೆ, ಈ ರೀತಿ ಮಾಡುವುದರಿಂದ ಮಗುವಿಗೆ ತನ್ನಂತಾನೇ ನಿದ್ರಿಸುವ ಅಭ್ಯಾಸವನ್ನು ರೂಢಿಸಲು ಕಷ್ಟವಾಗುತ್ತದೆ. ಹಾಗಾಗಿ, ಮಗುವು ನಿದ್ರೆಯ ಮಧ್ಯದಲ್ಲಿ ಆಗಾಗ್ಗೆ ಏಳುತ್ತಿದ್ದರೂ ಸಹ, ಅವರನ್ನು ಅವರ ಹಾಸಿಗೆಯಲ್ಲಿಯೇ ಮಲಗಲು ಪ್ರೋತ್ಸಾಹಿಸುವುದು ಉತ್ತಮ. ಇದರಿಂದ ಮಗುವು ಪೋಷಕರ ಸಹಾಯವಿಲ್ಲದೆ ತನ್ನಷ್ಟಕ್ಕೆ ತಾನೇ ಶಾಂತ ಮನಸ್ಥಿತಿಯಿಂದ ಮಲಗಲು ಅಭ್ಯಾಸ ಮಾಡಿಕೊಳ್ಳುತ್ತದೆ.
ಇತರ ಒಳ್ಳೆಯ ವಿಷಯಗಳನ್ನು ಕಲಿತಾಗ ಮಗುವನ್ನು ಪ್ರೋತ್ಸಾಹಿಸಿದಂತೆ, ಮಗುವು ತನ್ನ ಹಾಸಿಗೆಯಲ್ಲಿ ತನ್ನಂತಾನೇ ಮಲಗಲು ಪ್ರಾರಂಭಿಸಿದಾಗ, ಪ್ರೋತ್ಸಾಹದ ಮಾತುಗಳನ್ನಾಡುವುದು, ಶಬ್ಬಾಶ್ ಗಿರಿ ನೀಡುವುದು ಒಳ್ಳೆಯದು.
ಮಕ್ಕಳಿಗೆ ಉತ್ತಮ ನಿದ್ರೆಯ ಅಭ್ಯಾಸವನ್ನು ರೂಢಿಸಲು ಮತ್ತು ಅವರ ಆರೋಗ್ಯಕರ ನಿದ್ರೆಯ ಕುರಿತು ಸಲಹೆ-ಸೂಚನೆಗಳಗಾಗಿ ಮಕ್ಕಳ ನರವಿಜ್ಞಾನಿಗಳನ್ನು ಸಂಪರ್ಕಿಸಬಹುದು.
ಮಗುವಿನಲ್ಲಿ ನಿದ್ರೆಗೆ ಸಂಬಂಧಿಸಿದಂತೆ ಸಮಸ್ಯೆಯಿದೆಯೇ ಎಂಬುದನ್ನು ನಿರ್ಣಯಿಸಲು ವಿವಿಧ ಪರಿಕರಗಳು ಲಭ್ಯವಿದೆ, ಅವುಗಳಲ್ಲಿ ಕೆಲವು ಹೀಗಿವೆ:
• ಅಡಾಲಸೆಂಟ್ ಸ್ಲೀಪ್ ಹೈಜೀನ್ (American Academy of Sleep Medicine (AASM)
• ಪೀಟರ್ಸ್ ಬರ್ಗ್ ಸ್ಲೀಪ್ ಕ್ವಾಲಿಟಿ ಇಂಡೆಕ್ಸ್ Pittsburgh Sleep Quality Index (PSQI)
• ಸ್ಲೀಪ್ ಡಿಸ್ಟರ್ಬನ್ಸ್ ಸ್ಕೇಲ್ ಫಾರ್ ಚಿಲ್ಡ್ರನ್ (Sleep Disturbance Scale for Children (SDSC)
• ಪೀಡಿಯಾರ್ಟಿಕ್ ಡೇ ಟೈಮ್ ಸ್ಲೀಪೀನೆಸ್ ಸ್ಕೇಲ್ Paediatric Daytime Sleepiness Scale (PDSS)
ಈ ಮೇಲೆ ತಿಳಿಸಿರುವ ಸಾಧನಗಳು ನಿದ್ರೆಯ ಚಿಕಿತ್ಸಾಲಯಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರ ನಿದ್ರೆಯ ಅಭ್ಯಾಸವನ್ನು ಮೌಲ್ಯಮಾಪನ ಮಾಡಲು ಬಳಸುವ ಪ್ರಶ್ನಾವಳಿ ಸಾಧನಗಳು. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ ಅಸಹಜ ನಿದ್ರೆಯ ಮಾದರಿಗಳನ್ನು ಸರಿಪಡಿಸಬಹುದೇ ಅಥವಾ ಇತರ ನಿದ್ರಾಹೀನತೆಗೆ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ಸಹ ಇವುಗಳ ಮೂಲಕ ತಿಳಿದುಕೊಳ್ಳಬಹುದು.
ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.
2016 ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (American Academy of Sleep Medicine – AASM) ವಿವಿಧ ವಯೋಮಾನದ ಮಕ್ಕಳಿಗೆ ಅಗತ್ಯವಿರುವ ಒಟ್ಟು ನಿದ್ರಾ ಸಮಯವನ್ನು ವಿವರಿಸುವ ಪಟ್ಟಿಯನ್ನು ನೀಡಿತು. ಅದರ ವಿವರ ಹೀಗಿದೆ:
ಮಕ್ಕಳ ವಯಸ್ಸು ಶಿಫಾರಸು | ಮಾಡಲಾದ ನಿದ್ರೆಯ ಸಮಯ (24 ಗಂಟೆಗಳು) |
---|---|
ಶಿಶು to 12 ತಿಂಗಳು | 12 to 16 ಗಂಟೆಗಳು |
ಮಕ್ಕಳು 1 to 2 ವಯಸ್ಸಿನವರು | 11 to 14 ಗಂಟೆಗಳು |
ಮಕ್ಕಳು 3 to 5 ವಯಸ್ಸಿನವರು | 10 to 13 ಗಂಟೆಗಳು |
ಮಕ್ಕಳು 6 to 12 ವಯಸ್ಸಿನವರು | 9 to 12 ಗಂಟೆಗಳು |
ಹದಿಹರೆಯದವರು 13 to 18 ವಯಸ್ಸಿನವರು | 8 to 10 ಗಂಟೆಗಳು |

ಉಲ್ಲೇಖಗಳು/ ಆಕರಗ್ರಂಥ
1. https://www.gosh.nhs.uk/medical-information/procedures-and-treatments/sleep-hygiene-children
2. https://aasm.org/resources/pdf/pediatricsleepdurationconsensus.pdf

ಹಿಂದಿನ ಲಿಂಕ್ ಗಳು
1. Good quality sleep: https://www.stanfordchildrens.org/en/service/sleep-disorders/good-night-sleep
2. https://www.healthychildren.org/English/healthy-living/sleep/Pages/Healthy-Sleep-Habits-How-Many-Hours-Does-Your-Child-Need.aspx
Google Keywords reference

Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore