ಡಾ ಸಿ ಪಿ ರವಿ ಕುಮಾರ್
ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)
ಬ್ರ್ಯಾಂಡ್ ಹೆಸರು:
ಮಾತ್ರೆ: ಒಮ್ನಾಕೊರ್ಟಿಲ್, ವೈಸೋಲೋನ್
ದ್ರವೌಷಧ: ಒಮ್ನಾಕೊರ್ಟಿಲ್ (೫ ಎಂಜಿ/ ೫ ಎಂಎಲ್) ಮತ್ತು ಒಮ್ನಾಕೊರ್ಟಿಲ್ FORTE (15ಎಂಜಿ/5ಎಂಎಲ್)
ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು
ಪ್ರೆಡ್ನಿಸೊಲೊನ್ ಎಂಬುದು ಸ್ಟಿರಿಯೊಡ್ ಆಗಿದ್ದು, ಇದನ್ನು ಅಸ್ತಮಾ, ಗೂರಲು ಕೆಮ್ಮು, ಕಿಡ್ನಿ ಸಮಸ್ಯೆ (ನೆಫ್ರೊಟಿಕ್ ಸಿಂಡ್ರೋಮ್), ಕೀಲು ಸಮಸ್ಯೆ (ಸಂಧಿವಾತ) ಮತ್ತು ಸೆಳೆವಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಎಪಿಲೆಪ್ಸಿ ಚಿಕಿತ್ಸೆ, ಇದನ್ನು ಸಾಮಾನ್ಯವಾಗಿ ಎಪಿಲೆಪ್ಟಿಕ್ ಸೆಳೆತ, ಎಪಿಲೆಪ್ಟಿಕ್ ಎನ್ಸೆಫಲೋಪತಿ (ಸೆಳೆವು ಆಗಾಗ್ಗೆ ಸಂಭವಿಸುತ್ತಲ್ಲದೆ, ಪ್ರಜ್ಞೆಯನ್ನು ದುರ್ಬಲಗೊಳಿಸುತ್ತದೆ) ಮತ್ತು ಸ್ಥಿತಿ ಎಪಿಲೆಪ್ಟಿಕಸ್ (ಅಂದರೆ ಗಂಟೆಗಳು / ದಿನಗಳವರೆಗೆ ಮುಂದುವರಿಯುವ ಸೆಳೆವು) ನಂತಹ ತೀವ್ರ ಸ್ವರೂಪದ ಸಮಸ್ಯೆಗಳ ಚಿಕಿತ್ಸೆಗೆ ಉಪಯೋಗಿಸಲು ಕಾಯ್ದಿರಿಸಲಾಗುತ್ತದೆ.
ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?
ಸಾಮಾನ್ಯವಾಗಿ ಪ್ರೆಡ್ನಿಸೊಲೊನನ್ನು ತೀವ್ರ ಸ್ವರೂಪದ ಅಪಸ್ಮಾರ ಇದ್ದಾಗ ಸೂಚಿಸಲಾಗುತ್ತದೆ. ಹಾಗಾಗಿ, ಚಿಕಿತ್ಸೆ ಪ್ರಾರಂಭಿಸುವ ಮುನ್ನ ವೈದ್ಯರೊಂದಿಗೆ ಚರ್ಚಿಸಿ. ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಪ್ರೆಡ್ನಿಸೊಲೊನ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಸಾಮಾನ್ಯವಾಗಿ
ನಿಮ್ಮ ಮಗುವಿಗೆ ಪ್ರೆಡ್ನಿಸೊಲೊನ್ ನೀಡುವುದನ್ನು ದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.
ಪ್ರೆಡ್ನಿಸೊಲೊನ್ ಯಾವ ರೂಪದಲ್ಲಿ ಲಭ್ಯವಿದೆ?
ದ್ರವ ಮತ್ತು ಮಾತ್ರೆಗಳ ರೂಪದಲ್ಲಿ ಲಭ್ಯವಿದೆ.
ಪ್ರೆಡ್ನಿಸೊಲೊನ್ ಅನ್ನು ಯಾವಾಗ ನೀಡಬೇಕು?
ಮಗುವಿನ ತೂಕ ಮತ್ತು ವೈದ್ಯಕೀಯ ಸಮಸ್ಯೆಯ ಆಧಾರದ ಮೇಲೆ ಔಷಧಯ ಪ್ರಮಾಣ ಬದಲಾಗುತ್ತದೆ, ಸ್ಟೀರಾಯ್ಡ್ಗಳನ್ನು ದಿನಕ್ಕೆ ಒಂದು ಬಾರಿ ಅಥವಾ ದಿನವೊಂದರಲ್ಲಿ ನಾಲ್ಕು ಬಾರಿ ಸಹ ನೀಡಬೇಕಾಗಬಹುದು. ದಯವಿಟ್ಟು ನಿಮ್ಮ ವೈದ್ಯರು ಸಲಹೆ ನೀಡಿ ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.
ಔಷಧಿ ಕೊಡುವುದನ್ನು ಮರೆತರೆ ಏನು ಮಾಡಬೇಕು?
ಮಾತ್ರೆಗಳು ಮತ್ತು ದ್ರವೌಷಧ: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.
ಯಾವುದೇ ಕಾರಣಕ್ಕೂ ಎರಡು ಡೋಸ್ ಪ್ರೆಡ್ನಿಸೊಲೊನ್ ನೀಡಬೇಡಿ
ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.
ಔಷಧಿಯ ಪ್ರಮಾಣ ಎಷ್ಟಿರಬೇಕು?
ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಪ್ರೆಡ್ನಿಸೊಲೊನ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.
ಚಿಕಿತ್ಸೆಯ ಪ್ರಾರಂಭದಲ್ಲಿ 2 ವಾರಗಳವರೆಗೆ ಹೆಚ್ಚಿನ ಪ್ರಮಾಣದ ಔಷಧಿ ನೀಡಲಾಗುತ್ತದೆ. ವಾರಗಳು ಉರುಳಿದಂತೆ 4 ವಾರಗಳೊಳಗಾಗಿ ಕ್ರಮೇಣ ಔಷಧಿಯ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದ ಸಂದರ್ಭಾನುಸಾರ, ಹೆಚ್ಚಿನ ಪ್ರಮಾಣದ ಔಷಧಿಯನ್ನು 3 ವಾರಗಳವರೆಗೆ ನೀಡಬೇಕಾಗಬಹುದು. ಸ್ಟೀರಾಯ್ಡ್ ನೀಡುವುದನ್ನು ಎಂದಿಗೂ ಥಟ್ಟನೆ ನಿಲ್ಲಿಸಕೂಡದು.
ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ.
ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.
ಔಷಧಿಯನ್ನು ಹೇಗೆ ನೀಡಬೇಕು?“ಔಷಧಿಗಳನ್ನು ನೀಡುವುದು”
ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು, ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.
ದ್ರವ ಅಥವಾ ಸಿರಪ್: ಸಿರಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನು ಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.
ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”
ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು(ಅಡ್ಡಪರಿಣಾಮಗಳು) ಉಂಟು ಮಾಡಬಹುದು.
ನಿಮ್ಮನ್ನು ಚಿಂತೆಗೀಡುವ ಅಡ್ಡಪರಿಣಾಮಗಳು
• ಜಠರದ ಉರಿತ: ಜಠರದ ಉರಿತವು ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮವಾಗಿದೆ, ಆದ್ದರಿಂದ ಹೊಟ್ಟೆಯ ಒಳಪದರವನ್ನು ರಕ್ಷಿಸುವ ಔಷಧಿಯನ್ನು ನೀಡಲಾಗುತ್ತದೆ. ಸ್ಟೀರಾಯ್ಡ್ಗಳನ್ನು ಸೂಚಿಸಿದಾಗ ಅಥವಾ ರಕ್ತದ ಹರಿವಿಗೆ ನೀಡಿದಾಗ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
• ಹಸಿವು ಹೆಚ್ಚಾಗುವುದು: ನಿಮ್ಮ ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚಿಗೆ ಹಸಿವಾಗಬಹುದು. ಇದು ಸಾಮಾನ್ಯವಾಗಿ ಅಸ್ಥಿರವಾಗಿರುತ್ತದೆ; ನೀವು ಸ್ಟೀರಾಯ್ಡ್ಗಳನ್ನು ನಿಲ್ಲಿಸಿದ ನಂತರ ಹಸಿವು ಸಾಮಾನ್ಯ ಮಟ್ಟಕ್ಕೆ ಬರುತ್ತದೆ. ತೂಕ ಹೆಚ್ಚಾಗುವುದನ್ನು ತಪ್ಪಿಸಲು, ಕೊಬ್ಬು ಮತ್ತು ಸಕ್ಕರೆಯ ಅಂಶ ಕಡಿಮೆ ಇರುವ ಆಹಾರವನ್ನು ತಿನ್ನಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ.
• ತೂಕ ಹೆಚ್ಚಾಗುವುದು: ಸಾಮಾನ್ಯವಾಗಿ ಅತಿಯಾದ ಸೇವನೆಯ ಹೊರತಾಗಿ ಇತರ ಕಾರ್ಯವಿಧಾನಗಳಿಂದಾಗಿ ಅವು ತೂಕವನ್ನು ಹೊಂದಿರುತ್ತವೆ. ಅವರ ಕೆನ್ನೆ ದುಂಡುದುಂಡಾಗುತ್ತದೆ. ನೀವು ಸ್ಟೀರಾಯ್ಡ್ಗಳನ್ನು ನಿಲ್ಲಿಸಿದ ನಂತರ 3 – 4 ವಾರಗಳಲ್ಲಿ ತೂಕವು ಸಾಮಾನ್ಯವಾಗುತ್ತದೆ.
• ಮುಂಗೋಪ, ಕಿರಿಕಿರಿ: ಮಗುವಿಗೆ ಕೆಲವು ವಾರಗಳವರೆಗೆ ಮುಂಗೋಪದ, ಕಿರಿಕಿರಿಯಾಗುತ್ತದೆ ಮತ್ತು ನಂತರ ಕೆಲವು ದಿನಗಳಲ್ಲಿ ಸರಿಹೋಗುತ್ತದೆ.
• ರೋಗನಿರೋಧಕ ಶಕ್ತಿಯ ನಿಗ್ರಹ: ಔಷಧ ಸೇವನೆಯು ರೋಗನಿರೋಧಕ ವ್ಯವಸ್ಥೆಯನ್ನು ನಿಗ್ರಹಿಸಬಹುದು. ಆದ್ದರಿಂದ, ಯಾವುದೇ ವಾಡಿಕೆ ಸೋಂಕು ಸಹ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಸ್ಟೀರಾಯ್ಡ್ಗಳನ್ನು ಸೇವಿಸಿದ ನಂತರ ಮಗುವಿಗೆ ಜ್ವರ ಇದ್ದರೆ, ದಯವಿಟ್ಟು ವೈದ್ಯರ ಬಳಿ ಕರೆದೊಯ್ಯುದು ಪರೀಕ್ಷಿಸಿ.
ಚಿಕನ್ ಪಾಕ್ಸ್ ಮತ್ತು ಸ್ಟಿರಾಯ್ಡ್
ಸಾಧ್ಯವಾದರೆ, ಮಗುವು ಚಿಕಿತ್ಸೆ ಪಡೆಯುವ ಅವಧಿಯಲ್ಲಿ ದಯವಿಟ್ಟು ಇತರ ಮಕ್ಕಳಿಂದ ಸ್ವಲ್ಪ ಸಮಯದವರೆಗೆ ಯವರೆಗೆ ದೂರವಿಡಿ, ನಿಮ್ಮ ಮಗುವಿಗೆ ಚಿಕನ್ ಪಾಕ್ಸ್ ಉಂಟಾದರೆ ಅಥವಾ ಚಿಕನ್ ಪೋಕ್ಸ್ ಹೊಂದಿರುವ ಯಾರೊಂದಿಗೂ ಸಂಪರ್ಕಕ್ಕೆ ಬಂದರೆ, ಚಿಕಿತ್ಸೆಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ. ಏಕೆಂದರೆ, ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು. (ಸಾಮಾನ್ಯವಾಗಿ, ಉತ್ತಮ ಮಕ್ಕಳಲ್ಲಿ ಚಿಕನ್ ಪೋಕ್ಸ್ಗೆ ಚಿಕಿತ್ಸೆಯ ಅಗತ್ಯವಿಲ್ಲ, ಆದರೆ ಸ್ಟೀರಾಯ್ಡ್ ಸೇವಿಸುವ ಮಕ್ಕಳು ಇದಕ್ಕೆ ಹೊರತಾಗಿರುತ್ತಾರೆ)
ಅಂತೆಯೇ, ನಿಮ್ಮ ಮಗುವು ದಡಾರ ಹೊಂದಿರುವ ಮಗುವಿನೊಂದಿಗೆ ಸಂಪರ್ಕಕ್ಕೆ ಬಂದರೆ, ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.
ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇಷ್ಟೆಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ, ಪೊನೊಬಾರ್ಬಿಟೋನ್ ಉತ್ತಮ ಅಪಸ್ಮಾರ ನಿರೋಧಕ ಔಷಧವಾಗಿದ್ದು, ಮಗುವಿನ ವರ್ತನೆ, ಎಚ್ಚರಿಕೆ ಮತ್ತು ಕಲಿಕಾ ಸಾಮರ್ಥ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
ಕೆಲವು ವೈದ್ಯಕೀಯ ಪರಿಸ್ಥಿತಿಗಳಲ್ಲಿ, ಸ್ಟೀರಾಯ್ಡ್ಗಳನ್ನು ದೀರ್ಘಾವಧಿ ಸೇವಿಸಲು(ವರ್ಷಗಳು) ಸೂಚಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅಡ್ಡಪರಿಣಾಮಗಳ ರೀತಿ ವಿಭಿನ್ನವಾಗಿರುತ್ತದೆ ಮತ್ತು ಅದನ್ನು ಇಲ್ಲಿ ವಿವರಿಸಲಾಗಿಲ್ಲ.
ಪ್ರೆಡ್ನಿಸೊಲೊನ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?
• ಪ್ಯಾರಾಸಿಟಮೆಲ್ ಅಥವಾ ಇಬುಪ್ರೊಫೆನ್ವುಳ್ಳ ಔಷಧಿಗಳು, ಆಂಟಿಬಯಾಟಿಕ್ಸ್ ಅಥವಾ ಇತರೆ ಸಾಮಾನ್ಯ ಔಷಧಿಗಳನ್ನು ನಿಮ್ಮ ಮಗುವಿಗೆ ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ, ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.
• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರೆ ಔಷಧಿಗಳು, ಪ್ರೆಡ್ನಿಸೊಲೊನ್ ನಷ್ಟೇ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಅಥವಾ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಾದರೆ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.
ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?
ಔಷಧಿಯನ್ನು…
• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.
• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.
• ತಂದ ಬಾಕ್ಸ್ ನಲ್ಲಿಯೇ ಇಡಿ.
ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.
ಉಲ್ಲೇಖಗಳು:
CONSULTANT – PEDIATRIC NEUROLOGY
Aster CMI Hospital, Bangalore