Dr C P Ravikumar

ಮಿಡ್ಜೋಲಮ್ (ಮೂಗಿನ ಸ್ಪ್ರೇ)

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

 

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

ಬ್ರ್ಯಾಂಡ್ ಹೆಸರುಗಳು

ಮಾತ್ರೆ: ಮೆಡಿಸ್ಟಾಟ್, ಮೆಡಿಕ್ಯಾಪ್ (ಎರಡೂ ಸಹ ಮೂಗಿನ ಸ್ಪ್ರೇಗಳು)

“ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು”

ಮಿಡ್ಜೋಲಮ್ ಔಷಧಿಯನ್ನು ಸೆಳೆವಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ; ಇತುರ್ತು ಬಳಕೆಯ ಔಷಧವಾಗಿದ್ದು, ಸಾಮಾನ್ಯವಾಗಿ ತುರ್ತುಚಿಕಿತ್ಸಾ ಕೋಣೆಯಲ್ಲಿ ಬಳಸಲಾಗುತ್ತದೆ. ಆದರೆ ಈಗ, ಇದರ ಸ್ಪ್ರೇ (ಸಿಂಪಡಿಕೆ) ಮಾದಿಯನ್ನು ಪರಿಚಯಿಸಲಾಗಿದ್ದು, ಮಗುವಿಗೆ ಸೆಳೆವಿನ ಸಮಸ್ಯೆಯಿದ್ದಲ್ಲಿ, ಪೋಷಕರು / ಆರೈಕೆದಾರರು ಸಹ ಇದನ್ನು ಬಳಸಬಹುದು.

ಎಲ್ಲಾ ಬಗೆಯ ಸೆಳೆತವನ್ನು ತಡೆಗಟ್ಟಲು ಮಿಡಜೋಲಮ್ ಔಷಧಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ಬಗೆಯ ಸೆಳೆವುಗಳು 5 ನಿಮಿಷಗಳಿಗಿಂತ ಕಡಿಮೆ ಅವಧಿಯಾಗಿರುತ್ತವೆ, ಅಂದರೆ, ಅವು ಯಾವುದೇ ಚಿಕಿತ್ಸೆಯಿಲ್ಲದೆ ತಾವಾಗಿಯೇ ನಿಲ್ಲುತ್ತವೆ.

ಸಾಮಾನ್ಯವಾಗಿ, ಐದು ನಿಮಿಷಗಳಿಗಿಂತ ಹೆಚ್ಚಿನ ಕಾಲ ಇರುವ ಸೆಳೆವುಗಳಿಗೆ ಮಿಡಜೋಲಮ್ ಸ್ಪ್ರೇಯನ್ನು ಬಳಸಲಾಗುತ್ತದೆ. ಅದಾಗ್ಯೂ, ಮಗುವಿನ ವೈದ್ಯಕೀಯ ಹಿನ್ನೆಲೆಯನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಸ್ಟ್ರೇಯನ್ನು ಯಾವ ಸಂದರ್ಭಗಳಲ್ಲಿ ಬಳಸಬೇಕೆಂದರ ಬಗ್ಗೆ ನಿಮ್ಮ ವೈದ್ಯರು ಸಲಹೆ ನೀಡುತ್ತಾರೆ.

ಪ್ರತಿ ಮೂಗಿನ ಹೊಳ್ಳೆಗೆ ಎಷ್ಟು ಹನಿ ಔಷಧಿಯನ್ನು ಹಾಕಬೇಕು?

ಮಗುವಿನ ತೂಕವನ್ನು ಆಧಿರಿಸಿ ಎಷ್ಟು ಹನಿ ಔಷಧಿಯನ್ನು ಬಳಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಅವರ ಸಲಹೆಯಂತೆ, ಮೂಗಿನ ಎರಡು ಹೊಳ್ಳೆಗಳಿಗೂ ಸ್ಟ್ರೇಯನ್ನು ಬಳಸಬೇಕು.

ಮಗುವಿಗೆ ಫಿಟ್ಸ್ ಬಂದಾಗ ಏನು ಮಾಡಬೇಕು? ಸ್ರ್ಪೇಯನ್ನು ಹೇಗೆ ಬಳಸಬೇಕು?

  1. ಶಾಂತವಾಗಿರಿ.
  2. ವ್ಯಕ್ತಿಯು ಸಾಧ್ಯವಾದಷ್ಟು ಆರಾಮವಾಗಿರುವಂತೆ ನೋಡಿಕೊಳ್ಳಿ
  3. ವ್ಯಕ್ತಿಯ ಬಾಯಿಯೊಳಗೆ ಏನನ್ನು ಹಾಕಬೇಡಿ
  4. ಅಡ್ಡಿಪಡಿಸಬೇಡಿ
  5. MIDACIP ಮೂಗಿನ ಸ್ರ್ಪೇಯನ್ನು ಬಳಸಲು ಈ ಹಂತಗಳನ್ನು ಅನುಸರಿಸಿ .
  • ಬಾಟಲಿಯನ್ನು ನಿಧಾನವಾಗಿ ಅಲ್ಲಾಡಿಸಿ ನಂತರ ಮುಚ್ಚಳವನ್ನು ತೆಗೆಯಿರಿ.
  • ನಿಮ್ಮ ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಬಾಟಲಿಯನ್ನು ನಳಿಕೆಯ ಎರಡೂ ಬದಿಯಲ್ಲಿ ಮತ್ತು ನಿಮ್ಮ ಹೆಬ್ಬೆರಳನ್ನು ಬಾಟಲಿಯ ಕೆಳಗೆ ಹಿಡಿದುಕೊಳ್ಳಿ
  • ನೀವು ಮೊದಲ ಬಾರಿಗೆ ಸ್ಪ್ರೇಯನ್ನು ಬಳಸುತ್ತಿದ್ದರೆ, ಅದರ ನಳಿಕೆಯನ್ನು ರೋಗಿಯಿಂದ ದೂರ
  • ಹಿಡಿದು ಮೂರು ಬಾರಿ ಗಾಳಿಯಲ್ಲಿ ಸಿಂಪಡಿಸಿ.
  • ವ್ಯಕ್ತಿಯು ಮೇಲ್ಮುಖವಾಗಿ ಮಲಗಿದ್ದರೆ (ಬೆನ್ನ ಮೇಲೆ ಮಲಗುವುದು) ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಬೇಕು. ಸಾಧನವನ್ನು ರೋಗಿಯ ಮೂಗಿನ ಬಳಿ ಇಡಬೇಕು.
  • ಈಗ, ಮೂಗಿನ ಹೊಳ್ಳೆಗೆ ನಳಿಕೆಯನ್ನು ಸೇರಿಸಿ. ಪಂಪ್ ನೊಳಗೆ ಸ್ಟ್ರೋಕನ್ನು ಹಾಕಿ. ಈ ಸಮಯದಲ್ಲಿ ರೋಗಿಯು ಉಸಿರಾಡುವ ಅಗತ್ಯವಿಲ್ಲ.ಔಷಧಿಯನ್ನು ಸಿಂಪಡಿಸುವಾಗ ರೋಗಿಗಳ ತಲೆಯನ್ನು ಹಿಂದಕ್ಕೆ ತಿರುಗಿಸಬೇಡಿ – ಇದು ರೋಗಿಯು ದ್ರಾವಣವನ್ನು ನುಂಗುವುದನ್ನು ತಪ್ಪಿಸುತ್ತದೆ. ಪ್ರತಿ ಮೂಗಿನ ಹೊಳ್ಳೆಗೆ ವೈದ್ಯರು ಸೂಚಿಸಿದ ನಿಗದಿತ ಪ್ರಮಾಣದಲ್ಲಿ ಸ್ಪ್ರೇಯನ್ನು ಹಾಕಿ.

ಮೇಲೆ ತಿಳಿಸಿದ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಈ ವೀಡಿಯೊವನ್ನು ದಯವಿಟ್ಟು ನೋಡಿ ಲಿಂಕ್ .

ಔಷಧಿಯನ್ನು ಹೇಗೆ ನೀಡಬೇಕು? ? ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”

ಇದು ಸುರಕ್ಷಿತ ಔಷಧವಾಗಿದ್ದು, ಸೇವನೆಯ ವ್ಯಕ್ತಿಯು ಗಾಢ ನಿದ್ರೆಗೆ ಜಾರಬಹುದು. ಮಿಡ್ಜೋಲಮ್ ನ ಬಳಕೆಯಿಂದಾಗಿ ಅವರಿಗೆ ನಿದ್ರೆ ಬರಬಹುದು. ಆದರೆ, ಮಗುವು ಫಿಟ್ಸ್ ನಿಂದಾಗಿ ನಿದ್ರೆ ಮಾಡುತ್ತಿದೆಯೇ ಅಥವಾ ಅದು ಔಷಧದ ಪರಿಣಾಮವೇ ಎಂದು ನಿರ್ಧರಿಸುವುದು ಕಷ್ಟ.

ಮಗುವಿನ ಉಸಿರಾಟದ ಗತಿ ನಿಧಾನವಾಗಬಹುದು ಮತ್ತು ಕೆಲವೊಮ್ಮೆ ಮಗುವಿನ ತುಟಿ ನೀಲಿ ಬಣ್ಣಕ್ಕೆ ತಿರುಗಬಹುದು, ಹಾಗಾದಲ್ಲಿ, ಮಗುವಿಗೆ ಆಮ್ಲಜನದ ಅಗತ್ಯವಿದೆ ಎಂದರ್ಥ. ಅಂತಹ ಸಂದರ್ಭಗಳಲ್ಲಿ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುದು ತಪಾಸಣೆ ಮಾಡಿಸಿ.

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ.

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು

  • ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್‌ನಲ್ಲಿ ಇಡುವ ಅವಶ್ಯಕತೆ ಇಲ್ಲ.
  • ಮಕ್ಕಳು ಔಷಧಿಯನ್ನು ನೋಡದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.
  • ಖರೀದಿಸಿ ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ