ಡಾ ಸಿ ಪಿ ರವಿ ಕುಮಾರ್
ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)
ಮಾತ್ರೆಗಳು: ಲೋಬಾಹಮ್, ಫ್ರಿಸಿಯಮ್, ಲೊಬಾಜಮ್ ಎಂಡಿ
ಸಿರಪ್: ಕ್ಲೊಬಿಯಮ್ (ಐದು ಎಂಎಲ್ ನಲ್ಲಿ ಐದು ಎಂಜಿ)
ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು
ಕ್ಲೋಬಜಮ್ ಎಂಬುದು ಅಪಸ್ಮಾರದ ಚಿಕಿತ್ಸೆಯಲ್ಲಿ ವಿವಿಧ ಬಗೆಯ ಸೆಳೆವುಗಳನ್ನು (ಫಿಟ್ಸ್) ನಿಯಂತ್ರಿಸಲು ಬಳಸಲಾಗುವ ಒಂದು ಬಗೆಯ ಔಷಧ. ಇದನ್ನು ಅನುಪಸ್ಥಿತಿ ಸೆಳೆವು, ಟಾನಿಕ್- ಕ್ಲೊನಿಕ್ ಸೆಳೆವು, ಮ್ಯೊಕ್ಲೊನಿಕ್ ಸೆಳೆವು (ಫಿಟ್ಸ್), ಅಟೋನಿಕ್ ಸೆಳೆವು, ಮತ್ತು ಅರೆ ಸೆಳೆವಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಈ ಔಷಧಿಯನ್ನು ಸಾಮಾನ್ಯವಾಗಿ ಮತ್ತೊಂದು ಅಪಸ್ಮಾರ ನಿರೋಧಕ ಔಷಧದೊಂದಿಗೆ ಹೆಚ್ಚುವರಿಯಾಗಿ ಬಳಸಲಾಗುತ್ತದೆ.
(ಇದು ಮತ್ತೊಂದು ಅಪಸ್ಮಾರದ ಔಷಧಿ ಕ್ಲೊನಾಜೆಪಮ್ ಎಂದು ಗೊಂದಲಗೊಳ್ಳಬೇಡಿ. ಪ್ರತಿಯೊಂದು ಔಷಧಿಯನ್ನು ಬಳಸಲು ನೀಡಲಾಗುವ ಸೂಚನೆ, ಮತ್ತು ಸೇವಿಸುವ ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತವೆ. ವೈದ್ಯರ ಸಲಹೆ ಇಲ್ಲದೆ ಒಂದು ಔಷಧಿಯ ಬದಲು ಮತ್ತೊಂದು ಔಷಧಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ).
ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?
ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಕ್ಲೋಬಜಮ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.
ನಿಮ್ಮ ಮಗುವಿಗೆ ಕ್ಲೋಬಜಮ್ ನೀಡುವುದನ್ನುದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.
ದ್ರವ ರೂಪ, ಮಾತ್ರೆಗಳು, ಬಾಯಿಯಲ್ಲಿ ಕರಗುವಂತಹ ಮಾತ್ರೆಗಳು, (ಅಂದರೆ ಈ ಮಾತ್ರೆಗಳನ್ನು ನಾಲಿಗೆಯ ಕೆಳಗಡೆ ಇಟ್ಟುಕೊಂಡರೆ, ತಕ್ಷಣವೇ ಕರಗುತ್ತವೆ. ಮಾತ್ರೆಗಳನ್ನು ನುಂಗಲು ಕಷ್ಟಪಡುವ ಮಕ್ಕಳಿಗೆ ಇದು ಸಹಕಾರಿ)
ಸಾಮಾನ್ಯವಾಗಿ ಕ್ಲೋಬಜಮ್ ಅನ್ನು ರಾತ್ರಿ ವೇಳೆ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ, ನಿಮ್ಮ ವೈದ್ಯರು ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ತೆಗೆದುಕೊಳ್ಳುವಂತೆಯೂ ಸಹ ಸೂಚಿಸಬಹುದು. ಆದರೆ, ಕನಿಷ್ಟ 10-02 ಗಂಟೆಗಳ ಅಂತರವಿರಲಿ. ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಸಮಯದಲ್ಲಿ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ
ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.
ಸ್ವಲ್ಪ ಅವಧಿಗೆ ಕ್ಲೋಬಜಮ್‌ನ ಸೇವನೆ
ಅಪಸ್ಮಾರ ಸಮಸ್ಯೆಯುಳ್ಳ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ದಿನಗಳವರೆಗೆ ಅಂದರೆ ಮೂರರಿಂದ ಐದು ದಿನಗಳವರೆಗೆ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡಬಹುದು. ದಯವಿಟ್ಟು ವೈದ್ಯರ ಸಲಹೆಯನ್ನು ಪಾಲಿಸಿ.
ಔಷಧಿ ಕೊಡುವುದನ್ನುಮರೆತರೆ ಏನು ಮಾಡಬೇಕು?
ಮಾತ್ರೆಗಳು ಮತ್ತು ದ್ರವೌಷಧಿ: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.
ಯಾವುದೇ ಕಾರಣಕ್ಕೂ ಎರಡು ಡೋಸ್ ಕ್ಲೋಬಜಮ್ ನೀಡಬೇಡಿ.
ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.
ಔಷಧಿಯ ಪ್ರಮಾಣ ಎಷ್ಟಿರಬೇಕು?
ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಕ್ಲೋಬಜಮ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.
ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಲೋಬಜಮ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.
ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ
ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.
ಔಷಧಿಯನ್ನು ಹೇಗೆ ನೀಡಬೇಕು? “ಔಷಧಿಗಳನ್ನು ನೀಡುವುದು”
ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸ್ವಲ್ಪ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.
ದ್ರವ ಅಥವಾ ಸಿರಪ್: ಓರಲ್ ಸಿರಿಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನು ಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.
ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”
ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು (ಅಡ್ಡಪರಿಣಾಮಗಳು) ಉಂಟು ಮಾಡಬಹುದು. ಅಡ್ಡಪರಿಣಾಮಗಳನ್ನು ಕುರಿತ ನಮ್ಮ ಮಾಹಿತಿ ಕೈಪಿಡಿಯನ್ನು ಓದಿ.
ನಿಮ್ಮ ಚಿಂತೆಗೆ ಕಾರಣವಾಗಬಹುದಾದ ಅಡ್ಡಪರಿಣಾಮಗಳು – ಅಪರೂಪ
ಹೆಚ್ಚಿನ ಡೋಸ್ ನೀಡಿದಾಗ ಅಪರೂಪವಾಗಿ ಲಘುವಾದ ಕಂಪನ ಅಥವಾ ಕೈಯಲ್ಲಿ ನಡುಕ ಉಂಟಾಗಬಹುದು ಹಾಗೂ ಡೋಸ್ ಕಡಿಮೆ ಮಾಡಿದಂತೆ ಅದು ಮಾಯವಾಗುತ್ತದೆ.
ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ.
ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಈ ಎಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ ಕ್ಲೋಬಜಮ್ ಅಪಸ್ಮಾರಕ್ಕೆ ಪರಿಣಾಮಕಾರಿಯಾದ ಔಷಧಿ. ಹಾಗೂ ಮಗುವಿನ ಎಚ್ಚರ, ವರ್ತನೆ ಮತ್ತು ಸಾಮರ್ಥ್ಯಗಳ ಮೇಲೆ ತುಂಬಾ ಕಡಿಮೆ ಪರಿಣಾಮ ಹೊಂದಿದೆ.
ಕ್ಲೋಬಜಮ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?
ಕ್ಲೋಬಜಮ್ ಮತ್ತು ಗರ್ಭಧಾರಣೆ
ಈ ಔಷಧಿಯನ್ನು ಗರ್ಭಾವಸ್ಥೆಯಲ್ಲಿ ಬಳಸಿದಾಗ ’ನವಜಾತ ಶಿಶು ಹಿಂತೆಗೆದುಕೊಳ್ಳುವ ಸಿಂಡ್ರೋಮ್”ನ ಅಪಾಯವಿರುತ್ತದೆ. ಇದು ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ನರಶಾಸ್ತ್ರಜ್ಞರೊಂದಿಗೆ ಮಾತನಾಡಿ ಮತ್ತು ಗರ್ಭಧರಿಸುವ ಮೊದಲು ನೀವು ಸೇವಿಸುವ ಔಷಧಿಗಳನ್ನು ಪರಿಶೀಲಿಸಿ.
ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?
ಔಷಧಿಯನ್ನು…
ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.
ಉಲ್ಲೇಖಗಳು:
1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
CONSULTANT – PEDIATRIC NEUROLOGY
Aster CMI Hospital, Bangalore