Dr C P Ravikumar

ಸಹಾಯಕ ಸಾಧನಗಳು: ವಿಶೇಷ ಚೇತನ ಮಕ್ಕಳನ್ನು ಕಾರ್ಯನಿರತರನ್ನಾಗಿಸುವುದು/ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಂತ್ರಜ್ಞಾನ
ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳ ಮಕ್ಕಳ ಶೈಕ್ಮಣಿಕ ಬೆಳವಣಿಗೆ ಮತ್ತ್ತುಒಟ್ಟಾರೆ ಜೀವನದಲ್ಲಿ ಪ್ರಗತಿ ಸಾಧಿಸುವುದು ಅಕ್ಕರಶಃ ಹೋರಾಟವೇ ಸರಿ. ಈ ಮಕ್ಕಳಿಗೆ ಕಲಿಕೆ ಮತ್ತು ಸಾಮಾಜಿಕ ಸಂವಹನಗಳನ್ನು ಸುುಲಭಗೊಳಿಸುವ ಪ್ರಯತ್ನದಲ್ಲಿ, ಮತ್ತು ಅವರ ಕಲಿಕೆಗೆ ಧ್ವನಿಯಾಗುವ, ಅವರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ವೈಯಕ್ತಿಕವಾಗಿ ಸಮರ್ಥಗೊಳಿಸಲಾಗಿದೆ. ಕಲಿಕಾ ಅಸಾಮರ್ಥ್ಯ ಹೊಂದಿರುವ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಸಹಾಯಕ ತಂತ್ರಜ್ಞಾನಗಳು ನಿಜಕ್ಕೂ ಇಂತಹ ಮಕ್ಕಳು ಮತ್ತು ಅವರ ಪೋಷಕರಿಗೆ ವರದಾನವೇ ಸರಿ.

1.ಪಠ್ಯವನ್ನು ಓದಿ ತಿಳಿಸುವ ಸಹಾಯಕ ಸಾಧನಗಳು
ಓದುವ ಸಾಮರ್ಥ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರುವ ದೃಷ್ಟಿ ಸಮಸ್ಯೆ, ಡಿಸ್ಲೆಕ್ಸಿಯಾ, ಅತಿ ಚಟುವಟಿಕೆ ಮತ್ತು ಗಮನ ಕೊರತೆ ಅಥವಾ ಬೌದ್ಧಿಕ ಅಸಾಮರ್ಥ್ಯದಂತ ಸಂವಹನ ನ್ಯೂನತೆಯುಳ್ಳ ಮಕ್ಕಳು, ಪಠ್ಯವನ್ನು ಓದಿ ತಿಳಿಸುವ ಸಾಧನಗಳ ಉಪಯೋಗ ಪಡೆಯಬಹುದು. ಈ ಸಾಧನಗಳು ಪಠ್ಯವನ್ನು ಸ್ಕ್ಯಾನ್ ಮಾಡುತ್ತವೆ ಹಾಗೂ ಸ್ವಯಂಚಾಲಿತ ಸಂಶ್ಲೇಷಿತ ಧ್ವನಿಯಲ್ಲಿ ಪದಗಳನ್ನು ಗಟ್ಟಿಯಾಗಿ ಓದುವ ಮೂಲಕ ಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಸಂವಹನಕ್ಕೆ ನೆರವಾಗುತ್ತವೆ.
2.ಆಡಿಯೋ ಪುಸ್ತಕಗಳು
ಆಡಿಬಲ್‌ನಂತಹ ಜನಪ್ರಿಯ ವೇದಿಕೆಗಳು ವಿಷಯವನ್ನು ಚಿತ್ರಗಳ ವಿಧಾನದಲ್ಲಿ ಪ್ರಸ್ತುತಪಡಿಸುವ ಮೂಲಕ ಡಿಸ್ಲೆಕ್ಸಿಯಾ ಸಮಸ್ಯೆ ಹೊಂದಿರುವ ಮಕ್ಕಳಿಗೂ ಓದುವ ಕ್ರಿಯೆಯನ್ನು ಹೆಚ್ಚು ಆನಂದದಾಯಕ ಮತ್ತು ಆಕರ್ಷಕವನ್ನಾಗಿಸಿದೆ. ಇಲ್ಲಿ ಲಿಖಿತ ಪಠ್ಯವು ಸಹ ಲಭ್ಯವಿರುವುದರಿಂದ ಕಲಿಯಲು ಮತ್ತು ಕಲಿತದ್ದನ್ನು ನೆನಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುತ್ತವೆ.
3. ಆಟವನ್ನು ಆಧಾರಿಸಿದ ಸಾಧನಗಳು
ಮೋಷನ್ ಸೆನ್ಸಿಂಗ್ ಗೇಮಿಂಗ್ ಕನ್ಸೋಲ್‌ಗಳ ಪರಿಚಯವು ದೈಹಿಕ ಮತ್ತು ಬೆಳವಣಿಗೆಯ ನ್ಯೂನತೆಯುಳ್ಳ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೊಸ ಮಾರ್ಗಗಳನ್ನು ತೆರೆಯಿತು ಎಂದು ಗೇಮಿಂಗ್ ಕಂಪನಿಗಳು ಕಲಿತವು. ನಿಂಟೆಂಡೊ ಮತ್ತು ಕೈನೆಕ್ಟ್ ನಂತಹ ಕಂಪನಿಗಳ ನಾಯಕತ್ವದಲ್ಲಿ ಕಂಟ್ರೋಲ್ಡ್ ವಿಡಿಯೋ ಗೇಮ್ಸ್ (ಎಂಸಿವಿಜಿ) ಗಂಭೀರ ಗೇಮ್ ಆವೃತ್ತಿಗಳನ್ನು ಅಭಿವೃದ್ಧಿಪಡಿಸಿತು, ವೈ ಸ್ಪೋರ್ಟ್ಸ್ ಆಟಗಳು, ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಷನ್ ಮತ್ತು ಸೋನಿಕ್ ಪ್ಲೇಸ್ಟೇಷನ್ ಐ ಟಾಯ್ ಕಾರ್ಯ ನಿರ್ದಿಷ್ಟ ಚಲನೆಗಳನ್ನು ಅಭ್ಯಾಸ ಮಾಡಲು ಪ್ರೇರೇಪಿಸುವ ಒಂದು ಮೋಜಿನ ಮಾರ್ಗವನ್ನು ಪರಿಚಯಿಸಿತು. ಇದು ಮಕ್ಮಳಲ್ಲಲಿ ಸಮೋತಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸಾಂಪ್ರದಾಯಿಕ- ಭೌತಚಿಕಿತ್ಸೆಯ ಅಥವಾ ೌದ್ಯೋಗಿಕ ಚಿಕಿತ್ಸೆಗೆ ಉತ್ತಮ ಪರ್ಯಾಯವಾಗಿದೆ.
4. ವರ್ಚುವಲ್ ರಿಯಾಲಿಟಿ (ಮಿಥ್ಯಾ ವಾಸ್ತವಿಕತೆ) ಅಥವಾ ವಾಸ್ತವಿಕತೆ ವರ್ಧಿತ ತಂತ್ರಜ್ಞಾನ
ವರ್ಚುವಲ್ ರಿಯಾಲಿಟಿ ಮತ್ತು ಇತರೆ ರಿಯಾಲಿಟಿ ತಂತ್ರಜ್ಞಾನಗಳು ನರಸಮಸ್ಯೆಗಳ ಪುನರ್ವಸತಿಯಲ್ಲಿ, ವಿಶೇಷವಾಗಿ ಬೆನ್ನುಹುರಿಯ ಗಾಯಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದು ಸಾಮಾನ್ಯವಾಗಿ ಕಂಪ್ಯೂಟರ್ ಸಿಸ್ಟಮ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಹೆಡ್‌ಸೆಟ್ ಹೊಂದಿರುವ ಫೋನ್ ಅನ್ನು ಒಳಗೊಂಡಿದ್ದು, ಮನೆ ಮತ್ತು ಆಸ್ಪತ್ರೆ ವಾತಾವರಣದಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮಾತ್ರವಲ್ಲದೆ, ಸಾಗಿಸುವುದು ಸಹ ಸರಳ. ಪ್ರಕ್ರಿಯೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ವ್ಯಕ್ತಿಗಳು ಚಲನೆಗಳು, ಅಭಿವ್ಯಕ್ತಿಗಳ ಅಭ್ಯಾಸದಲ್ಲಿ ನಿರತರಾಗಬಹುದು ಮತ್ತು ಶಾಂತ ವಾತಾವರಣದಲ್ಲಿ ದೈಹಿಕ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬಹುದು. ಇದು ಗೊಂದಲವನ್ನು ಕಡಿಮೆಗೊಳಿಸಿ ಸುಧಾರಿತ ಏಕಾಗ್ರತೆಯನ್ನು ಶಕ್ತಗೊಳಿಸುವ ಮೂಲಕ ಕಲಿಕಾ ನ್ಯೂನತೆಯುಳ್ಳ ಮಕ್ಕಳಿಗೆ ಸಾಂಪ್ರದಾಯಿಕ ತರಗತಿ ಪರಿಸರವನ್ನು ಅನುಕರಿಸುವಂತೆ ಮಾಡುತ್ತದೆ.
5. ಮಾತನಾಡುವ ಕ್ಯಾಲ್ಕುಲೇಟರ್‌ಗಳು ಮತ್ತು ಗಣಿತ ಕೌಶಲ್ಯಗಳ ಸುಧಾರಣೆಗೆ ಸಾಫ್ಟ್ವೇ‌ವೇರ್
ಡಿಸ್ಕಾಲ್ಕುಲಿಯಾ ಅಥವಾ ನರಜನ್ಯವಾಕ್ ದೋಷಗಳುಳ್ಳ ಮಕ್ಕಳಿಗೆ ಮ್ಯಾಥ್ ಟಾಕ್ ಮತ್ತು ಟಾಕಿಂಗ್- ಕ್ಯಾಲ್ಕುಲೇಟರ್‌ಗಳಂತಹ ಆಯ್ಕೆಗಳು ಹೆಚ್ಚು ಉಪಯುಕ್ತವಾಗಿವೆ. ಇದು ಧ್ವನಿಯನ್ನು ಪಠ್ಯಕ್ಕೆ ಮಾರ್ಪಡಿಸುವ ಆಯ್ಕೆಯನ್ನು ಹೊಂದಿದ್ದು, ಗಣಿತದ ಪರಿಕಲ್ಪನೆಗಳನ್ನು ಎಲೆಕ್ಟ್ರಾನಿಕ್ ದೃಶ್ಯೀಕರಣಗಳನ್ನು ಹೊಂದಿಸುವ ಮೂಲಕ ಮಕ್ಕಳಿಗೆ ಕಷ್ಟಸಾಧ್ಯವಾದ ಪೆನ್ ಮತ್ತು ಕಾಗದದ ಮಾದರಿಯನ್ನು ತೆಗೆದುಹಾಕಿ ಸುಧಾರಿತ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.
6. ಎಲೆಕ್ಟ್ರಾನಿಕ್ ಪುಟಗಳು
ಈ ಎಲೆಕ್ಟ್ರಾನಿಕ್ ಪುಟಗಳು ಕಲಿಕೆಯನ್ನು ಹೆಚ್ಚು ಆಕರ್ಷಕವನ್ನಾಗಿಸುವ ಬಹುಆಯ್ಕೆ ಪ್ರಶ್ನೆಗಳು, ಆಡಿಯೋ ಮತ್ತು ವಿಡಿಯೋ ಪ್ರಶ್ನೆಗಳನ್ನು ಒಳಗೊಳ್ಳುವ ಮೂಲಕ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪರೀಕ್ಷಿಸಲು ಮತ್ತು ಮೌಲ್ಯಮಾಪನ ಮಾಡಲು ಇವು ಉತ್ತಮ ಆಯ್ಕೆಗಳಾಗಿವೆ. ಗೂಗಲ್ ಫಾರ್ರ‍್ಮ‍ ಗಳಂತಹ ಉಚಿತ ಆವೃತ್ತಿಗಳು ಲಭ್ಯವಿದೆ.
7. ಆಲಿಸುವ ಸಹಾಯಕ ಸಾಧನಗಳು
ಭಾಷೆ ಮತ್ತು ಬೆಳವಣಿಗೆಯಲ್ಲಿ ನಿಧಾನಗತಿ, ಸೆನ್ಸರಿ ನ್ಯೂರಲ್ ಶ್ರವಣದೋಷ, ಉಚ್ಚಾರಣಾ ದೋಷ ಇನ್ನಿತರೆ ನ್ಯೂನತೆ ಹೊಂದಿರುವವರು ತಮ್ಮ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ಸಹಾಯಕ ಸಾಧನಗಳನ್ನು ಬಳಸಬಹುದು. ಇದನ್ನು ಶ್ರವಣ ಸಾಧನಗಳು ಮತ್ತು ಕಾಕ್ಲಿಯರ್ ಇಂಪ್ಲಾಂಟ್‌ಗಳ ಜೊತೆ ಹೆಚ್ಚುವರಿಯಾಗಿ ಬಳಸಬಹುದು. ಇದು ಸಾಮಾನ್ಯವಾಗಿ ಮೈಕ್ರೋಫೋನ್, ಪ್ರಸರಣ ತಂತ್ರಜ್ಞಾನ ಮತ್ತು ವ್ಯಕ್ತಿಗೆ ಕಿವಿಗೆ ಧ್ವನಿಯನ್ನು ಪ್ರಸಾರ ಮಾಡುವ ಸಾಧನಗಳನ್ನು ಒಳಗೊಂಡಿರುತ್ತದೆ. ತರಗತಿಯಲ್ಲಿನ ಮುಖ್ಯ ಸಂವಹನಕಾರರೊಂದಿಗಿನ ಮಾತುಕತೆಯನ್ನು ಮತ್ತಷ್ಟು ಹೆಚ್ಚಿಸಲು ಈ ತಂತ್ರಜ್ಞಾನವು ಎಫ್‌ಎಂ (ರೇಡಿಯೊಫ್ರೀಕ್ವೆನ್ಸಿಗಳು) ನಿಂದ ಸೌಂಡ್ ಫೀಲ್ಡ್ ಸ್ಪೀಕರ್ ವ್ಯವಸ್ಥೆಗಳವರೆಗೂ ಲಭ್ಯವಿದೆ.
8. ಭಾಷಾ ಸಾಫ್ಟ್‌ವೇರ್ ಮತ್ತು ಗ್ರಾಫಿಕ್ ಸಂಘಟನೆ
ಲಿಖಿತ ಅಭಿವ್ಯಕ್ತಿಯಲ್ಲಿ ತೊಂದರೆಯುಳ್ಳ ಮಕ್ಕಳಿಗೆ, ಅವರ ಚಿಂತನೆ/ ಪರಿಕಲ್ಪನೆಗಳನ್ನು ಅಭಿವ್ಯಕ್ತಪಡಿಸಲು ನೆರವಾಗುವ ಅನೇಕ ದೃಶ್ಯ ಕಲಿಕಾ ಸಾಧನಗಳಿವೆ. ಈ ಸಾಧನಗಳನ್ನು ಮಕ್ಕಳ ಶೈಕ್ಷಣಿಕ ಅಥವಾ ದೈನಂದಿನ ಜೀವನದ ಸುಧಾರಣೆಗೆ ಅಳವಡಿಸಿಕೊಳ್ಳಬಹುದು. ಇವು ಮಗುವಿನ ಆಲೋಚನೆಗಳನ್ನು ಅನುಕ್ರಮಗೊಳಿಸಲು, ಮಕ್ಕಳು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಪುನರಾವರ್ತಿಸಲು ಸುಲಭ ಸಾಧ್ಯವಾಗಿಸುತ್ತದೆ. ವಿಶೇಷವಾಗಿ ಇದು ಡಿಸ್‌ಗ್ರಾಫಿಯಾ ಸಮಸ್ಯೆಯುಳ್ಳ ಮಕ್ಕಳಿಗೆ ಉಪಯುಕ್ತವಾಗಿದ್ದು, ವಿಶೇಷ ಚೇತನರು ಮತ್ತು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟಚ್ ಸ್ಕ್ರೀನ್ ಗಳಂತಹ ಸಂವಾದಾತ್ಮಕ ಮೇಲ್ಮೈಗಳ ಜೊತೆಗೆ, ಲೈವ್ ಸ್ಕ್ರೈಬ್ ಎಕೋ ಸ್ಮಾರ್ಟ್ ಪೆನ್‌ನಂತಹ ಸಾಧನಗಳು ಮೈಕ್ರೋಸಾಫ್ಟ್ ಟೆಲ್ ಮಿ ಫೀಚರ್ (ಧ್ವನಿ-ಕ್ರಿಯೆ-ಅಥವಾ ) ಮತ್ತು ಮೈಕ್ರೋಸಾಫ್ಟ್ ಇಮ್ಮರ್‌ಸಿವ್ ರೀಡರ್, ಮತ್ತು ಘೋಟಿಟ್ ನಂತಹ ಅನೇಕ ಭಾಷಾ ಸಂಪಾದನೆ ಸಾಫ್ಟ್‌ವೇರ್‌ಗಳನ್ನು ಹೊಂದಿದ್ದು, ಅಂತರ್ಗತ AI ಶಕ್ತಗೊಂಡ ಕ್ರಮಾವಳಿಗಳು ಮತ್ತು ಮುನ್ಸೂಚಕ ಪಠ್ಯವು ಬರವಣಿಗೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.
9. ಅಪಸ್ಮಾರ ಹೊಂದಿರುವ ಮಕ್ಕಳಿಗಾಗಿ ಧರಿಸಲು ಸಾಧ್ಯವಾಗುವಂತಹ ಮೇಲ್ವಿಚಾರಕ ಸಾಧನಗಳು
ಅಪಸ್ಮಾರ ಹೊಂದಿರುವ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಮೇಲ್ವಿಚಾರಕ ಸಾಧನಗಳು ಲಭ್ಯವಿದ್ದು, ಈ ಮಕ್ಕಳ ಯಾವುದೇ ಅಸಹಜ ಚಲನವಲನಗಳನ್ನು ಗುರುತಿಸಲು ಸಾಧ್ಯಮಾಡುತ್ತದೆ. ಮಾತ್ರವಲ್ಲದೆ, ಈ ಸಾಧನಗಳನ್ನು ಸ್ಮಾರ್ಟ್ ಫೋನ್‌ಗಗಳೊಂದಿಗೆ ಸಂಪರ್ಕಿಸಿದಾಗ, ಸಹಾಯಕ್ಕಾಗಿ ಸಂಕೇತ ನೀಡಲು ಜೀಪಿಎಸ್ ನೊಂದಿಗೆ ಎಚ್ಚರಿಕೆ ದೇಶ ನೀಡುತ್ತದೆ.. ಇದರಿಂದಾಗಿ ವ್ಯಕ್ತಿಗಳು ಸಮಯನಷ್ಟವಿಲ್ಲದೆ ತುರ್ತು ಚಿಕಿತ್ಸೆ ಪಡೆಯಬಹುದು. ಇಂತಹವುಗಳಲ್ಲಿ ಬಹು ಪ್ರಸಿದ್ಧಿ ಹೊಂದಿರುವುದು ಸ್ಮಾಟ್ ð ವಾಚ್ ಮತ್ತು ಸ್ಮಾಟ್ ð ಬ್ರಾಸ್ಲೆಟ್ ಗಳು. ಈ ತಂತ್ರಜ್ಞಾನದ ಕಾರ್ಯಗತಗೊಳಿಸುವಿಕೆಯು ವಿಶೇಷ ಚೇತನರ ಪ್ರಗತಿ ಮತ್ತು ಒಟ್ಟಾರೆ ಬೆಳವಣಿಗೆಗೆ ಸಹಾಯವಾಗುತ್ತದೆ ಎಂಬ ಆಶಯ ನಮ್ಮದು. ತಯಾರಿಸಿದ ಪರಿಹಾರಗಳೊಂದಿಗೆ ಅವರಿಗೆ ಅಧಿಕಾರ ನೀಡುತ್ತದೆ, ಅವರ ಕಲಿಕೆ ಕೇವಲ ತರಗತಿ ಕೋಣೆಗಳಿಗೆ ಸೀಮಿತವಾಗಿಲ್ಲ ಎಂದು ಖಚಿತಪಡಿಸುತ್ತದೆ!

ಎಚ್ಚರಿಕೆ: ಈ ಮೇಲಿನ ವಿಷಯವು ಯಾವುದೇ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಯಾವುದೇ ರೀತಿಯ ಚಿಕಿತ್ಸೆಯಲ್ಲ. ಯಾವುದೇ ಅನುಮಾನಗಳಿದ್ದಲ್ಲಿ, ಅಥವಾ ಅಥವಾ ಚಿಕಿತ್ಸೆ/ ತರಬೇತಿಯನ್ನು ಪ್ರಾರಂಭಿಸುವ /ಬದಲಾಯಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore