Site icon Dr C P Ravikumar

ವಿಟಮಿನ್ (ಜೀವಸತ್ವ) ’ಡಿ’

Vitamin D Rich Food

Vitamin D Rich Food

ವಿಟಮಿನ್ (ಜೀವಸತ್ವ) ’ಡಿ’
ವಿಟಮಿನ್ ಡಿ ಎಂಬುದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀವಸತ್ವಗಳಲ್ಲಿ ಒಂದಾಗಿದ್ದು, ಕೊಬ್ಬಿನಲ್ಲಿ ಕರಗುವ ಗುಣವನ್ನು ಹೊಂದಿದೆ. ಇವು ಕ್ಯಾಲ್ಸಿಫೆರಾಲ್ (ವಿಟಮಿನ್ ಡಿ 3), ಮತ್ತು ಎರ್ಗೋಕಾಲ್ಸಿಫೆರಾಲ್ (ವಿಟಮಿನ್ ಡಿ 2) ಗಳನ್ನು ಒಳಗೊಂಡಿರುವ ಸೆಕೋಸ್ಟೆರಾಯ್ಡ್ ಹಾರ್ಮೋನುಗಳಾಗಿವೆ.
ವಿಟಮಿನ್ ನ ಎರಡು ವಿಧಗಳಲ್ಲಿ ವಿಟಮಿನ್ ಡಿ 3 ಯನ್ನು ಶಕ್ತಿಯುತವೆಂದು ಪರಿಗಣಿಸಲಾಗಿದೆ. ಇದು ರಕ್ತದಲ್ಲಿನ ವಿಟಮಿನ್ ಡಿಯ ಮಟ್ಟವನ್ನು ಡಿ2 ಗಿಂತ ಸರಿಸುಮಾರು ಎರಡು ಪಟ್ಟು ಹೆಚ್ಚಿಸುತ್ತದೆ.

ದಿನನಿತ್ಯ ಬೇಕಾಗುವ ಪ್ರಮಾಣ
0-12 ತಿಂಗಳು- 10 ಮೈಕ್ರೊ ಗ್ರಾಂಗಳು
1-70 ವರ್ಷಗಳು – 15 ಮೈಕ್ರೊ ಗ್ರಾಂಗಳು
70 ವರ್ಷಗಳು – 20 ಮೈಕ್ರೊ ಗ್ರಾಂಗಳು
Institute of Medicine, Food and Nutrition Board. Dietary Reference Intakes for Calcium and Vitamin D. Washington, DC: National Academy Press, 2010.
ಆದಾಗ್ಯೂ, ಕೆಲವು ಅಧ್ಯಯನಗಳು ದೇಹದಲ್ಲಿ ಉತ್ತಮ ಮಟ್ಟದಲ್ಲಿ ವಿಟಮಿನ್ ಡಿ ಕಾಪಾಡಿಕೊಳ್ಳಲು ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುವ ಜನರು ಪ್ರತಿದಿನ 25-100 ಮೈಕ್ರೊಗ್ರಾಂಗಳಷ್ಟು ಜೀವಸತ್ವವನ್ನು ಸೇವಿಸುವ ಅಗತ್ಯವಿದೆ ಎಂದು ತೋರಿಸುತ್ತದೆ.

ವಿಟಮಿನ್ ಡಿ ಯ ಮೂಲಗಳು
  • ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು – ವಿಟಮಿನ್ ಡಿ ಪಡೆಯಲು ದೇಹವನ್ನು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಬಹುತೇಕ ಜನರಿಗೆ ಸುಲಭ ಮತ್ತು ಒಂದು ರೀತಿಯ ಖಾತರಿಯಾದ ವಿಧಾನ. ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಮಾತ್ರ ದೇಹಕ್ಕೆ ಬೇಕಾಗಿರುವ ವಿಟಮಿನ್ ಡಿ ಪೂರೈಕೆಯಾಗುತ್ತದೆ
  • ವಾರಕ್ಕೆ ಕನಿಷ್ಠ 2-3 ಬಾರಿ ಚುರುಗುಟ್ಟುವ/ ಸುಡುವ (mild sunburn) ಬಿಸಿಲಿನ ಸಮಯದ 1/4 ಭಾಗದಷ್ಟು ಸಮಯ ನಿಮ್ಮ ಮುಖ, ಕೈ, ತೋಳು, ಕಾಲು ಮತ್ತು ಕಾಲುಗಳನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಉತ್ಪಾದಿಸಲು ಚರ್ಮವನ್ನು ಉತ್ತೇಜಿಸಿದಂತಾಗುತ್ತದೆ.
  • ಸೂರ್ಯನ ಬೆಳಕಿಗೆ ದೇಹವನ್ನು ಎಷ್ಟು ಸಮಯದವರೆಗೆ ಒಡ್ಡಬೇಕೆಂಬುದು ವಯಸ್ಸು, ಚರ್ಮದ ಪ್ರಕಾರ, ಮೆಲನಿನ್ ಅಂಶ, ಋತು, ದಿನದ ಸಮಯ, ವಾತಾವರಣ ಮತ್ತು ಹವಾಮಾನ ಪರಿಸ್ಥಿತಿಗಳಂತಹ ವಿಭಿನ್ನ ಅಂಶಗಳನ್ನು ಅವಲಂಬಿಸಿರುತ್ತದೆ.
  • ಸನ್‌ಸ್ಕ್ರೀನ್ ಕ್ರೀಮನ್ನು ಹಚ್ಚದೆ 6 ದಿನಗಳ ಕಾಲ ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ಮುಂದಿನ 49-50 ದಿನಗಳವರೆಗೆ ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳದಿದ್ದರೂ ದೇಹಕ್ಕೆ ಅಗತ್ಯವಾದಷ್ಟು ವಿಟಮಿನ್ ಡಿ ಶೇಖರವಾಗಿರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಅದ್ಭುತವಲ್ಲವೇ! ದೇಹದಲ್ಲಿನ ಕೊಬ್ಬು, ವಿಟಮಿನ್ ಡಿ ಯ ಶೇಖರಣಾ ಸ್ಳಳವಾಗಿದ್ದು, ಬೇರೆ ಮೂಲಗಳು ಲಭ್ಯವಿಲ್ಲದಿದ್ದಾಗ ಇದು ವಿಟಮಿನ್ ಡಿ ಅನ್ನು ಬಿಡುಗಡೆ ಮಾಡುತ್ತದೆ.
  • ಭಾರತದಲ್ಲಿ, ದೇಹಕ್ಕೆ ಯಾವುದೇ ಹಾನಿಯಾಗದಷ್ಟು ಸೂರ್ಯನ ವಿಟಮಿನ್ ’ಡಿ’ ನಮ್ಮನ್ನು ಸೇರಲು ಉತ್ತಮ ಸಮಯ ಬೆಳಿಗ್ಗೆ 00 ರಿಂದ 11.00 ರವರೆಗೆ.
ಈ ಕೆಳಗಿನ ಕಾರಣಗಳಿಂದಾಗಿ ಹಿರಿಯರು ಮತ್ತು ಮಕ್ಕಳು ವಿಟಮಿನ್ ಡಿ ಕೊರತೆಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.
  • ಹಿರಿಯರ ದೇಹವು ಸೂರ್ಯನ ಶಾಖವನ್ನು ನಿಭಾಯಿಸುವಷ್ಟು ಬಲವಾಗಿರದ ಕಾರಣ ಅವರು ಬಿಸಿಲಿನಲ್ಲಿ ಕಡಿಮೆ ಸಮಯವನ್ನು ಕಳೆಯುತ್ತಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಸಮಯ ಶಾಲೆಗಳಲ್ಲಿರುತ್ತಾರೆ ಮತ್ತು ಮುಖ್ಯವಾಗಿ ಒಳಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
  • ಸೂರ್ಯನ ಬೆಳಕನ್ನು ವಿಟಮಿನ್ ಡಿ ಆಗಿ ಪರಿವರ್ತಿಸಲು ಸಹಾಯ ಮಾಡುವ ಕೋಶಗಳು ವೃದ್ಧರ ಚರ್ಮದಲ್ಲಿ ಕಡಿಮೆ ಇರುತ್ತದೆ.
  • ವಿಟಮಿನ್ ಡಿ ಅನ್ನು ಪೂರಕ ಆಹಾರಗಳ ಮೂಲಕ ಪಡೆದರೂ ಸಹ ಅದನ್ನು ದೇಹದಲ್ಲಿ ಹೀರಿಕೊಳ್ಳುವ ಸಾಮರ್ಥ್ಯ ಇರದಿರಬಹುದು
  • ಕಪ್ಪು ಬಣ್ಣದ ಚರ್ಮ, ದೇಹದಲ್ಲಿ ಹೆಚ್ಚುವರಿ ಕೊಬ್ಬು ಮತ್ತು ಹೆಚ್ಚಿನ ಎತ್ತರದ ಪ್ರದೇಶದಲ್ಲಿರುವ ವಾಸಿಸುವ ಮಕ್ಕಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ಸುಲಭವಾಗಿ  ಸೊಟ್ಟಕಾಲುಗಳು, ಮೂಳೆಗಳ ಮುರಿತ, ತಲೆಬುರುಡೆಯ ವಿರೂಪ, ಸೊಂಟದ ಎಲುಬಿನ ವಿರೂಪತೆಯಂತಹ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

 ವಿಟಮಿನ್ ಡಿ ಅಂಶವನ್ನೊಳಗೊಂಡ ನೈಜ ಆಹಾರ ಪದಾರ್ಥಗಳು

ಆಹಾರ ಪ್ರಮಾಣ ಮೈಕ್ರೊ ಗ್ರಾಂಗಳಲ್ಲಿ
ಕೊಬ್ಬಿನ ಅಂಶವುಳ್ಳ ಸಾಲ್ಮನ್ ನಂತಹ  ಮೀನು 100 g 16.7
ಮೊಟ್ಟೆ 100 g 2.2
ಸೋಯಾ ಮೊಸರು 100 g 2.5
ಹಂದಿಮಾಂಸ 100 g 1
ಪೌಷ್ಟಿಕಾಂಶವುಳ್ಳ ಹಾಲು 100 g 1.3
ಬಲವರ್ಧಿತ ಮೊಸರು 100 g 1.3
UV ಬೆಳಕಿನಲ್ಲಿ ಬೆಳೆದ ಅಣಬೆಗಳು 50 g 31.9
ಪೌಷ್ಟಿಕ ಸಿರಿಧಾನ್ಯಗಳು 100 g 8.3
ಪೌಷ್ಟಿಕ ಕಿತ್ತಳೆ ರಸ ಪಾಲಕ 100 g 2.5
ಪಾಲಕ್ ಸೊಪ್ಪು 100 g 0.7

  • ಆರೋಗ್ಯಕ್ಕೆ ಉಂಟಾಗುವ ಲಾಭಗಳುಪೂರಕಗಳು- ವಯಸ್ಸಾದವರಿಗೆ, ಸಮಭಾಜಕದಿಂದ ದೂರದಲ್ಲಿ ವಾಸಿಸುವ ಜನರಿಗೆ ಮತ್ತು ಚಳಿಗಾಲದಲ್ಲಿ ಪೂರಕಗಳು ಅವಶ್ಯಕ. ಇವುಗಳನ್ನು ವಿಶ್ವಾದ್ಯಂತ ತಯಾರಿಸಲಾಗುತ್ತದೆ ಮತ್ತು ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಅವನ್ನು ಆಯ್ಕೆ ಮಾಡಬಹುದು.

ದೇಹದ ಸಾಮರ್ಥ್ಯ ಮತ್ತು ಆಕಾರವನ್ನು ಕಾಪಾಡುತ್ತದೆ
ಮೂಳೆಗಳು ಮತ್ತು ಹಲ್ಲುಗಳ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಅಂಶವು ಉತ್ತಮ ಮಟ್ಟದಲ್ಲಿಲ್ಲದಿದ್ದರೆ, ಮೂಳೆಗಳು ದುರ್ಬಲಗೊಂಡು ಕೃಶವಾಗುತ್ತವೆ. ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಅಂಶವಿದ್ದಲ್ಲಿ, ಮಕ್ಕಳಲ್ಲಿ ಕಂಡುಬರುವ ವಾತದ ಸಮಸ್ಯೆ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಉರಿಯೂತ ಸಮಸ್ಯೆಯ ವಿರುದ್ಧ ಹೋರಾಡುತ್ತದೆ
ವಿಟಮಿನ್ ಡಿ ಅಂಶವು ನಮ್ಮ ದೇಹವು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ದೇಹವು ಬೇಗನೆ ಚೇತರಿಸಿಕೊಳ್ಳಲು ನೆರವಾಗುತ್ತದೆ. ಮಾತ್ರವಲ್ಲದೆ, ಜೀವಕೋಶದ ಬೆಳವಣಿಗೆಯ ಸಮನ್ವಯತೆಗೆ ಸಹಾಯ ಮಾಡುತ್ತದೆ.

ಹೃದಯರಕ್ತನಾಳ ಮತ್ತು ನರಗಳ ಕಾರ್ಯವನ್ನು ನಿರ್ವಹಿಸುತ್ತದೆ
ರಕ್ಷರಕ್ತನಾಳಗಳು ಹೆಪ್ಪುಗಟ್ಟುವುದನ್ನು ತಡೆಯುವುದರೊಂದಿಗೆ ಹೃದಯದ ಕಾರ್ಯವನ್ನು ನಿರ್ವಹಿಸುತ್ತದೆ. ಮಾತ್ರವಲ್ಲದೆ, ನರಮಂಡಲದ ಕ್ರಿಯೆಯನ್ನು ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ವಿಟಮಿನ್ ಡಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳಿಲ್ಲದಿದ್ದರೂ, ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಕಡಿಮೆ ಹೊಂದಿರುವ ಇಟಲಿ, ಸ್ಪೇನ್ ದೇಶಗಳ ನಾಗರಿಕರಲ್ಲಿ ಕೋವಿಡ್ -19 ತೀವ್ರ ಪರಿಣಾಮ ಬೀರಿದೆ ಎಂದು ಕಂಡುಬಂದಿದೆ. ಆದರೆ, ಚೀನಾವನ್ನು ಹೊರತುಪಡಿಸಿ (ಇದು ಸಾಂಕ್ರಾಮಿಕದ ರೋಗದ ಮೂಲವಾಗಿತ್ತು) ಉತ್ತರ ಯುರೋಪಿಯನ್ ಮತ್ತು ಏಷ್ಯಾದ ದೇಶಗಳ ಜನರು ವೈರಸ್‌ನಿಂದ ಕಡಿಮೆ ಪರಿಣಾಮ ಪರಿಣಾಮವನ್ನು ಅನುಭವಿಸಿದರು. ನಿಮ್ಮ ದೇಹದ ವಿಟಮಿನ್ ಡಿ ಮಟ್ಟವು 50-80 ಎನ್‌ಜಿ / ಮಿಲಿ ಇದ್ದಲ್ಲಿ, ರೋಗ ನಿರೋಧಕ ಶಕ್ತಿ ಉತ್ತಮವಾಗಿದೆ ಎಂದರ್ಥ.
ಆದ್ದರಿಂದ, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಬಹುದು.ದೇಹದಲ್ಲಿ ಉತ್ತಮ ಮಟ್ಟದಲ್ಲಿ ವಿಟಮಿನ್ ಡಿ ಯ ಕಾಪಾಡಿಕೊಳ್ಳುವ ಮೂಲಕ ಕೋವಿಡ್ -19 ವಿರುದ್ಧ ಮಾತ್ರವಲ್ಲದೆ ಹಲವಾರು ಇತರ ಮಾರಕ ಕಾಯಿಲೆಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದು.
ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಹೀರಿಕೊಳ್ಳುವಿಕೆ
ವಿಟಮಿನ್ ಡಿ, ಬಲವಾದ ಮತ್ತು ಆರೋಗ್ಯಕರ ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಅನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇತರೆ
  • ಸೋರಿಯಾಸಿಸ್ ಸಮಸ್ಯೆಗೆ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ
  • ಮಧುಮೇಹವನ್ನು ತಡೆಗಟ್ಟುವ ಸಾಧ್ಯತೆ ಹೆಚ್ಚಿರುತ್ತದೆ
ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
  • ವಾತ
  • ಎಲುಬು ಸಮಸ್ಯೆ (Osteoporosis)
  • ಹೃದ್ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆ
  • ದುರ್ಬಲಗೊಂಡ ಮೂಳೆ ಮತ್ತು ನೋವು
  • ಸ್ನಾಯು ದೌರ್ಬಲ್ಯ
  • ಆಸ್ಟಿಯೋಮಲೇಶಿಯಾ
  • ಆಟೋಇಮ್ಯೂನ್ ಕಾಯಿಲೆಯ ಸಂಭವನೀಯ ಅಪಾಯ
ಹೈಪರ್ವಿಟಮಿನೋಸಿಸ್-  ಡಿ

ವಿಟಮಿನ್ ಡಿಯ ಅಧಿಕ ಸೇವನೆಯು ಹೈಪರ್ವಿಟಮಿನೋಸಿಸ್ ಡಿ ಎಂಬ ಸ್ಥಿತಿಗೆ ಕಾರಣವಾಗಬಹುದು, ಸಾಮಾನ್ಯವಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಸಮೃದ್ಧವಾಗಿ ಹೊಂದಿರುವ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.. ಇದು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕಾರಣಗಳು:
  • ಪೂರಕ ಪದಾರ್ಥಗಳನ್ನು ಸೇವಿಸುವುದು (ಸೂಕ್ತ ಪ್ರಮಾಣಕ್ಕಿಂತ ಹೆಚ್ಚು)
  • ವೈದ್ಯರ ಸಲಹೆಯಿಲ್ಲದೆ ಸೂಕ್ತ ಪ್ರಮಾಣಕ್ಕಿಂತ ಹೆಚ್ಚಿನ ವಿಟಮಿನ್ ಸೇವನೆ
  • ಕೆಲವು ಔಷಧಿಗಳು ಉದಾ: ಡಿಗೊಕ್ಸಿನ್ (ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ) ಅಥವಾ ಥಿಯಾಜೈಡ್ ಮೂತ್ರವರ್ಧಕಗಳು ದೇಹದಲ್ಲಿ ವಿಟಮಿನ್ ಮಟ್ಟವನ್ನು, ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಇತರ ಔಷಧಿಗಳಾದ ಆಂಟಾಸಿಡ್ಗಳು, ಆಂಟಿಟ್ಯೂಬರ್ಕ್ಯುಲೋಸಿಸ್ ಔಷಧಿಗಳು ಮತ್ತು ಐಸೋನಿಯಾಜೈಡ್ ಇತ್ಯಾದಿ.

ಹೈಪರ್ವಿಟಮಿನೋಸಿಸ್ ಡಿ ಯು ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
  • ಅನೋರೆಕ್ಸಿಯಾ
  • ತೂಕ ನಷ್ಟ
  • ಪಾಲಿಯುರಿಯಾ
  • ಹೃದಯ ಸ್ತಂಭನ
  • ನಾಳೀಯ ಮತ್ತು ಅಂಗಾಂಶಗಳ ಕ್ಯಾಲ್ಸಿಫಿಕೇಷನ್ (ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗುವ ಕಾರಣ)
  • ಲಿಂಫೋಮಾ ಮತ್ತು ಮೂತ್ರಪಿಂಡದ ಕಾಯಿಲೆಯನ್ನು ಇನ್ನಷ್ಟು ಹದಗೆಡಿಸುತ್ತದೆ (ಅತಿಯಾದ ಕ್ಯಾಲ್ಸಿಯಂನಿಂದಾಗಿ

ಅಪಸ್ಮಾರ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ವಿಟಮಿನ್ ಡಿ ಅನ್ನು ಪೂರಕವಾಗಿ ತೆಗೆದುಕೊಳ್ಳಬೇಕೇ?
ಅಪಸ್ಮಾರ ನಿರೋಧಕ ಔಷಧಿಗಳು ಕ್ಯಾಲ್ಸಿಯಂ ಅಂಶದೊಂದಿಗೆ ದೇಹದಲ್ಲಿನ ಮೂಳೆಗಳು ಮತ್ತು ಕೀಲುಗಳನ್ನು ಸುಲಭವಾಗಿ ದುರ್ಬಲಗೊಳಿಸಿ ನೋವುಂಟು ಮಾಡುತ್ತವೆ. ಆದಾಗ್ಯೂ, ದೇಹದಲ್ಲಿನ ಕ್ಯಾಲ್ಸಿಯಂ ನಿಯಂತ್ರಣಕ್ಕೆ ವಿಟಮಿನ್ ಡಿ ಪ್ರಮುಖ ವಿಟಮಿನ್ ಆಗಿದೆ. ಅಪಸ್ಮಾರ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವ ರೋಗಿಗಳು ತಮ್ಮ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮಟ್ಟವನ್ನು ವರ್ಷದಲ್ಲಿ ಕನಿಷ್ಟ ಎರಡು ಬಾರಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ನಂತರ, ಆಸ್ಟಿಯೋಪತಿ ಮತ್ತು ಹೈಪರ್ವಿಟಮಿನೋಸಿಸ್ ಡಿ ಯನ್ನು ತಡೆಗಟ್ಟುವ ಸಲುವಾಗಿ ಪೂರಕ ಔಷಧವೆಂಬಂತೆ ವಿಟಮಿನ್ ಡಿ ಯನ್ನು ನೀಡಲಾಗುತ್ತದೆ.

ಅಡುಗೆ/ ಬೇಯಿಸುವ ಪ್ರಕ್ರಿಯೆಯು ವಿಟಮಿನ್ ಡಿ
ಅನ್ನು ನಾಶಮಾಡುತ್ತದೆಯೇ?
ಅಡುಗೆ/ ಬೇಯಿಸುವ ಪ್ರಕ್ರಿಯೆಯು ವಿಟಮಿನ್ ಡಿ ಯ ನಷ್ಟಕ್ಕೆ ಕಾರಣವಾಗಬಹುದು. ಆದರೆ, ಇದು ಅಡುಗೆಯು ಒಳಗೊಳ್ಳುವ ಆಹಾರ ಪದಾರ್ಥಗಳು ಮತ್ತು ತಾಪನ ಪ್ರಕ್ರಿಯೆಯನ್ನು ಅವಲಂಬಿಸಿರುತ್ತದೆ.
ಕೊಬ್ಬಿನಲ್ಲಿ ಕರಗುವ ಗುಣ ಹೊಂದಿರುವ ವಿಟಮಿನ್ ಡಿ ಯು, ಮುಖ್ಯವಾಗಿ ಬೆಣ್ಣೆ ಅಥವಾ ಎಣ್ಣೆಗಳಲ್ಲಿ ಬೇಯಿಸಿದಾಗ ನಷ್ಟವಾಗುತ್ತದೆ.
ಕುದಿಯುವಿಕೆಯು ವಿಟಮಿನ್ ಡಿ ಗೆ ಹೆಚ್ಚು ಹಾನಿ ಮಾಡುವುದಿಲ್ಲ.
Jakobsen J, Knuthsen P. Stability of vitamin D in foodstuffs during cooking. Food Chem. 2014;148:170-175. doi:10.1016/j.foodchem.2013.10.043
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore

Exit mobile version