ಡಾ ಸಿ ಪಿ ರವಿ ಕುಮಾರ್
ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)
ಬ್ರ್ಯಾಂಡ್ ನ ಹೆಸರುಗಳು
ಸಿರಪ್: ಆಬ್ಸೆನ್ಜ್
ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು
ಎಥೋಸುಕ್ಸಿಮೈಡ್ ಎಂಬುದು ಅನುಪಸ್ಥಿತಿಯ ಅಪಸ್ಮಾರದ (ಮೆದುಳಿನಲ್ಲಿನ ಅಸಹಜ ವಿದ್ಯುತ್ ಚಟುವಟಿಕೆಯಿಂದಾಗಿ ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುವಂತಹುದು – ಸಾಮಾನ್ಯವಾಗಿ 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯ ಪರಿಣಾಮ) ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿದೆ. ಇದನ್ನು ಇತರ ರೀತಿಯ ಅಪಸ್ಮಾರಗಳಲ್ಲಿ ಚಿಕಿತ್ಸೆಯಲ್ಲಿ ಇತರ ಔಷಧಿಗಳೊಂದಿಗೆ ಬಳಸಬಹುದು. ಆದರೆ ಅದು ತುಂಬಾ ವಿರಳ.
ಈ ಔಷಧಿ ಭಾರತದಲ್ಲಿ ಇತ್ತೀಚೆಗೆ ಲಭ್ಯವಿದೆ. ಈ ಮಾಹಿತಿ ಕೈಪಿಡಿಯನ್ನು ಸಿದ್ಧಪಡಿಸುವ ವೇಳೆಯಲ್ಲಿ ಭಾರತದಲ್ಲಿ ಕೇವಲ ಒಂದು ಬ್ರಾಂಡ್ ಮಾತ್ರ ಲಭ್ಯವಿದ್ದು, ಇದನ್ನು ಎಬಿಎಸ್ಎನ್ ಜೆಡ್ (ABSENZ) ಎಂದು ಹೆಸರಿಸಲಾಗಿದೆ.
ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?
ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗು ಎಥೊಸಾಕ್ಸಿಮೈಡ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.
ನಿಮ್ಮ ಮಗುವಿಗೆ ಎಥೊಸಾಕ್ಸಿಮೈಡ್ ನೀಡುವುದನ್ನು ದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.
ಭಾರತದಲ್ಲಿ ಈ ಔಷಧಿಯು ಕೇವಲ ದ್ರವರೂಪದಲ್ಲಿ ಲಭ್ಯವಿದೆ. ಇತರ ದೇಶಗಳಲ್ಲಿ ಮಾತ್ರೆಗಳು / ಕ್ಯಾಪ್ಸುಲ್ ರೂಪದಲ್ಲಿ ಲಭ್ಯವಿವೆ.
ದಿನಕ್ಕೆ ಎರಡು ಬಾರಿ. ಬೆಳಗ್ಗೆ ಮತ್ತು ಸಂಜೆ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.
ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆಯ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ ವೈದ್ಯರು ದಿನಕ್ಕೆ ಮೂರು ಬಾರಿ ಔಷಧಿ ನೀಡುವಂತೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನು ಅನುಸರಿಸಿ.
ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.
ಔಷಧಿ ಕೊಡುವುದನ್ನುಮರೆತರೆ ಏನು ಮಾಡಬೇಕು?
ದ್ರವೌಷಧಿ: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.
ಯಾವುದೇ ಕಾರಣಕ್ಕೂ ಎರಡು ಡೋಸ್ ಎಥೊಸಾಕ್ಸಿಮೈಡ್ ನೀಡಬೇಡಿ.
ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಔಷಧಿ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.
ಔಷಧಿಯ ಪ್ರಮಾಣ ಎಷ್ಟಿರಬೇಕು?
ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಎಥೊಸಾಕ್ಸಿಮೈಡ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.
ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಎಥೊಸಾಕ್ಸಿಮೈಡ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ಏನು ಮಾಡಬೇಕೆಂಬುದನ್ನುನಿಮ್ಮ ವೈದ್ಯರು ವಿವರಿಸುತ್ತಾರೆ.
ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ
ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.
ಔಷಧಿಯನ್ನು ಹೇಗೆ ನೀಡಬೇಕು ? “ಔಷಧಿಗಳನ್ನು ನೀಡುವುದು “
ದ್ರವ ಅಥವಾ ಸಿರಪ್: ಓರಲ್ ಸಿರಿಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನು ಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.
ಇದರಿಂದ ಏನಾದರೂ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆಯೇ? ಅಡ್ಡಪರಿಣಾಮಗಳು
ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನುಬಳಸುತ್ತೇವೆ. ಆದರೆ, ಅವು ಕೆಲವೊಮ್ಮೆ ಅನಗತ್ಯ ಪರಿಣಾಮಗಳನ್ನು (ಅಡ್ಡಪರಿಣಾಮಗಳು) ಉಂಟು ಮಾಡಬಹುದು.
ನೀವು ಎಚ್ಚರವಹಿಸಬೇಕಾದ ಅಡ್ಡಪರಿಣಾಮಗಳು – ವಿರಳ
ವಾಕರಿಕೆ ಹಾಗೂ ವಾಂತಿಯು ಚಿಕಿತ್ಸೆಯನ್ನು ಪ್ರಾರಂಭಿಸಿದ ಮೊದಲ ಎರಡು ವಾರಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮಗಳಾಗಿವೆ.
ಲಿವರ್(ಯಕೃತ್ತು) ಕಾಯಿಲೆ: ನಿಮ್ಮ ಮಗುವಿಗೆ ಕೆಲವು ಗಂಟೆಗಳಿಗೊಮ್ಮೆ ಮತ್ತೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಲ್ಲಿ, ಹೊಟ್ಟೆನೋವು , ತೀವ್ರ ನಿದ್ರೆ, ಜಾಂಡೀಸ್ (ಕಾಮಾಲೆ) ಉಂಟಾದರೆ (ಚರ್ಮ ಹಾಗು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಫಿಟ್ಸ್ ಬಂದರೆ ತಕ್ಷಣ ಮಗುವನ್ನು ಆಸ್ಪತ್ರೆಗೆ ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗಿ.
ಕೆಲವೊಮ್ಮೆ ಎಥೊಸಾಕ್ಸಿಮೈಡ್, ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತಕಣಗಳು ಕ್ಷೀಣಿಸಲು ಕಾರಣವಾಗಬಹುದು. ಇದರಿಂದ ಅಪರೂಪದಲ್ಲಿ ಕೆಲವೊಮ್ಮೆ ತೊಂದರೆ ಉಂಟಾಗಬಹುದು. ನಿಮ್ಮ ಮಗುವಿಗೆ ರಕ್ತಸ್ರಾವ ಅಥವಾ ಮೈಮೇಲೆ ಗುಳ್ಳೆಗಳು ಉಂಟಾದರೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಅವರು ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತಾರೆ.
ನಿಮ್ಮ ಮಗು ಎಥೊಸಾಕ್ಸಿಮೈಡ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಈ ಕೆಳಗಿನ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ, ಸಾಮಾನ್ಯವಾಗಿ ಒಂದು ವಾರದೊಳಗೆ ಅಥವಾ ಅವರ ದೇಹವು ಔಷಧಿಗೆ ಹೊಂದಿಕೊಂಡಂತೆ ಸರಿ ಹೋಗುತ್ತದೆ. ನಿಮ್ಮ ವೈದ್ಯರ ಸಲಹೆಯಂತೆ ಎಥೊಸಾಕ್ಸಿಮೈಡ್ ನೀಡುವುದನ್ನು ಮುಂದುವರೆಸಿ.
ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ..
ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಈ ಎಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ ಎಥೊಸಾಕ್ಸಿಮೈಡ್ ಅರೆ ಅಪಸ್ಮಾರಕ್ಕೆ ಪರಿಣಾಮಕಾರಿಯಾದ ಸೆಳೆವು ನಿರೋಧಕವಾಗಿದೆ ಮತ್ತು ಮಗುವಿನ ಎಚ್ಚರ, ವರ್ತನೆ ಮತ್ತು ಸಾಮರ್ಥ್ಯಗಳ ಮೇಲೆ ತುಂಬಾ ಕಡಿಮೆ ಬೀರುತ್ತದೆ.
• ನೀವು ಮಗುವಿಗೆ ಪ್ಯಾರಸಿಟಮಾಲ್ ಅಥವಾ ಐಬುಪ್ರೊಫೇನ್ ಔಷಧಿಗಳನ್ನು ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ಮಗುವಿಗೆ ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.
• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರ ಕೆಲವು ಔಷಧಿಗಳು ಎಥೊಸಾಕ್ಸಿಮೈಡ್ ನಷ್ಟೇ ಉತ್ತಮವಾಗಿ ಕೆಲಸ ಮಾಡಬಹುದು ಅಥವಾ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಹಾಗಾಗಿ, ಇತರೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರ ಗಮನಕ್ಕೆ ತನ್ನಿ. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಿದ್ದಲ್ಲಿ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ.
ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?
ಔಷಧಿಯನ್ನು…
• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.
• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.
• ತಂದ ಬಾಕ್ಸ್ ನಲ್ಲಿಯೇ ಇಡಿ.
ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.
CONSULTANT – PEDIATRIC NEUROLOGY
Aster CMI Hospital, Bangalore