ಪರಿಸರದಿಂದ ಮಕ್ಕಳ ಅಭಿವೃದ್ಧಿಯ ಮೇಲೆ ಆಗುತ್ತಿರುವ ಪರಿಣಾಮದ ಕುರಿತು, ಡಾ. ರವಿಯವರು ಹಲವಾರು ಸಮಾವೇಶಗಳಲ್ಲಿ ಮಾತಾಡಿದ್ದಾರೆ. ಉದಯೋನ್ಮುಖ ತಜ್ಞರೊಂದಿಗೆ ಜ್ಞಾನವನ್ನು ಹಂಚಿಕೊಳ್ಳುವುದು ಮುಖ್ಯ ಎಂದು ಬಲವಾಗಿ ನಂಬಿರುವ ಡಾ.ರವಿಯವರು, ಅವರಿಗೆ ವ್ಯಾಪಕವಾಗಿ ಟ್ರೈನಿಂಗ್ ಕೊಡುವ ಕೆಲಸದಲ್ಲಿ ತೊಡಗಿದ್ದಾರೆ ಹಾಗೂ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಕ್ಕೆ ಒಳಿತನ್ನು ಬಯಸುವ ಮನಸ್ಸಿರುವ ಇವರು, ‘ಬ್ರೈನ್ ಚೈಲ್ಡ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಮಕ್ಕಳ ನರವಿಜ್ಞಾನಿಗಳು ಮತ್ತು ಡೆವಲಪ್ಮೆಂಟಲ್ ಪೀಡಿಯಾಟ್ರಿಶಿಯನ್ಗಳು, ಲಾಂಗ್ವೇಜ್ ಥೆರಪಿಸ್ಟ್, ಫಿಸಿಯೋಥೆರಪಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್ ಮತ್ತು ಶೈಕ್ಷಣಿಕ ಮನೋವಿಜ್ಞಾನಿಗಳ ಜೊತೆಗೂಡಿ ಕೆಲಸ ಮಾಡಲು ನೆರವಾಗುವಂತಹ ಒಂದು ಸಮಗ್ರ ಶಿಶು ಕೇಂದ್ರವನ್ನು ಅಭಿವೃದ್ಧಿಪಡಿಸುವುದು ಹಾಗೂ ಆ ಮೂಲಕ ಪ್ರತಿಯೊಬ್ಬ ಅಸಮರ್ಥರನ್ನೂ “ಸಮರ್ಥ”ರನ್ನಾಗಿಸಲು ನೆರವಾಗುವುದೇ ಈ ಸಂಸ್ಥೆಯ ಗುರಿ ಮತ್ತು ಉದ್ದೇಶವಾಗಿದೆ.