ಬೆಳವಣಿಗೆಯ ಹಂತದಲ್ಲಿ ಮಕ್ಕಳು ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವುದು ಬಹಳ ಮುಖ್ಯ. ಮಕ್ಕಳಿಗೆ ಆರೋಗ್ಯಕರ ಆಹಾರ ಲಭ್ಯವಾಗದಿದ್ದಲ್ಲಿ, ವಿವಿಧ ರೀತಿಯ ಅಪೌಷ್ಠಿಕತೆಯಿಂದ ಬಳಲುತ್ತಾರೆ. ಅವುಗಳಲ್ಲಿ ಪ್ರಮುಖವಾದುದು, ವಿಟಮಿನ್ ಬಿ 1 ಅಥವಾ ಥಯಾಮಿನ್ ನ ಕೊರತೆ.
ದೇಹಕ್ಕೆ ದಿನನಿತ್ಯ ಅಗತ್ಯವಿರುವ ಥಯಾಮಿನ್ ನ ಪ್ರಮಾಣ
ಶಿಫಾರಸು ಮಾಡಲಾದ ಥಯಾಮಿನ್‌ನ ದೈನಂದಿನ ಪ್ರಮಾಣ
ಥಯಾಮಿನ್ ನ ಮೂಲಗಳು
ಥಯಾಮಿನ್ ನ ನೈಸರ್ಗಿಕ ಮೂಲಗಳು
• ಧಾನ್ಯಗಳು,
• ಕಂದು ಅಕ್ಕಿ
• ಕಾಳುಗಳು
• ಬೀಜಗಳು
• ಮಾಂಸ
• ಮೀನು
ಭಾರತದಲ್ಲಿ, ಈ ಕೆಳಗಿನ ಪದಾರ್ಥಗಳಲ್ಲಿ ಥಯಾಮಿನ್ ಸಮೃದ್ಧವಾಗಿ ಲಭ್ಯವಿವೆ
• ಎಳ್ಳು
• ಸೋಯಾ ಹುರುಳಿ ಬೀಜಗಳು
• ಸಾಸಿವೆ ಅಥವಾ ಎಣ್ಣೆ
• ಗೋಡಂಬಿ
ಥಯಾಮಿನ್ ನ ಪೂರಕಗಳು
• ಫಾರ್ಮುಲಾ ಹಾಲು ಮತ್ತು ಸಿರಿಧಾನ್ಯಗಳು
• ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ಮಕ್ಕಳು ಅಥವಾ ವಯಸ್ಸಾದ ರೋಗಿಗಳಿಗೆ ಪೂರಕ ವಿಟಮಿನ್ ನ ಅಗತ್ಯ ಉಂಟಾಗಬಹುದು
ಥಯಾಮಿನ್ ನ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
ಥಯಾಮಿನ್, ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವ ಮೂಲಕ ದೇಹದಲ್ಲಿ ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಜೀವಕೋಶಗಳ ಬೆಳವಣಿಗೆಗೆ ಮತ್ತು ಕಾರ್ಯನಿರ್ವಹಣೆಗೆ ಸಹಕಾರಿ. ಥಯಾಮಿನ್ ನ ಸೇವನೆಯಿಂದ ವಯಸ್ಕರಲ್ಲಿ ವರ್ನಿಕೆ- ಕೊರ್ಸಕಾಫ್ ಸಿಂಡ್ರೋಮ್ ಅನ್ನು (Wernicke- Korsakoff syndrome) ತಡೆಗಟ್ಟಬಹುದು ಮತ್ತು ದೇಹದಲ್ಲಿ ಥಯಾಮಿನ್ ನ ಕೊರತೆ ಉಂಟಾಗುವುದನ್ನು ತಪ್ಪಿಸಬಹುದು.
ದೇಹದಲ್ಲಿ ಥಯಾಮಿನ್ ಕೊರತೆ
• ವಿಟಮಿನ್ ಬಿ 1 ಅಂಶ ಕಡಿಮೆಯುಳ್ಳ ಪಾಲಿಶ್ ಮಾಡಿದ ಬಿಳಿ ಅಕ್ಕಿಯನ್ನು ಪ್ರಮುಖವಾಗಿ ಬಳಸುವ ಪ್ರದೇಶಗಳ ಜನರಲ್ಲಿ ಥಯಾಮಿನ್ ಕೊರತೆ ಕಂಡುಬರುತ್ತದೆ.
• ಸ್ತನ್ಯಪಾನ್ಯ ಮಾಡಿಸುವ ತಾಯಂದಿರಲ್ಲಿ ಪೌಷ್ಠಿಕಾಂಶದ ಕೊರತೆಯಿದ್ದಲ್ಲಿ, ಅವರ ಮಕ್ಕಳಲ್ಲಿ ಥಯಾಮಿನ್ ಕೊರತೆ ಉಂಟಾಗಬಹುದು.
• ಹೊಟ್ಟೆ ಅಥವಾ ಕರುಳಿನ ಒಳಪದರ, ದೀರ್ಘಕಾಲದ ಅತಿಸಾರ ಅಥವಾ ವಾಂತಿಯ ಸಮಸ್ಯೆಗಳಿಂದಾಗಿ ಆಹಾರದಿಂದ ಪೋಷಕಾಂಶಗಳನ್ನು ಹೀರುವ ಸಾಮರ್ಥ್ಯ ಕಡಿಮೆಯಾಗುವುದರಿಂದಲೂ ಸಹ ಈ ಥಯಾಮಿನ್ ಕೊರತೆ ಉಂಟಾಗಬಹುದು.
ಸಾಮಾನ್ಯವಾಗಿ ದೀರ್ಘಕಾಲದವರೆಗೆ ಆಲ್ಕೊಹಾಲ್ ಸೇವಿಸುವ ವಯಸ್ಕರಲ್ಲಿ ಥಯಾಮಿನ್ ಕೊರತೆಯಿಂದಾಗಿ ಮೆದುಳು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತದೆ ಹಾಗೂ ಇದನ್ನು ವರ್ನಿಕೀಸ್ ಎನ್ಸೆಫಲೋಪತಿ (Wernicke’s Encephalopathy) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಕೆಲವೊಮ್ಮೆ ನೆನಪಿನ ಶಕ್ತಿ ಮತ್ತು ದೃಷ್ಟಿಯ ಸಮಸ್ಯೆಗಳಿಗೆ ಕಾರಣವಾಗುವ ಕೊರ್ಸಕಾಫ್ ಸಿಂಡ್ರೋಮ್ (Korsakoff syndrome) ಜೊತೆಗೆ ಕಂಡು ಬರುತ್ತಿತ್ತು. ಇದನ್ನು ವರ್ನಿಕೀ- ಕೊರ್ಸಕಾಫ್ ಸಿಂಡ್ರೋಮ್ (Wernicke- Korsakoff syndrome) ಎಂದು ಗುರುತಿಸಲಾಗಿದೆ.
ಥಯಾಮಿನ್ ಕೊರತೆಯಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದಾದ ವಿವಿಧ ರೋಗ ಲಕ್ಷಣಗಳು
ಅ. ಆರಂಭಿಕ ಲಕ್ಷಣಗಳು ಸಣ್ಣ ಮಟ್ಟದಲ್ಲಿರಬಹುದು. ಕಿರಿಕಿರಿ ಎನಿಸುವುದು, ಆಹಾರವನ್ನು ನಿರಾಕರಿಸುವುದು, ವಾಂತಿ, ಮಲಬದ್ಧತೆ, ಉಸಿರಾಟದ ತೊಂದರೆ, ಜೋರಾಗಿ ಅಳುವುದು ಇತರೆ. ಧ್ವನಿ ತಂತುಗಳ (vocal cords) ಪಾರ್ಶ್ವವಾಯುವಿನಿಂದ ಅಫೋನಿಯಾ ಕಾಣಿಸಿಕೊಳ್ಳಬಹುದು
ಆ. ತೀವ್ರ ಮಟ್ಟದ ಲಕ್ಷಣಗಳು
• ಅಪಸ್ಮಾರ
• ಪ್ರಜ್ಞೆ ಕಡಿಮೆಯಾಗುವುದು
• ಸ್ನಾಯು ನೋವು
• ಸ್ನಾಯು ಕೃಶವಾಗುವುದು
• ಅಟಾಕ್ಸಿಯಾ (Ataxia – ಸ್ನಾಯು ಸಮನ್ವಯದ ಕೊರತೆ)
• ಕಣ್ಣಿನಲ್ಲಿ ನಿಸ್ಟಾಗ್ಮಸ್ (Nystagmus) ಮತ್ತು ಟೋಸಿಸ್ (ptosis) ನಂತಹ – (ಇಳಿಬಿದ್ದ ಕಣ್ಣುರೆಪ್ಪೆಗಳು) ಅಸಹಜ ಬದಲಾವಣೆಗಳು,
• ಯಾವುದರ ಆಲೋಚನೆಯೂ ಇಲ್ಲದೆ ಸುಮ್ಮನೆ ಏನನ್ನಾದರೂ ನೋಡುವುದು/ ಅರ್ಥರಹಿತ ನೋಟ ಹಾಗೂ ಆಲಸ್ಯ
• ಚಿಕಿತ್ಸೆ ಪಡೆಯದಿದ್ದಲ್ಲಿ ಹೃದಯ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು
ಥಯಾಮಿನ್ ಕೊರತೆಯಿದ್ದಲ್ಲಿ ಆದಷ್ಟು ಬೇಗನೇ ತಪಾಸಣೆಗೊಳಪಟ್ಟು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಚಿಕಿತ್ಸೆಯ ನಂತರವೂ ಕೆಲವರಲ್ಲಿ ಬೌದ್ಧಿಕ ಅಸಾಮರ್ಥ್ಯ, ಅಪಸ್ಮಾರ ಅಥವಾ ಶ್ರವಣ ಸಮಸ್ಯೆಗಳು ಉಳಿದುಕೊಳ್ಳಬಹುದು.
ದೇಹದಲ್ಲಿ ಥಯಾಮಿನ್ ಕೊರತೆಯನ್ನು ಗುರುತಿಸುವುದು
ರೋಗಿಗಳ ವೈದ್ಯಕೀಯ ತಪಾಸಣೆ ಜೊತೆಗೆ, ದೇಹದಲ್ಲಿನ ಸೀರಮ್ ಅಥವಾ ಪ್ಲಾಸ್ಮಾವನ್ನು (serum/ plasma) ಪರೀಕ್ಷಿಸುವ ಮೂಲಕ ಥಯಾಮಿನ್ ರಕ್ತದ ಮಟ್ಟವನ್ನು ನಿರ್ಧರಿಸಬಹುದು. ಚಯಾಪಚಯ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ತಿಳಿಯಲು ಥಯಾಮಿನ್ ಮೊನೊಫಾಸ್ಫೇಟ್ (ThMP) ಮತ್ತು ಥಯಾಮಿನ್ ಡಿಫಾಸ್ಫೇಟ್ (Thiamine Monophosphate (ThMP) & Thiamine Diphosphate (ThDP)) ಮತ್ತು ಎರಿಥ್ರೋಸೈಟ್ ಟ್ರಾನ್ಸ್‌ಕೆಟೋಲೇಸ್ (erythrocyte transketolase (ETK)) ನಂತಹ ಪರೀಕ್ಷೆಗಳನ್ನು ಸಹ ಮಾಡಬಹುದು.
ಥಯಾಮಿನ್ ಕೊರತೆಗೆ ಚಿಕಿತ್ಸೆ
• ಥಯಾಮಿನ್ ಪೂರಕಗಳನ್ನು ಸಾಧ್ಯವಾದಷ್ಟು ಬೇಗನೆ ಬಾಯಿಯ ಮೂಲಕ ಅಥವಾ ಇಂಜೆಕ್ಷನ್ ರೂಪದಲ್ಲಿ ಸ್ನಾಯುಗಳಿಗೆ/ ರಕ್ತನಾಳಕ್ಕೆ ನೀಡಬೇಕು. ದೇಹದಲ್ಲಿ ಥಯಾಮಿನ್ ನ ಸಮರ್ಪಕ ಮಟ್ಟವನ್ನು ಕಾಪಾಡಿಕೊಳ್ಳಲು ಬಲವರ್ಧಿತ (ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿದ ಸಮೃದ್ಧ ಆಹಾರ – ಸಿರಿಧಾನ್ಯ ಇತರೆ) ಆಹಾರವನ್ನು ಸೇವಿಸಬೇಕು.
• ಸ್ತನ್ಯಪಾನ್ಯ ಮಾಡಿಸುವ ತಾಯಂದಿರಿಗೆ ಸೂಕ್ತವಾದ ಪೌಷ್ಠಿಕಾಂಶ ಆಹಾರವನ್ನು ಸೇವಿಸುವಂತೆ ಸೂಚಿಸಬೇಕು. ಅಗತ್ಯವಿದ್ದಲ್ಲಿ, ಮಗುವಿಗೆ ಫಾರ್ಮುಲಾ ಹಾಲನ್ನು ನೀಡುವಂತೆ ತಿಳಿಸಬೇಕು.
• ಥಯಾಮಿನ್ ನ ಕೊರತೆಯಿಂದಾಗಿ ಮಕ್ಕಳಲ್ಲಿ ಕಂಡು ಬರುವ ನರ-ಬೆಳವಣಿಗೆ ಸಮಸ್ಯೆಗಳು ಅಥವಾ ಅಪಸ್ಮಾರದಂತ ಯಾವುದೇ ದೀರ್ಘಕಾಲೀನ ಸಮಸ್ಯೆಗಳಿಗೆ ನರವಿಜ್ಞಾನಿಗಳು ನೆರವು ಪಡೆಯಬಹುದು.
• ಮಕ್ಕಳಲ್ಲಿ ವಿಟಮಿನ್ ಕೊರತೆಯನ್ನು ಸರಿಪಡಿಸಲು ಉತ್ತಮ ಆಹಾರಕ್ರಮವನ್ನು ಅನುಸರಿಸುವುದು ಮುಖ್ಯ. ಉತ್ತಮ ಪೌಷ್ಠಿಕಾಂಶವುಳ್ಳ ಆಹಾರದ ಸೇವನೆಯ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕು. ಜೊತೆಗೆ ವಿಟಮಿನ್ ನ ಕೊರತೆಯ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳುವಳಿಕೆ ನೀಡುವುದರಿಂದ ದೀರ್ಘಾವಧಿಯ ತೊಂದರೆಗಳು ಪ್ರಾರಂಭವಾಗುವ ಮೊದಲೇ ರೋಗಿಗಳಿಗೆ ಚಿಕಿತ್ಸೆ ನೀಡಬಹುದು.
ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.
ದೇಹಕ್ಕೆ ದಿನನಿತ್ಯ ಅಗತ್ಯವಿರುವ ಥಯಾಮಿನ್ ನ ಪ್ರಮಾಣ
ಶಿಫಾರಸು ಮಾಡಲಾದ ಥಯಾಮಿನ್‌ನ ದೈನಂದಿನ ಪ್ರಮಾಣ
0-6 ತಿಂಗಳ ಮಕ್ಕಳಿಗೆ | 0.2 mg |
7-12 ತಿಂಗಳ ಮಕ್ಕಳಿಗೆ | 0.3 mg |
1-3 ವಯಸ್ಸಿನ ಮಕ್ಕಳಿಗೆ | 0.5 mg |
4-8 ವಯಸ್ಸಿನ ಮಕ್ಕಳಿಗೆ | 0.6 mg |
9-13 ವಯಸ್ಸಿನ ಗಂಡು ಮಕ್ಕಳಿಗೆ | 0.9 mg |
14 ವರ್ಷ ಮೇಲ್ಪಟ್ಟ ಗಂಡು ಮಕ್ಕಳಿಗೆ | 1.2mg |
9-13 ವಯಸ್ಸಿನ ಹೆಣ್ಣು ಮಕ್ಕಳಿಗೆ | 0.9 mg |
14-18 ವಯಸ್ಸಿನ ಹೆಣ್ಣು ಮಕ್ಕಳಿಗೆ | 1mg |
18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ | 1.1mg |
ಗರ್ಭಿಣಿಯರಿಗೆ | 1.4 mg |
ಸ್ತನಪಾನ್ಯ ಮಾಡಿಸುವ ಮಹಿಳೆಯರಿಗೆ | 1.5 mg |
ಥಯಾಮಿನ್ ನ ನೈಸರ್ಗಿಕ ಮೂಲಗಳು
• ಧಾನ್ಯಗಳು,
• ಕಂದು ಅಕ್ಕಿ
• ಕಾಳುಗಳು
• ಬೀಜಗಳು
• ಮಾಂಸ
• ಮೀನು
ಭಾರತದಲ್ಲಿ, ಈ ಕೆಳಗಿನ ಪದಾರ್ಥಗಳಲ್ಲಿ ಥಯಾಮಿನ್ ಸಮೃದ್ಧವಾಗಿ ಲಭ್ಯವಿವೆ
• ಎಳ್ಳು
• ಸೋಯಾ ಹುರುಳಿ ಬೀಜಗಳು
• ಸಾಸಿವೆ ಅಥವಾ ಎಣ್ಣೆ
• ಗೋಡಂಬಿ
ಥಯಾಮಿನ್ ನ ಪೂರಕಗಳು
• ಫಾರ್ಮುಲಾ ಹಾಲು ಮತ್ತು ಸಿರಿಧಾನ್ಯಗಳು
• ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ಮಕ್ಕಳು ಅಥವಾ ವಯಸ್ಸಾದ ರೋಗಿಗಳಿಗೆ ಪೂರಕ ವಿಟಮಿನ್ ನ ಅಗತ್ಯ ಉಂಟಾಗಬಹುದು
ಥಯಾಮಿನ್ ನ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
ಥಯಾಮಿನ್, ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವ ಮೂಲಕ ದೇಹದಲ್ಲಿ ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಜೀವಕೋಶಗಳ ಬೆಳವಣಿಗೆಗೆ ಮತ್ತು ಕಾರ್ಯನಿರ್ವಹಣೆಗೆ ಸಹಕಾರಿ. ಥಯಾಮಿನ್ ನ ಸೇವನೆಯಿಂದ ವಯಸ್ಕರಲ್ಲಿ ವರ್ನಿಕೆ- ಕೊರ್ಸಕಾಫ್ ಸಿಂಡ್ರೋಮ್ ಅನ್ನು (Wernicke- Korsakoff syndrome) ತಡೆಗಟ್ಟಬಹುದು ಮತ್ತು ದೇಹದಲ್ಲಿ ಥಯಾಮಿನ್ ನ ಕೊರತೆ ಉಂಟಾಗುವುದನ್ನು ತಪ್ಪಿಸಬಹುದು.
ದೇಹದಲ್ಲಿ ಥಯಾಮಿನ್ ಕೊರತೆ
• ವಿಟಮಿನ್ ಬಿ 1 ಅಂಶ ಕಡಿಮೆಯುಳ್ಳ ಪಾಲಿಶ್ ಮಾಡಿದ ಬಿಳಿ ಅಕ್ಕಿಯನ್ನು ಪ್ರಮುಖವಾಗಿ ಬಳಸುವ ಪ್ರದೇಶಗಳ ಜನರಲ್ಲಿ ಥಯಾಮಿನ್ ಕೊರತೆ ಕಂಡುಬರುತ್ತದೆ.
• ಸ್ತನ್ಯಪಾನ್ಯ ಮಾಡಿಸುವ ತಾಯಂದಿರಲ್ಲಿ ಪೌಷ್ಠಿಕಾಂಶದ ಕೊರತೆಯಿದ್ದಲ್ಲಿ, ಅವರ ಮಕ್ಕಳಲ್ಲಿ ಥಯಾಮಿನ್ ಕೊರತೆ ಉಂಟಾಗಬಹುದು.
• ಹೊಟ್ಟೆ ಅಥವಾ ಕರುಳಿನ ಒಳಪದರ, ದೀರ್ಘಕಾಲದ ಅತಿಸಾರ ಅಥವಾ ವಾಂತಿಯ ಸಮಸ್ಯೆಗಳಿಂದಾಗಿ ಆಹಾರದಿಂದ ಪೋಷಕಾಂಶಗಳನ್ನು ಹೀರುವ ಸಾಮರ್ಥ್ಯ ಕಡಿಮೆಯಾಗುವುದರಿಂದಲೂ ಸಹ ಈ ಥಯಾಮಿನ್ ಕೊರತೆ ಉಂಟಾಗಬಹುದು.
ಸಾಮಾನ್ಯವಾಗಿ ದೀರ್ಘಕಾಲದವರೆಗೆ ಆಲ್ಕೊಹಾಲ್ ಸೇವಿಸುವ ವಯಸ್ಕರಲ್ಲಿ ಥಯಾಮಿನ್ ಕೊರತೆಯಿಂದಾಗಿ ಮೆದುಳು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತದೆ ಹಾಗೂ ಇದನ್ನು ವರ್ನಿಕೀಸ್ ಎನ್ಸೆಫಲೋಪತಿ (Wernicke’s Encephalopathy) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಕೆಲವೊಮ್ಮೆ ನೆನಪಿನ ಶಕ್ತಿ ಮತ್ತು ದೃಷ್ಟಿಯ ಸಮಸ್ಯೆಗಳಿಗೆ ಕಾರಣವಾಗುವ ಕೊರ್ಸಕಾಫ್ ಸಿಂಡ್ರೋಮ್ (Korsakoff syndrome) ಜೊತೆಗೆ ಕಂಡು ಬರುತ್ತಿತ್ತು. ಇದನ್ನು ವರ್ನಿಕೀ- ಕೊರ್ಸಕಾಫ್ ಸಿಂಡ್ರೋಮ್ (Wernicke- Korsakoff syndrome) ಎಂದು ಗುರುತಿಸಲಾಗಿದೆ.
ಥಯಾಮಿನ್ ಕೊರತೆಯಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದಾದ ವಿವಿಧ ರೋಗ ಲಕ್ಷಣಗಳು
ಅ. ಆರಂಭಿಕ ಲಕ್ಷಣಗಳು ಸಣ್ಣ ಮಟ್ಟದಲ್ಲಿರಬಹುದು. ಕಿರಿಕಿರಿ ಎನಿಸುವುದು, ಆಹಾರವನ್ನು ನಿರಾಕರಿಸುವುದು, ವಾಂತಿ, ಮಲಬದ್ಧತೆ, ಉಸಿರಾಟದ ತೊಂದರೆ, ಜೋರಾಗಿ ಅಳುವುದು ಇತರೆ. ಧ್ವನಿ ತಂತುಗಳ (vocal cords) ಪಾರ್ಶ್ವವಾಯುವಿನಿಂದ ಅಫೋನಿಯಾ ಕಾಣಿಸಿಕೊಳ್ಳಬಹುದು
ಆ. ತೀವ್ರ ಮಟ್ಟದ ಲಕ್ಷಣಗಳು
• ಅಪಸ್ಮಾರ
• ಪ್ರಜ್ಞೆ ಕಡಿಮೆಯಾಗುವುದು
• ಸ್ನಾಯು ನೋವು
• ಸ್ನಾಯು ಕೃಶವಾಗುವುದು
• ಅಟಾಕ್ಸಿಯಾ (Ataxia – ಸ್ನಾಯು ಸಮನ್ವಯದ ಕೊರತೆ)
• ಕಣ್ಣಿನಲ್ಲಿ ನಿಸ್ಟಾಗ್ಮಸ್ (Nystagmus) ಮತ್ತು ಟೋಸಿಸ್ (ptosis) ನಂತಹ – (ಇಳಿಬಿದ್ದ ಕಣ್ಣುರೆಪ್ಪೆಗಳು) ಅಸಹಜ ಬದಲಾವಣೆಗಳು,
• ಯಾವುದರ ಆಲೋಚನೆಯೂ ಇಲ್ಲದೆ ಸುಮ್ಮನೆ ಏನನ್ನಾದರೂ ನೋಡುವುದು/ ಅರ್ಥರಹಿತ ನೋಟ ಹಾಗೂ ಆಲಸ್ಯ
• ಚಿಕಿತ್ಸೆ ಪಡೆಯದಿದ್ದಲ್ಲಿ ಹೃದಯ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು
ಥಯಾಮಿನ್ ಕೊರತೆಯಿದ್ದಲ್ಲಿ ಆದಷ್ಟು ಬೇಗನೇ ತಪಾಸಣೆಗೊಳಪಟ್ಟು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಚಿಕಿತ್ಸೆಯ ನಂತರವೂ ಕೆಲವರಲ್ಲಿ ಬೌದ್ಧಿಕ ಅಸಾಮರ್ಥ್ಯ, ಅಪಸ್ಮಾರ ಅಥವಾ ಶ್ರವಣ ಸಮಸ್ಯೆಗಳು ಉಳಿದುಕೊಳ್ಳಬಹುದು.
ದೇಹದಲ್ಲಿ ಥಯಾಮಿನ್ ಕೊರತೆಯನ್ನು ಗುರುತಿಸುವುದು
ರೋಗಿಗಳ ವೈದ್ಯಕೀಯ ತಪಾಸಣೆ ಜೊತೆಗೆ, ದೇಹದಲ್ಲಿನ ಸೀರಮ್ ಅಥವಾ ಪ್ಲಾಸ್ಮಾವನ್ನು (serum/ plasma) ಪರೀಕ್ಷಿಸುವ ಮೂಲಕ ಥಯಾಮಿನ್ ರಕ್ತದ ಮಟ್ಟವನ್ನು ನಿರ್ಧರಿಸಬಹುದು. ಚಯಾಪಚಯ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ತಿಳಿಯಲು ಥಯಾಮಿನ್ ಮೊನೊಫಾಸ್ಫೇಟ್ (ThMP) ಮತ್ತು ಥಯಾಮಿನ್ ಡಿಫಾಸ್ಫೇಟ್ (Thiamine Monophosphate (ThMP) & Thiamine Diphosphate (ThDP)) ಮತ್ತು ಎರಿಥ್ರೋಸೈಟ್ ಟ್ರಾನ್ಸ್‌ಕೆಟೋಲೇಸ್ (erythrocyte transketolase (ETK)) ನಂತಹ ಪರೀಕ್ಷೆಗಳನ್ನು ಸಹ ಮಾಡಬಹುದು.
ಥಯಾಮಿನ್ ಕೊರತೆಗೆ ಚಿಕಿತ್ಸೆ
• ಥಯಾಮಿನ್ ಪೂರಕಗಳನ್ನು ಸಾಧ್ಯವಾದಷ್ಟು ಬೇಗನೆ ಬಾಯಿಯ ಮೂಲಕ ಅಥವಾ ಇಂಜೆಕ್ಷನ್ ರೂಪದಲ್ಲಿ ಸ್ನಾಯುಗಳಿಗೆ/ ರಕ್ತನಾಳಕ್ಕೆ ನೀಡಬೇಕು. ದೇಹದಲ್ಲಿ ಥಯಾಮಿನ್ ನ ಸಮರ್ಪಕ ಮಟ್ಟವನ್ನು ಕಾಪಾಡಿಕೊಳ್ಳಲು ಬಲವರ್ಧಿತ (ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿದ ಸಮೃದ್ಧ ಆಹಾರ – ಸಿರಿಧಾನ್ಯ ಇತರೆ) ಆಹಾರವನ್ನು ಸೇವಿಸಬೇಕು.
• ಸ್ತನ್ಯಪಾನ್ಯ ಮಾಡಿಸುವ ತಾಯಂದಿರಿಗೆ ಸೂಕ್ತವಾದ ಪೌಷ್ಠಿಕಾಂಶ ಆಹಾರವನ್ನು ಸೇವಿಸುವಂತೆ ಸೂಚಿಸಬೇಕು. ಅಗತ್ಯವಿದ್ದಲ್ಲಿ, ಮಗುವಿಗೆ ಫಾರ್ಮುಲಾ ಹಾಲನ್ನು ನೀಡುವಂತೆ ತಿಳಿಸಬೇಕು.
• ಥಯಾಮಿನ್ ನ ಕೊರತೆಯಿಂದಾಗಿ ಮಕ್ಕಳಲ್ಲಿ ಕಂಡು ಬರುವ ನರ-ಬೆಳವಣಿಗೆ ಸಮಸ್ಯೆಗಳು ಅಥವಾ ಅಪಸ್ಮಾರದಂತ ಯಾವುದೇ ದೀರ್ಘಕಾಲೀನ ಸಮಸ್ಯೆಗಳಿಗೆ ನರವಿಜ್ಞಾನಿಗಳು ನೆರವು ಪಡೆಯಬಹುದು.
• ಮಕ್ಕಳಲ್ಲಿ ವಿಟಮಿನ್ ಕೊರತೆಯನ್ನು ಸರಿಪಡಿಸಲು ಉತ್ತಮ ಆಹಾರಕ್ರಮವನ್ನು ಅನುಸರಿಸುವುದು ಮುಖ್ಯ. ಉತ್ತಮ ಪೌಷ್ಠಿಕಾಂಶವುಳ್ಳ ಆಹಾರದ ಸೇವನೆಯ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕು. ಜೊತೆಗೆ ವಿಟಮಿನ್ ನ ಕೊರತೆಯ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳುವಳಿಕೆ ನೀಡುವುದರಿಂದ ದೀರ್ಘಾವಧಿಯ ತೊಂದರೆಗಳು ಪ್ರಾರಂಭವಾಗುವ ಮೊದಲೇ ರೋಗಿಗಳಿಗೆ ಚಿಕಿತ್ಸೆ ನೀಡಬಹುದು.
ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.
ಹಿಂದಿನ ಲಿಂಕ್ ಗಳು
1. Wernicke- Korsakoff Encephalopathy https://www.childneurologyfoundation.org/disorder/wernicke-korsakoff-syndrome/
2. Thiamine Deficiency http://www.indianpediatrics.net/aug2019/aug-673-681.htm#:~:text=In%20India%2C%20there%20are%20limited,usually%20have%20long%2Dterm%20sequelae.
ಆಕರಗ್ರಂಥ/ ಉಲ್ಲೇಖಗಳು
1. http://www.indianpediatrics.net/aug2019/aug-673-681.htm#:~:text=In%20India%2C%20there%20are%20limited,usually%20have%20long%2Dterm%20sequelae.

Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore