ಸ್ನಾಯು ಸೆಳೆತಕ್ಕೆ (ಸೆಟೆದುಕೊಳ್ಳುವುದು) ಬೊಟೊಕ್ಸ್ ಚಿಕಿತ್ಸೆ
ದೇಹದ ಕೇಂದ್ರ ನರಮಂಡಲವನ್ನು ರೂಪಿಸುವ ಮೆದುಳು ಅಥವಾ ಬೆನ್ನುಹುರಿಗೆ ಬಿದ್ದ ಪೆಟ್ಟು, ಅಥವಾ ಗಾಯದ ನಂತರ ಉದಾ: ಪಾರ್ಶ್ವವಾಯು, ಅಂಗಾಂಶ ಗಟ್ಟಿಯಾಗುವುದು (multiple sclerosis) ಅಥವಾ ಮೆದುಳಿನ ನಿಸ್ಸಸ್ವತೆಯ ಸಮಸ್ಯೆ ಕಂಡುಬಂದ ನಂತರದಲ್ಲಿ ಸ್ನಾಯು ಸೆಳೆತದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ನಂತರ ಸ್ನಾಯುಗಳಿಗೆ ಅಂಟಿಕೊಂಡಿರುವ ನರಗಳು (ಬಾಹ್ಯ ನರಮಂಡಲವನ್ನು ರೂಪಿಸುವ) ಮೆದುಳಿನ ನಿಯಂತ್ರಣದಲ್ಲಿರುವುದಿಲ್ಲ. ಪರಿಣಾಮವಾಗಿ ನರಗಳು, ಮತ್ತು ಸ್ನಾಯುಗಳು ತನ್ನಂತಾನೇ ಸಕ್ರಿಯಗೊಳ್ಳುತ್ತವೆ. ಇದು ಸ್ನಾಯುಗಳನ್ನು ಸಂಕುಚಿತಗೊಳಿಸುತ್ತವೆ. ದಿನಕಳೆದಂತೆ ಸ್ನಾಯುಗಳಲ್ಲಿ ಬಿಗಿತ, ಗಡಸುತನಕ್ಕೆ ಕಾರಣವಾಗುತ್ತದೆ.
ವ್ಯಕ್ತಿಯು ಅಂಗಾಂಗಳನ್ನು ಆಡಿಸಲು ಪ್ರಯತ್ನಿಸಿದಾಗ, ಸಂಪೂರ್ಣವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಇದು, ಸಮಸ್ಯೆಯುಳ್ಳ ಸ್ನಾಯುಗಳಲ್ಲಿ ದ್ರವ ಚಲನೆಯನ್ನು ತಡೆಯುತ್ತದೆ. ಮಾತ್ರವಲ್ಲದೆ, ಮಾತು ಮತ್ತು ನಡಿಗೆಯ ಮೇಲೂ ಸಹ ಪರಿಣಾಮ ಬೀರಬಹುದು ಹಾಗೂ ವ್ಯಕ್ತಿಯು ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ನೋವನ್ನು ಸಹ ಉಂಟು ಮಾಡುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ, ಸ್ನಾಯುಗಳು ಶಾಶ್ವತವಾಗಿ ಸಂಕುಚಿತಗೊಳ್ಳಬಹುದು. ಇದರಿಂದ ಕೀಲುಗಳಲ್ಲಿ ಈ ಕೆಳಗಿನ ಸಮಸ್ಯೆಗಳುಂಟಾಗಬಹುದು.
• ಸ್ನಾಯುಗಳು ಬಿಗಿಯಾಗುವುದರಿಂದ ಮೊಣಕೈ ಬಾಗಿದಂತಾಗುವುದು
• ಕಾಲಿನ ಬೆರಳುಗಳು ಸುರುಳಿಯಾಕಾರದಂತಾಗುವುದು
• ಮುಷ್ಟಿಗಳು ಬಿಗಿಯಾಗುವುದು
• ಹೆಬ್ಬೆರಳು ಬಾಗಿದಂತಾಗುವುದು
• ಪಾದದ ಕೀಲುಗಳು ಗಟ್ಟಿಯಾಗುವುದು
• ಪಾದಗಳು ತಿರುಚಿದಂತಾಗುವುದು
• ಕೈಕಾಲುಗಳ ಸ್ನಾಯುಗಳು ಸಮತೋಲನ ಕಳೆದುಕೊಳ್ಳುವುದು
ನರ ಚಟುವಟಿಕೆಯ ಸಾಮರ್ಥ್ಯವನ್ನು ತಿಳಿಯಲು, ಸ್ನಾಯುಗಳ ಸಂಕೋಚನವನ್ನು ಕಡಿಮೆ ಮಾಡಲು ಹಾಗೂ ವ್ಯಕ್ತಿಯು ಕ್ರಿಯಾಶೀಲವಾಗಿದ್ದಾಗ/ ನಿಷ್ಕ್ರಿಯವಾಗಿದ್ದಾಗ ಕೀಲುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರೀಕ್ಷಿಸಲು ದೈಹಿಕ ಪರೀಕ್ಷೆಯನ್ನು ಕೈಗೊಳ್ಳಬಹುದು. ಸ್ನಾಯುಗಳ ಸೆಳೆತವು ಕಡಿಮೆಯಾದಲ್ಲಿ, ಸಮಸ್ಯೆಯ ತೀವ್ರತೆ ಮತ್ತು ಅದರಿಂದುಟಾಗುವ ನೋವು ಸಹ ಕಡಿಮೆಯಾಗುತ್ತದೆ. ಜೊತೆಗೆ. ವ್ಯಕ್ತಿಯು ಹೆಚ್ಚು ದೈಹಿಕ ಚಲನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದರ ಅನುಕೂಲಗಳು ಹೀಗಿವೆ:
1. ದಿನನಿತ್ಯದ ಕರ್ಮಗಳನ್ನು ಮಾಡಲು ಸುಲಭವಾಗುವುದು ಉದಾ: ಹಲ್ಲುಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಧರಿಸುವುದು, ಶೌಚಾಲಯ ಬಳಕೆ ಇತರೆ
2. ರೋಗಿಗಳು ಧರಿಸಬೇಕಾದ ಬ್ರೇಸ್ (braces) ಅಥವಾ ಸ್ಪ್ಲಿಂಟ್‌ಗಳ (splints) ಅಳವಡಿಕೆ
3. ದೈನಂದಿನ ಚಟುವಟಿಕೆಗಳನ್ನು ಮಾಡುವ ಸಾಮರ್ಥ್ಯ ಸುಧಾರಿಸುವುದು (ನಿಲ್ಲುವುದು, ನಡೆಯುವುದು, ಕುಳಿತುಕೊಳ್ಳುವುದು, ಮುಂಗೈಗಳ ಬಳಕೆ)
4. ನಡಿಗೆ ಉತ್ತಮಗೊಳ್ಳುವುದು ಮತ್ತು ಸ್ನಾಯುಗಳು ಹಿಗ್ಗುವುದು
ಸಾಮಾನ್ಯವಾಗಿ. ಸ್ನಾಯು ಸೆಳೆತ/ ಸೆಟೆದುಕೊಳ್ಳುವಿಕೆಗೆ ಆರಂಭದಲ್ಲಿ ನೀಡುವ ಚಿಕಿತ್ಸೆಗಳಿವು:
1. ದೈಹಿಕ ಚಿಕಿತ್ಸೆ ಅಥವಾ ಔದ್ಯೋಗಿಕ ಚಿಕಿತ್ಸೆ (Physical therapy ೦or occupational therapy) ನರವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಲು ಅನುಕೂಲವಾಗುವಂತೆ ವ್ಯಾಯಾಮಗಳನ್ನು ಸೂಚಿಸಲಾಗುತ್ತದೆ. ಏಕೆಂದರೆ, ಈ ಸೆಳೆತವು ಕೈ ಅಥವಾ ಕಾಲುಗಳು ಕಾಣಿಸಿಕೊಳ್ಳಬಹುದು ಅಥವಾ ತಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಾಂಗಳಲ್ಲಿ ಈ ತೊಂದರೆ ಉಂಟಾಗಬಹುದು. ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ/ ವ್ಯಕ್ತಿಗತವಾಗಿ ಚಿಕಿತ್ಸೆಯನ್ನು ಯೋಜಿಸಲಾಗುತ್ತದೆ.
2. ನರಗಳಿಗೆ / ನರಗಳ ಸುತ್ತಮುತ್ತ ಅಥವಾ ಬೆನ್ನಿನ ಮೂಳೆಗೆ ಬೊಟುಲಿನಮ್ (botulinum) ನೀಡುವ ಮೂಲಕ ಸೆಳೆತಕ್ಕೆ ಒಳಗಾದ ಸ್ನಾಯುಗಳಿಗೆ ಚಿಕಿತ್ಸೆ ನೀಡಬಹುದು. ಇದು ನರಗಳ ಮೂಲಕ ಸ್ನಾಯುಗಳಿಗೆ ಪ್ರಚೋದನೆ ಉಂಟಾಗುವುದನ್ನು ತಡೆಯುತ್ತದೆ ಹಾಗೂ ಸೆಳೆತವನ್ನು ಕಡಿಮೆ ಮಾಡುತ್ತದೆ.
3. ಬೊಟುಲಿನಮ್ ಟಾಕ್ಸಿನ್ (Botulinum toxin) (ಅಥವಾ ಬೊಟೊಕ್ಸ್) ಅನ್ನು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ (Botulinum toxin) ಎಂಬ ಬ್ಯಾಕ್ಟೀರಿಯಾದಿಂದ ಶುದ್ಧೀಕರಿಸಲಾಗುತ್ತದೆ. ಇದು ನ್ಯೂರೋಟಾಕ್ಸಿನ್ (neurotoxin) ಆಗಿದ್ದು, ಸಾಮಾನ್ಯವಾಗಿ ಅದರ ಅಗತ್ಯ ಮತ್ತು ಉಪಯುಕ್ತತೆಯ ಆಧಾರದ ಮೇಲೆ ದೇಹದ ವಿವಿಧ ಭಾಗಗಳಿಗೆ ನೀಡಲಾಗುತ್ತದೆ. ಮುಖದ ಮೇಲಿನ ಸುಕ್ಕುಗಳು ಮತ್ತು ಗೆರೆಗಳು ಮತ್ತು ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡಲು ಬೊಟೊಕ್ಸ್ ಅನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಸ್ನಾಯು ಸೆಳೆತಕ್ಕೆ ಬೊಟೊಕ್ಸ್‌ಚಿಕಿತ್ಸೆ
ನರವಿಜ್ಞಾನಿ ಹಾಗೂ ಭೌತಿಕ ಚಿಕಿತ್ಸಕರೊಂದಿಗೆ ಸಮಾಲೋಚನೆ ನಡೆಸಿ ರೋಗಿಯ ಯಾವ ಸ್ನಾಯುವಿನಲ್ಲಿ ಸಮಸ್ಯೆಯಿದೆ ಇದೆ ಎಂದು ಗುರುತಿಸಲಾಗುತ್ತದೆ. ಹಾಗೂ ಸ್ನಾಯುಗಳಲ್ಲಿ ಯಾವುದೇ ಸಂಕೋಚನಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.
2. ದೈಹಿಕ ತರಬೇತಿಯು ಸ್ನಾಯುವಿನ ಬಿಗಿತವನ್ನು ಸಾಕಷ್ಟು ಕಡಿಮೆ ಮಾಡುವುದರಿಂದ ಈ ತರಬೇತಿಯ ನಂತರ ಬೊಟೊಕ್ಸ್ ಚುಚ್ಚುಮದ್ದನ್ನು ನೀಡುವ ದಿನವನ್ನು ನಿಗದಿಪಡಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬ್ರೇಸಿಂಗ್ ಅಥವಾ ಪಟ್ಟಿಯು ಅಗತ್ಯವಾಗಬಹುದು.
3. ನರವಿಜ್ಞಾನಿಗಳು…
• ಬೊಟೊಕ್ಸ್‌ನ ಪ್ರಮಾಣ ಮತ್ತು ಡೋಸೇಜ್
• ಚುಚ್ಚುಮದ್ದು ನೀಡಬೇಕಾದ ಸ್ಥಳಗಳ ಸಂಖ್ಯೆ
• ಮತ್ತು ಚುಚ್ಚುಮದ್ದು ನೀಡಬೇಕಾದ ಒಟ್ಟು ಸ್ನಾಯುಗಳು – ಇವೆಲ್ಲವನ್ನು ಕುರಿತು ನಿರ್ಧರಿಸುತ್ತಾರೆ.
• ಅಪರೂಪದ ಸಂದರ್ಭಗಳಲ್ಲಿ, ಎಲೆಕ್ಟ್ರೋಮ್ಯೋಗ್ರಾಫ್ (ಇಎಂಜಿ) ಯಂತ್ರ ಬೇಕಾಗಬಹುದು.
4. ದೇಹದಲ್ಲಿ ಇಂಜೆಕ್ಷನ್ ಅನ್ನು ನೀಡುವ ಸ್ಥಳವನ್ನು ಗುರುತಿಸಿ ಸಿದ್ಧಪಡಿಸಲಾಗುತ್ತದೆ. ಸೂಜಿಯಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ನೋವು ನಿವಾರಕ/ ಅರವಳಿಕೆಯನ್ನು ನೀಡುತ್ತಾರೆ. ಚುಚ್ಚುಮದ್ದನ್ನು ಸಾಮಾನ್ಯವಾಗಿ ಇಂಜೆಕ್ಷನ್ ಅನ್ನು ಸಣ್ಣ ಸೂಜಿಯಿಂದ ತಯಾರಿಸಲಾಗುತ್ತದೆ.
ಇಂಜೆಕ್ಷನ್ ನೀಡಿದ ನಂತರ, ರೋಗಿಯನ್ನು ಕೆಲವು ಗಂಟೆಗಳ ಕಾಲ ಸೂಕ್ಷ್ಮವಾಗಿ ಗಮನಸಿಬೇಕಾಗುತ್ತದೆ. ನಂತರ ವ್ಯಕ್ತಿಯು ತನ್ನ ಕೆಲಸ-ಕಾರ್ಯಗಳನ್ನು ಪುನರಾರಂಭಿಸಬಹುದು. ನೀಡಿದ ಕೆಲವೇ ಗಂಟೆಗಳಲ್ಲಿ ಬೊಟೊಕ್ಸ್ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
6. ಬೊಟೊಕ್ಸ್ ಚುಚ್ಚುಮದ್ದಿನ ಪರಿಣಾಮವು ಹೆಚ್ಚು ದಿನಗಳ ಕಾಲ ಇರುವುದಿಲ್ಲ. ಆದರೆ, ಇದು ಸ್ನಾಯುಗಳ ಚಲನೆಯನ್ನು ಸುಧಾರಿಸುತ್ತದೆ ಮತ್ತು ಒಮ್ಮೆ ಚುಚ್ಚುಮದ್ದು ಪಡೆದ ನಂತರ 3-5 ತಿಂಗಳ ಅವಧಿಗೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.
7. ರೋಗಿಯು ಕನಿಷ್ಠ 3 ತಿಂಗಳುಗಳ ಅಂತರದಲ್ಲಿ ಹಲವು ಬಾರಿ ಈ ರೀತಿಯ ಚಿಕಿತ್ಸೆ ಪಡೆಯಬಹುದು
ಸ್ನಾಯು ಸೆಳೆತಕ್ಕಾಗಿ ಬೊಟೊಕ್ಸ್ ಚಿಕಿತ್ಸೆಯ ಅಡ್ಡಪರಿಣಾಮಗಳು ವೈವಿಧ್ಯಮಯವಾಗಿದ್ದು, ಹೀಗಿವೆ:
• ತುರಿಕೆ, ದದ್ದು, ಕೆಂಪು ಬಾವು
• ಉಬ್ಬಸ, ಆಸ್ತಮಾ ಲಕ್ಷಣಗಳು, ಉಸಿರಾಟದ ತೊಂದರೆ
• ತಲೆತಿರುಗುವಿಕೆ ಅಥವಾ ಮೂರ್ಛೆ ಬಿದ್ದಂತೆ ಭಾಸವಾಗುವುದು
• ಬಾಯಿ ಒಣಗಿಂದಂತಾಗುವುದು, ನುಂಗಲು ತೊಂದರೆ
• ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು
• ಆಯಾಸ, ತಲೆನೋವು
• ದೃಷ್ಟಿ ಎರಡೆರಡಾಗಿ / ಮಸುಕಾಗಿ ಕಾಣುವುದು, ಕಣ್ಣಿನ ಮೇಲಿನ ಚರ್ಮವು ಇಳಿಬಿದ್ದಂತಾಗುವುದು, ಕಣ್ಣುಗಳಲ್ಲಿ ತೇವಾಂಶವಿಲ್ಲದಿರುವುದು
• ಒರಟು ಒರಟು ಧ್ವನಿ ಅಥವಾ ಮಾತನಾಡಲು ಅಸಮರ್ಥತೆ (ಡಿಸ್ಫೋನಿಯಾ)
• ಪದಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿರುವುದು (ಡೈಸಾರ್ತ್ರಿಯಾ)
• ಮೂತ್ರ ವಿಸರ್ಜನೆಯನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು
ಕೆಲವರಿಗೆ ಬೊಟುಲಿನಮ್ ಇಂಜೆಕ್ಷನ್ ನಿಂದ ಅಲರ್ಜಿ ಉಂಟಾಗಬಹುದು. ಇದರಿಂದ ತುಟಿಗಳು, ಗಂಟಲು ಹಾಗೂ ನಾಲಿಗೆಯು ಊದಿಕೊಳ್ಳುವ ಸಾಧ್ಯತೆಯಿರುತ್ತದೆ. ಶ್ವಾಸಕೋಶದಲ್ಲಿ ಗಾಳಿಯು ವಾಯುಮಾರ್ಗಗಳ ಒಳಗೆ ಮತ್ತು ಹೊರಹೋಗಲು ಸಮಸ್ಯೆಯುಂಟಾಗಬಹದು. ಇದಕ್ಕೆ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ.
ಸ್ನಾಯು ಸೆಳೆತದಿಂದ ಬಳಲುವ ವ್ಯಕ್ತಿಗಳಿಗೆ ಬೊಟೊಕ್ಸ್ ಚಿಕಿತ್ಸೆಯ ಜೊತೆಗೆ ಸಾಮರ್ಥ್ಯವನ್ನು ಸುಧಾರಿಸುವ ತರಬೇತಿ ಮತ್ತು ದೈಹಿಕ ತರಬೇತಿಯನ್ನು ನೀಡಿದಾಗ ಅವರಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ (ಫಲಿತಾಂಶವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದ ಹೊರತಾಗಿಯೂ ಸಹ). ಬೊಟೊಕ್ಸ್ ಚಿಕಿತ್ಸೆಯಲ್ಲಿ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದಾದ ಸಾಧ್ಯತೆಯಿರುವುದರಿಂದ, ತರಬೇತಿ ಪಡೆದ ಮತ್ತು ಅನುಭವಿ ತಜ್ಞರ ಮೇಲ್ವಿಚಾರಣೆಯಲ್ಲಿ ಇದನ್ನು ನೀಡುವುದು ಉತ್ತಮ.
ಸೂಚನೆ: ಮೇಲೆ ನೀಡಲಾಗಿರುವ ಮಾಹಿತಿಯು ಶಿಕ್ಷಣ ಮತ್ತು ಅರಿವು ಮೂಡಿಸುವ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಇದನ್ನು ಯಾವುದೇ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಗೆ ಬಳಸಲಾಗುವುದಿಲ್ಲ.ಯಾವುದೇ ಅನುಮಾನ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.

References:
1. https://www.botoxspasticity.com/about-spasticity
2. https://www.cincinnatichildrens.org/health/b/botox
3. Schwabe AL. Botulinum Toxin in the Treatment of Pediatric Upper Limb Spasticity. Semin Plast Surg. 2016;30(1):24-28. doi:10.1055/s-0036-1571302
Back links:
1. Botulinum: https://www.botoxspasticity.com/botox-for-spasticity/safety
2. Cerebral Palsy: https://www.cerebralpalsyguidance.com/cerebral-palsy/treatment/botox/
Google Keyword search

Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore