ಔಷಧಿಗಳನ್ನು ನೀಡುವುದು
ಪೋಷಕರ ಅಥವಾ ರೋಗಿಗಳ ಮಾಹಿತಿ ಕೈಪಿಡಿ
ನಿಮ್ಮ ಮಗುವು ಔಷಧಿ ಸೇವಿಸುವಂತೆ ಮಾಡುವುದು ನಿಮಗೆ ಒತ್ತಡವನ್ನು ಉಂಟುಮಾಡುತ್ತಿದೆಯೇ? ನಿಮಗೆ ಗೊತ್ತೇ, ಈ ಒತ್ತಡಗಳು, ಹಲವು ತಪ್ಪುಗಳಿಗೆ ಕಾರಣವಾಗಬಹುದು.
ಹಾಗಾದರೆ, ಈ ಔಷಧಿಗಳ ಬಗ್ಗೆ ಕೆಲವು ವಿಷಯ ಹಾಗೂ ಉಪಾಯಗಳನ್ನು ತಿಳಿಯೋಣ.
ಔಷಧಿಗಳು ವಿಭಿನ್ನ ಆಕಾರ, ಗಾತ್ರ ಮತ್ತು ರೂಪಗಳಲ್ಲಿರುತ್ತವೆ. ಅವುಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಪರಿಚಯ:
೧.
ಸಿರಪ್ – ಈ ಔಷಧವು ದ್ರವ ರೂಪದಲ್ಲಿರುತ್ತದೆ. ಸಾಮಾನ್ಯವಾಗಿ, ಸಿರಪ್‌ನ್ನು ರುಚಿಕರವಾಗಿಸಲು ಸಕ್ಕರೆಯ ಅಂಶವನ್ನು ಹೆಚ್ಚಿನ ಮಟ್ಟದಲ್ಲಿ ಸೇರಿಸಿರುತ್ತಾರೆ. ಇದಕ್ಕೆ ಸರಳವಾದ ಹೋಲಿಕೆಯೆಂದರೆ,
ಸಕ್ಕರೆ (ಔಷಧಿ) ಯು ನೀರಿನಲ್ಲಿ ಕರಗುತ್ತದೆ = ಸಿರಪ್
ಉದಾ: ಸೇವನೆಗೆ ಅನುಕೂಲವಾಗುವಂತೆ ಪ್ಯಾರಸಿಟಮಾಲ್, ವಾಲ್ಪರಿನ್‌ನನ್ನು ಮೊಸರು, ಜೆಲ್ಲಿ, ಹಣ್ಣಿನ ರಸಗಳಲ್ಲಿ ಬೆರೆಸಿ ತೆಗೆದುಕೊಳ್ಳಬಹುದು
೨.
ಕರಗುವುದು – ಔಷಧಿಯು ಸಕ್ಕರೆ ಅಂಶ ಹೆಚ್ಚಾಗಿರುವ ದ್ರಾವಣದಲ್ಲಿ ಕರಗುತ್ತದೆ. ಆದರೆ, ಔಷಧವು ಸಾಮಾನ್ಯವಾಗಿ ಬಾಟಲಿಯ ಕೆಳಭಾಗದಲ್ಲಿ ಉಳಿದಿರುತ್ತದೆ. ಆದ್ದರಿಂದ, ಔಷಧವನ್ನು ಬಳಸುವುದಕ್ಕು ಮುನ್ನ ಸಂಪೂರ್ಣವಾಗಿ ಅಲುಗಾಡಿಸಬೇಕಾಗುತ್ತದೆ. ನಂತರ, ಅದು ದ್ರಾವಣದಲ್ಲಿ ಚೆನ್ನಾಗಿ ಬೆರೆತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದಕ್ಕೆ ಸರಳ ಹೋಲಿಕೆಯೆಂದರೆ, ಮರಳು (ಔಷಧ) ನೀರಿನಲ್ಲಿ ಕರಗುತ್ತದೆ.
ಉದಾ: ಟೆಗ್ರೀಟಲ್ (ಕಾರ್ಬಮಾಜೆಪೈನ್)
ಸೇವನೆಗೆ ಅನುಕೂಲವಾಗುವಂತೆ ಔಷಧಿಯನ್ನು, ಮೊಸರು, ಜೆಲ್ಲಿ, ಹಣ್ಣಿನ ರಸಗಳಲ್ಲಿ ಬೆರೆಸಬಹುದು.
೩.
ಮಾತ್ರೆಗಳು: ಇವು ಸರಳ, ಸ್ವಯಂ ವಿವರಣಾತ್ಮಕ. ಇವನ್ನು ಪುಡಿ ಮಾಡಿ ಮೊಸರು, ಜೆಲ್ಲಿ, ಹಣ್ಣಿನ ರಸಗಳಲ್ಲಿ ಮಿಶ್ರಣ ಮಾಡಿ ತೆಗೆದುಕೊಳ್ಳಬಹುದು.
೪.
ಸುಧಾರಿತ ಬಿಡುಗಡೆ (ನಿಯಂತ್ರಿತ ಪ್ರಸವಿಸುವಿಕೆ): ಇತ್ತೀಚಿನ ದಿನಗಳಲ್ಲಿ ಕೆಲವು ಮಾತ್ರೆಗಳ ಉತ್ಪಾದನೆಯಲ್ಲೂ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಹಾಗಾಗಿ, ಎಂದಿನ/ ರೂಢಿಯಲ್ಲಿರುವ/ ಸಾಮಾನ್ಯ ಮಾತ್ರೆಗಳಿಗೆ ಹೋಲಿಸಿದರೆ ಈ ಮಾತ್ರೆಗಳು ದುಬಾರಿ. ಈ ಔಷಧಿಗಳು ಪದರ ಪದರಗಳ ಲೇಪನ ಹೊಂದಿರುತ್ತವೆ. ಆದ್ದರಿಂದ, ಪ್ರತಿ ಪದರವು ನಿಧಾನವಾಗಿ ಕರಗಿ ಔಷಧಿಯನ್ನು ಬಿಡುಗಡೆ ಮಾಡುತ್ತದೆ. ರಕ್ತದೊತ್ತಡವು ಏರಿಳಿತವಾಗುವುದನ್ನು ತಪ್ಪಿಸುವುದು ಇವುಗಳಿಂದಾಗುವ ಮುಖ್ಯ ಅನುಕೂಲ. ಆದರೆ, ಈ ಮಾತ್ರೆಗಳನ್ನು ಪುಡಿ ಮಾಡಿ ಸೇವಿಸಿದಲ್ಲಿ ಅದರ ಮೂಲ ಉದ್ದೇಶವೇ ಹಾಳಾದಂತೆ. ನೀವು ಪುಡಿ ಮಾಡಿಯೇ ಸೇವಿಸಬೇಕೆಂದಿದ್ದಲ್ಲಿ, ಸಾಮಾನ್ಯ ಮಾತ್ರೆಗಳನ್ನೇ ಸೇವಿಸಿ.
ವಿಸ್ತೃತ ಬಿಡುಗಡೆ – ಔಷಧಿಯು ನಿಧಾನವಾಗಿ ಬಿಡುಗಡೆಯಾಗುವುದರಿಂದ ಇವನ್ನು ಮತ್ತೆ ಮತ್ತೆ ನೀಡುವಾಗ ಪ್ರಮಾಣವನ್ನು ಕಡಿಮೆ ಮಾಡಬಹುದು.
ನಿಧಾನಗತಿಯ ಬಿಡುಗಡೆ – ಈ ಮಾತ್ರೆಗಳಲ್ಲಿ ಗ್ಯಾಸ್ಟ್ರಿಕ್ ನಿರೋಧಕ ಲೇಪನವಿರುತ್ತದೆ. ಆದ್ದರಿಂದ, ಇವು ಹೊಟ್ಟೆಯನ್ನು ತಲುಪುವವರೆಗೂ ಔಷಧಿಯ ಅಂಶಗಳು ಬಿಡುಗಡೆಯಾಗುವುದಿಲ್ಲ.
ಪ್ರಸರಣ ಮಾತ್ರೆಗಳು – ಈ ಮಾತ್ರೆಗಳು ಬಾಯಿಯಲ್ಲಿ ಸುಲಭವಾಗಿ ಕರಗುವುದರಿಂದ ಮಕ್ಕಳಿಗೆ ನೀಡಲು ಅನುಕೂಲ. ಆದರೆ, ಇವು ಕರಗಬೇಕಾದಲ್ಲಿ ಕೆಲವು ಸೆಕೆಂಡುಗಳ ಕಾಲ ಬಾಯಿಯಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ.
೫.
ಕ್ಯಾಪ್ಸುಲ್ಗಳು (ಮಾತ್ರೆಗಳು): ಇವು ಸಹ ಒಂದು ಬಗೆಯ ಮಾತ್ರೆಗಳಾಗಿದ್ದು, ಸಣ್ಣ ಸಿಲಿಂಡರಾಕಾರದಲ್ಲಿರುತ್ತವೆ. ಮಕ್ಕಳ ಸೇವನೆಗೆ ಅನುಕೂಲವಾಗುವಂತೆ ಮೊಸರು, ಜೆಲ್ಲಿ, ಹಣ್ಣಿನ ರಸದೊಂದಿಗೆ ಬೆರೆಸಿ ನೀಡಬಹುದು.
೬.
ಎನಿಮಾ / ಸಫೊಸಿಟರಿ: ಇದನ್ನು ರೆಕ್ಟಮ್, ಯೋನಿಯ ಅಥವಾ ಮೂತ್ರಪಿಂಡಕ್ಕೆ ಸೇರಿಸಲಾಗುತ್ತದೆ. ಇದು ಮುಜುಗರವನ್ನುಂಟು ಮಾಡುವ ಪ್ರಕ್ರಿಯೆಯಾದರೂ, ಮಾತ್ರೆಗಳನ್ನು ಸೇವಿಸಿದಾಗ ವಾಂತಿ ಮಾಡುವ ಪ್ರಕೃತಿಯುಳ್ಳವರು ಅಥವಾ ಮಾತ್ರೆಯನ್ನು ನೇರವಾಗಿ ತೆಗೆದುಕೊಳ್ಳಲು ಹಿಂದೇಟು ಹಾಕುವ ಮಕ್ಕಳಿಗೆ ಇದು ಸಹಕಾರಿ.
ಉದಾ: ಮಲಬದ್ಧತೆಗಾಗಿ ಬಳಸುವ ಪ್ಯಾರಸಿಟಮಾಲ್, ಡಯಾಜ್ಪಾಮ್ ಮತ್ತು ಡುಲ್ಕೊಲಾಕ್ಸ್ ಮಾತ್ರೆಗಳು
೭.
ಉಸಿರಾಟವನ್ನು ಸುಲಭಗೊಳಿಸುವ ಸಾಧನ (ಇನ್ಹೇಲರ್): ಇದು ಶ್ವಾಸಕೋಶದ ಮೂಲಕ ಗರಿಷ್ಠ ಪ್ರಮಾಣದ ಔಷಧವು ದೇಹಕ್ಕೆ ತಲುಪುವಂತೆ ಮಾಡುತ್ತದೆ.
೮.
ಮೂಗಿನ ಸ್ಪ್ರೇ: ಶೀತ ಮತ್ತು ಮೂಗಿನ ಅಲರ್ಜಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಬಳಸಲಾಗುತ್ತದೆ (ಉದಾ: ಸ್ಟೆರಾಯ್ಡ್ ಸ್ಪ್ರೇ) (ಕೆಲವೊಮ್ಮೆ: ವೇಗವಾಗಿ ಹೀರಿಕೊಳ್ಳಲು (ಉದಾ: ಅಪಸ್ಮಾರವನ್ನು ನಿಯಂತ್ರಿಸಲು ಬಳಸುವ ಮಿಡಾಜ್ಹೋಲಮ್).
೯.
ಹನಿಗಳು (ಡ್ರಾಪ್ಸ್): ಕಣ್ಣು ಮತ್ತು ಕಿವಿಗಳ ಚಿಕಿತ್ಸೆಗಾಗಿ.
ದಯವಿಟ್ಟು ಗಮನಿಸಿ: ಕೆಲವು ನಿರ್ದಿಷ್ಟ ಔಷಧಿಗಳನ್ನು ಆಹಾರದೊಂದಿಗೆ ನೀಡಲು ಸಾಧ್ಯವಿಲ್ಲ. ಆ ಎಲ್ಲಾ ಬಗೆಯ ಔಷಧಿಗಳನ್ನು ಇಲ್ಲಿ ಪಟ್ಟಿ ಮಾಡಲು ಕಷ್ಟವಾಗುತ್ತದೆ. ಈ ಕುರಿತು ದಯವಿಟ್ಟು ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ ಅಥವಾ ಔಷಧಿಯೊಂದಿಗೆ ನೀಡಲಾಗುವ ಮಾಹಿತಿ ಪತ್ರದಲ್ಲಿ ಪರಿಶೀಲಿಸಿ.
ತಂತ್ರಗಾರಿಕೆ ಮತ್ತು ಚಿಕಿತ್ಸೆ
ಸವಾಲುಗಳಿಲ್ಲದೆ ಮಕ್ಕಳ ಪೋಷಣೆ ಸಾಧ್ಯವೇ?
ಪೋಷಕರ ಜವಬ್ದಾರಿಯನ್ನು ಸುಲಭಗೊಳಿಸಬಲ್ಲ ಯಾವುದೇ ಸರಳ ತಂತ್ರಗಾರಿಕೆಯಿಲ್ಲ. ಪೋಷಕರ ಹೊಣೆಗಾರಿಕೆಯನ್ನು ನೀವು ನಿರ್ವಹಿಸಲೇಬೇಕು. ಕೆಳಗಿನ ನೀಡಲಾಗಿರುವ ಕೆಲವು ಸಲಹೆಗಳನ್ನು ಹಾಗೂ ವಿಧಾನಗಳನ್ನು ದಯವಿಟ್ಟು ಪ್ರಯತ್ನಿಸಿ ಮತ್ತು ನಿಮ್ಮ ಬತ್ತಳಿಕೆಯಲ್ಲಿ ಈ ರೀತಿಯ ಯಾವುದಾದರೂ ತಂತ್ರಗಳಿದ್ದರೆ ನಮಗೆ ತಿಳಿಸಿ.
- ಔಷಧಿಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮಕ್ಕಳಿಗೇ ನೀಡುವುದು.
- ದೃಶ್ಯರೂಪದ ಬಹುಮಾನ: ಹಿರಿಯ ಮಕ್ಕಳಿಗೆ ಚಾರ್ಟ್ಸ್ / ನಕ್ಷತ್ರಗಳಂತಹ ಬಹುಮಾನಗಳನ್ನು ನೀಡಿ.
- ರುಚಿ: ಎಲ್ಲವು ನಾಲಿಗೆಯಲ್ಲಿದೆ. ದಯವಿಟ್ಟು ಬೇರೆ ಸ್ವಾದದ ಸಿರಪ್ ಇದೆಯೇ ಎಂದು ಪರಿಶೀಲಿಸಿ. ಇದು ನಿಮ್ಮ ಮಗುವಿಗೆ ಹೆಚ್ಚು ರುಚಿಯನ್ನು ನೀಡುತ್ತದೆ.
- ಮೊಸರು, ಜೆಲ್ಲಿ ಅಥವಾ ಹೆಚ್ಚು ಬಣ್ಣದ ರಸವನ್ನು ಮಿಶ್ರಣಗೊಳಿಸಿ ಸೇವಿಸಲು ನೀಡಿ. ಇದು ಔಷಧಿಯ ಮೂಲ ರುಚಿಯನ್ನು ಕಡಿಮೆ ಮಾಡುತ್ತದೆ.
- ಸಿರಿಂಜ್ ಗಳನ್ನು ಬಳಸಿ ಔಷಧಿಯನ್ನು ನೀಡಿ ಮತ್ತು ತಕ್ಷಣವೇ ಕುಡಿಯಲು ಏನನ್ನಾದರೂ ಕೊಡಿ.
- ಮನೆಯ ಯಾವ ಸ್ಥಳದಲ್ಲಿ ಔಷಧಿಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ಮಕ್ಕಳ ಆಯ್ಕೆಗೆ ಬಿಡಿ. ಅದು ಬಾಲ್ಕಾನಿಯಾಗಿರಬಹುದು, ಮಲಗುವ ಕೋಣೆಯಾಗಿರಬಹುದು, ಅಥವಾ ಅವರು ಕುಳಿತುಕೊಳ್ಳುವ ಸ್ಥಳವೇ ಆಗಿರಲಿ. ಹೀಗೆ ಮಾಡುವುದರಿಂದ ಮಗುವು ತಾನು ಇತರರ ನಿಯಂತ್ರಣದಲ್ಲಿದ್ದೇನೆ ಎಂಬ ಭಾವನೆಯನ್ನು ತನ್ನ ಮನಸ್ಸಿನಿಂದ ತೆಗೆದು ಹಾಕುತ್ತದೆ.
- ವೈದ್ಯರಂತೆ ನಟಿಸಲಿ (ರೋಲ್ ಪ್ಲೇ): ತನ್ನ ನೆಚ್ಚಿನ ಆಟಿಕೆಗೆ ಔಷಧವನ್ನು ನೀಡಲು ನಿಮ್ಮ ಮಗುವಿಗೆ ಹೇಳಿ. ನಂತರ, ಮಗುವು ಸಹ ಅದರಂತೆಯೇ ಔಷಧಿ ತೆಗೆದುಕೊಳ್ಳಬೇಕೆಂಬುದನ್ನು ತಿಳಿಸಿ.
- ಪ್ರಾಮಾಣಿಕವಾಗಿದ್ದು, ಯಾವುದೇ ಔಷಧಿಯನ್ನು ನೀಡದಿರುವುದು ನಿಜವಾಗಿಯೂ ಒಂದು ಒಳ್ಳೆಯ ಆಯ್ಕೆ.
- ನಿಗದಿತ ಸಮಯದಲ್ಲಿ ಔಷಧಿ ನೀಡಿ. ಅನಗತ್ಯ ವಿಳಂಬ ಮಾಡಬೇಡಿ. ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ನಲ್ಲಿರುವ ಟೈಮರ್ ಬಳಸಬಹುದು. ನೀವು ಮತ್ತು ನಿಮ್ಮ ಮಗು ಇಬ್ಬರೂ ಈ ಪ್ರಕ್ರಿಯೆಯ ಕೊನೆಯ ಹಂತವನ್ನು ತಿಳಿದುಕೊಳ್ಳಬೇಕು. ಏಕೆಂದರೆ, ಇದು ಆಘಾತಕಾರಿ ಪ್ರಕ್ರಿಯೆಯಾಗಬಾರದು.
- ಮೇಲಿನ ಯಾವುದೂ ಸರಿ ಹೋಗದಿದ್ದಲ್ಲಿ ಒಬ್ಬರು ಮಗುವನ್ನು ಹಿಡಿದುಕೊಂಡು ಮತ್ತೊಬ್ಬರು ಸಿರಿಂಜ್ ಬಳಸಿ ಔಷಧಿ ಕೊಡಿ.
ಇವನ್ನು ಮಾಡಬೇಡಿ
- ಮಗುವನ್ನು ಮಲಗಿಸಿ ಔಷಧಿ ನೀಡಬೇಡಿ
- ಔಷಧಿಯನ್ನು ನೇರವಾಗಿ ಗಂಟಲಿಗೆ ಹಾಕಬೇಡಿ. ಅದು ಉಸಿರುಗಟ್ಟಿಸುವಿಕೆ ಅಥವಾ ಉಬ್ಬಸಕ್ಕೆ ಕಾರಣವಾಗಬಹುದು.
- ಹೆಚ್ಚು ಜನ ಸೇರುವುದನ್ನು ತಪ್ಪಿಸಿ
ಸಿರಂಜ್ ಗಳಿಗೆ ಉದಾಹರಣೆಗಾಗಿ ಭೇಟಿ ನೀಡಿ:
https://www.amazon.in/Ezy-Dose-Calibrated-Medicine-Syringe/dp/B000VCF6FG