Dr C P Ravikumar

ಪೀಡಿಯಾಟ್ರಿಕ್ ಪೆಲ್ಲಾಗ್ರಾ: ಮಕ್ಕಳಲ್ಲಿ ನಿಯಾಸಿನ್ (ವಿಟಮಿನ್ ಬಿ 3) ಕೊರತೆ
ನಿಯಾಸಿನ್ ಅಥವಾ ವಿಟಮಿನ್ ಬಿ3, ಜೀವಕೋಶಗಳ ಬೆಳವಣಿಗೆ ಹಾಗೂ ಅವುಗಳು ತೊಂದರೆಗೊಳಪಟ್ಟಾಗ ಸರಿಪಡಿಸಲು, ಹಾಗೂ ನರಮಂಡಲದ ಅಭಿವೃದ್ಧಿ ಸೇರಿದಂತೆ ದೇಹದ ಹಲವಾರು ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನರಗಳ ಕಾರ್ಯಕ್ಷಮತೆಯನ್ನು ಕ್ಷೀಣಗೊಳಿಸುವಂತಹ ಅಲ್ಕೈಮರ್, ಪಾರ್ಕಿನ್ಸನ್ ಕಾಯಿಲೆ (Alzheimer’s Disease, Parkinson’s Disease) ಅಥವಾ ಮೈಗ್ರೇನ್ ನ (migraines) ಚಿಕಿತ್ಸೆಯಲ್ಲಿ ನಿಯಾಸಿನ್‌ನ ಪ್ರಯೋಜನಗಳನ್ನು ತಿಳಿಯಲು ಸಂಶೋಧನೆಗಳು ನಡೆಯುತ್ತಿವೆ.

ದೈನಂದಿನ ಪ್ರಮಾಣ
ಸೇವನೆಗೆ ಶಿಫಾರಸು ಮಾಡಲಾದ ನಿಯಾಸಿನ್ ನ ದೈನಂದಿನ ಪ್ರಮಾಣ

ವಯಸ್ಸು ಪುರುಷ ಮಹಿಳೆ ಗರ್ಭಿಣಿಯರು ಸ್ತನ್ಯಪಾನ್ಯ ಮಾಡಿಸುವ ಮಹಿಳೆಯರು
0 to 6 ತಿಂಗಳು 2 mg 2 mg
7–12 ತಿಂಗಳು 4 mg NE 4 mg NE
1–3 ವರ್ಷ 6 mg NE 6 mg NE
4–8 ವರ್ಷ 8 mg NE 8 mg NE
9–13 ವರ್ಷ 12 mg NE 12 mg NE
14–18 ವರ್ಷ 16 mg NE 14 mg NE 18 mg NE 17 mg NE
19 ವರ್ಷ ಮೇಲ್ಪಟ್ಟು 16 mg NE 14 mg NE 18 mg NE 17 mg NE

ನಿಯಾಸಿನ್ ನ ಆಹಾರ ಮೂಲಗಳು
ವಿಟಮಿನ್ ಬಿ 3 ನೈಸರ್ಗಿಕ ಮೂಲಗಳು
  • ಮಾಂಸ
  • ಮೀನು
  • ಕೋಳಿ ಮಾಂಸ
  • ಕಡಲೆಕಾಯಿ
  • ಧಾನ್ಯಗಳು
  • ಕಾಳುಗಳು
  • ಬ್ರೆಡ್
ಭಾರತದಲ್ಲಿ, ಈ ಕೆಳಗಿನ ಆಹಾರ ಪದಾರ್ಥಗಳಲ್ಲಿ ನಿಯಾಸಿನ್ ಸಮೃದ್ಧವಾಗಿರುತ್ತದೆ.
  • ಕಸ್ಟರ್ಡ್ ಸೇಬು,
  • ಮಾವಿನಹಣ್ಣು,
  • ಖರ್ಜೂರ
  • ಅಂಜೂರ,
  • ಹೆಸರುಕಾಳು
  • ಜೋಳ
  • ಎಳ್ಳು ಬೀಜಗಳು
  • ಸೂರ್ಯಕಾಂತಿ ಬೀಜಗಳು

ಪೂರಕಗಳು

ಸಿರಿಧಾನ್ಯಗಳೊಂದಿಗೆ ಮತ್ತು ಇತರ ಪೋಷಕಾಂಶಗಳೊಂದಿಗೆ ನಿಕೋಟಿನಿಕ್ ಆಮ್ಲವನ್ನು ನೀಡುವ ಮೂಲಕ ಜನರು ದೈನಂದಿನ ಜೀವನದಲ್ಲಿ ದೇಹಕ್ಕೆ ಅಗತ್ಯವಾದಷ್ಟು ವಿಟಮಿನ್ ಬಿ 3 ಸೇವಿಸುವಂತೆ ಮಾಡಲಾಗುತ್ತದೆ. ಇದು ಬಹು-ಜೀವಸತ್ವ ಔಷಧಿ ಅಥವಾ ವಿಟಮಿನ್ ಬಿ ಕಾಂಪ್ಲೆಕ್ಸ್ ರೂಪದಲ್ಲಿಯೂ ಲಭ್ಯವಿದೆ.
ನಿಯಾಸಿನ್ ಕೊರತೆ ಉಂಟಾಗಲು ಕಾರಣಗಳು
  • ಪೌಷ್ಟಿಕ ಆಹಾರ ಸೇವಿಸದಿರುವುದು (ಮುಖ್ಯವಾಗಿ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ)
  • ಕರುಳಿನಲ್ಲಿ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ತೊಂದರೆ (malabsorption syndromes) ಅಥವಾ ಪಿತ್ತಜನಕಾಂಗದ ಕಾಯಿಲೆಗಳು, ನಿಕೋಟಿನಮೈಡ್ (nicotinamide) ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ
  • ಹದಿಹರೆಯದವರಲ್ಲಿ, ಅನೋರೆಕ್ಸಿಯಾ ನರ್ವೋಸಾ (anorexia nervosa) ಸಮಸ್ಯೆ
  • ಜೋಳದಲ್ಲಿ ವಿಟಮಿನ್ ಬಿ 3 ಅಂಶ ತುಂಬಾ ಕಡಿಮೆ ಮಟ್ಟದಲ್ಲಿರುವುದರಿಂದ ಇದನ್ನು ಪ್ರಧಾನ ಆಹಾರವಾಗಿ ಸೇವಿಸುವ ಪ್ರದೇಶದಲ್ಲಿನ ಜನರಲ್ಲಿ ನಿಯಾಸಿನ್ ಕೊರತೆ ಕಂಡುಬರುತ್ತದೆ.
  • ಕ್ಷಯರೋಗಕ್ಕೆ ಔಷಧಿಗಳನ್ನು ಸೇವಿಸುವ (ದೀರ್ಘಾವಧಿವರೆಗೆ) ಜನರಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಬಹುದು.
  • ನಿಯಾಸಿನ್ ನೀರಿನಲ್ಲಿ ಕರಗುವ ವಿಟಮಿನ್ ಆಗಿರುವುದರಿಂದ ಈ ಅಂಶವುಳ್ಳ ಆಹಾರವನ್ನು ಬಿಸಿಮಾಡುವುದು, ಸಂರಕ್ಷಿಸುವುದು ಅಥವಾ ಕುದಿಸುವುದರಿಂದ ಅದರಲ್ಲಿನ ಪೌಷ್ಟಿಕಾಂಶವು ನಾಶವಾಗಬಹುದು.

ನಿಯಾಸಿನ್ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
ಕೆಲವು ಅಧ್ಯಯನಗಳು ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಸುಧಾರಿಸಲು ಪೂರಕವಾಗಿ ನಿಕೋಟಿನಿಕ್ ಆಸಿಡ್ ಬಳಕೆಯನ್ನು ಸೂಚಿಸುತ್ತಾವಾದರೂ, ಇವುಗಳಿಂದ ಹೃದಯರಕ್ತನಾಳಗಳ ಮೇಲೆ ಉಂಟಾಗಬಹುದಾದ ಅಪಾಯವನ್ನು ನಿರೂಪಿಸಲು ಸಾಕಷ್ಟು ಪುರಾವೆಗಳಿಲ್ಲ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರವೇ ಹೈಪರ್ಲಿಪಿಡೆಮಿಯಾ (hyperlipidaemia) ಚಿಕಿತ್ಸೆಯಲ್ಲಿ ನಿಯಾಸಿನ್ ಅನ್ನು ಪೂರಕವಾಗಿ ಬಳಸಬೇಕು.
ಅತಿಯಾದ ನಿಯಾಸಿನ್ ಸೇವನೆಯ ಅಡ್ಡಪರಿಣಾಮಗಳು
ಆಹಾರದಲ್ಲಿ ನೈಸರ್ಗಿಕವಾಗಿ ಕಂಡುಬರುವ ನಿಯಾಸಿನ್ ಸೇವಿಸುವುದರಿಂದ ಸಾಮಾನ್ಯವಾಗಿ ಯಾವುದೇ ಪ್ರತಿಕೂಲ ಪರಿಣಾಮಗಳುಂಟಾಗುವುದಿಲ್ಲ. ಆದರೆ, ನಿಯಾಸಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರಕ ಅಥವಾ ಔಷಧಿಗಳ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಈ ಕೆಳಗಿನ ಸಮಸ್ಯೆಗಳುಂಟಾಗಬಹುದು:
  • ಚರ್ಮ ಒಡೆದಂತೆ ಕಾಣುವುದು (ಚರ್ಮದ ಕೆಳಗಿನ ರಕ್ತನಾಳಗಳ ಹಿಗ್ಗುವಿಕೆಯಿಂದ ರೋಗಿಯ ತೋಳುಗಳು, ಮುಖ ಮತ್ತು ಎದೆಯ ಮೇಲೆ ಕೆಂಪು ಬಣ್ಣ ಕಂಡು ಬರುವುದು), ಇದರೊಂದಿಗೆ ಸುಟ್ಟಂತೆ, ಜುಮ್ಮೆನಿಸುವಂತೆ ಭಾಸವಾಗುವುದು ಅಥವಾ ತುರಿಕೆ ಉಂಟಾಗಬಹುದು
  • ತಲೆನೋವು
  • ದದ್ದುಗಳು
  • ತಲೆತಿರುಗುವಿಕೆ
  • ರಕ್ತದೊತ್ತಡದಲ್ಲಿ ಏರಿಳಿತ
  • ದೀರ್ಘಕಾಲದವರೆಗೆ ಪೂರಕ ಅಥವಾ ಔಷಧಿ ರೂಪದಲ್ಲಿ ನಿಯಾಸಿನ್ ನ್ನು ಅತಿಯಾಗಿ ಸೇವಿಸುವುದರಿಂದ ಹೆಪಟೊಟಾಕ್ಸಿಕ್ (Hepatotoxic – ಯಕೃತ್ತಿಗೆ ಹಾನಿಕಾರಕ) ಸಮಸ್ಯೆ

ಆದ್ದರಿಂದ, ಫುಡ್ ಅಂಡ್ ನ್ಯೂಟ್ರಿಯಷಿಯನ್ ಬೋರ್ಡ್ (Food and Nutrition Board UK) ನಿಯಾಸಿನ್ ಪೂರಕ ಸೇವನೆಗೆ ಮಿತಿಯನ್ನು ತಿಳಿಸಿದೆ.
ನಿಯಾಸಿನ್ ಕೊರತೆಯ ಲಕ್ಷಣಗಳು
ನಿಯಾಸಿನ್ ನ ಕೊರತೆಯ ಸಾಮಾನ್ಯ ಲಕ್ಷಣಗಳು ಅತಿಸಾರ, ಡರ್ಮಟೈಟಿಸ್ (dermatitis) ಮತ್ತು ಬುದ್ಧಿಮಾಂದ್ಯತೆ ಈ ಮೂರನ್ನು ಒಳಗೊಂಡಂತಿರುತ್ತದೆ. ಇದನ್ನು ಒಟ್ಟಾಗಿ ಪೆಲ್ಲಾಗ್ರಾ ಅಥವಾತ್ರೀ ಡಿ ಡಿಸೀಸ್ (pellagra or “the three D disease) ಎಂದು ಕರೆಯಲಾಗುತ್ತದೆ.
  1. ಡರ್ಮಟೈಟಿಸ್ (dermatitis): ಚಪ್ಪಟೆ ಹಾಗೂ ಬಣ್ಣಬಣ್ಣದ ಚರ್ಮ, ತುರಿಕೆ, ಚರ್ಮ ಅಲ್ಲಲ್ಲಿ ಸುಟ್ಟಂತೆ ಕಾಣುವುದು. ಕುತ್ತಿಗೆಯ ಸುತ್ತ ವಿಚಿತ್ರವಾದ ದದ್ದುಗಳು ಕಂಡು ಬರುವುದು. ಇದನ್ನು ಕ್ಯಾಸಲ್ ನೆಕ್ಲೆಸ್ (Casal Necklace) ಎಂದು ಹೇಳಲಾಗುತ್ತದೆ.
  2. ನಿರಂತರ ಅತಿಸಾರ ಹಾಗೂ ವಾಕರಿಕೆ ಹಾಗೂ ವಾಂತಿ ಸಹ ಕಂಡು ಬರಬಹುದು
  3. ಬುದ್ಧಿಮಾಂದ್ಯತೆಯು ಖಿನ್ನತೆ, ಆತಂಕ, ಕಿರಿಕಿರಿ ಮತ್ತು ಮನಸ್ಥಿತಿ ಏರುಪೇರಾಗುವಂತಹ ನರವೈಜ್ಞಾನಿಕ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಮಕ್ಕಳಲ್ಲಿ ಏಕಾಗ್ರತೆಯ ಸಮಸ್ಯೆ, ಗೊಂದಲದ ಹಾಗೂ ಭ್ರಮೆಯ ಮನಸ್ಥಿತಿ ಕಂಡು ಬರಬಹುದು.

ದೇಹದಲ್ಲಿ ನಿಯಾಸಿನ್ ಕೊರತೆಯನ್ನು ಗುರುತಿಸುವುದು
ನಿಕೋಟಿನಮೈಡ್ ನ್ಯೂಕ್ಲಿಯೊಟೈಡ್ ಮೆಟಾಬಾಲಿಸಮ್ (Nicotinamide nucleotide metabolism) ನೊಂದಿಗೆ ದೇಹದಲ್ಲಿ ನಿಯಾಸಿನ್, ಎನ್ಎಡಿ ಹಾಗೂ ಎನ್ಎಡಿಪಿ ನ ಮಟ್ಟ ಹಾಗೂ ಅವುಗಳ ಅನುಪಾತವನ್ನು ರಕ್ತಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದು.
ನಿಯಾಸಿನ್ ನ ಸೇವನೆ ಹಾಗೂ ಅದರ ಜೀರ್ಣಕ್ರಿಯೆಯ ನಂತರ ಮೂತ್ರವನ್ನು ಪರಿಶೀಲಿಸುವುದರಿಂದಲೂ ಸಹ ದೇಹದಲ್ಲಿನ ವಿಟಮಿನ್ ಬಿ 3 ಪ್ರಮಾಣವು ಸಮರ್ಪಕವಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಯಬಹುದು.
ನಿಯಾಸಿನ್ ಕೊರತೆಗೆ ಚಿಕಿತ್ಸೆ
ಆಹಾರದಲ್ಲಿ ಬದಲಾವಣೆ ಮಾಡುವುದರೊಂದಿಗೆ ನಿಯಾಸಿನ್ ಪೂರಕಗಳನ್ನು ಬಾಯಿ ಅಥವಾ ಅಭಿದಮನಿ (drip/intravenous) ಮೂಲಕ ನೀಡುವುದರಿಂದ ಪೆಲ್ಲಾಗ್ರಾ (pellagra) ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ಆದರೆ, ಕರುಳು ಅಥವಾ ಪಿತ್ತಜನಕಾಂಗದ ಕಾಯಿಲೆಗಳಿಂದಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಮಸ್ಯೆಯಿದ್ದಲ್ಲಿ, ಮೂಲ ಕಾರಣವನ್ನು ತಿಳಿಯಲು ಚಿಕಿತ್ಸೆ ನೀಡಬೇಕು. ನರಗಳ ನ್ಯೂನತೆಗೆ ಚಿಕಿತ್ಸೆ ನೀಡಲು ಮಕ್ಕಳ ನರವಿಜ್ಞಾನಿಗಳೊಂದಿಗೆ ಸಮಾಲೋಚನೆ ಅಗತ್ಯ. ವಿಟಮಿನ್ ಬಿ ಯನ್ನು ಸಮೃದ್ಧವಾಗಿವುಳ್ಳ ಆಹಾರವನ್ನು ಸೇವಿಸುವುದರಿಂದ ನರಗಳ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡು ಬರುತ್ತದೆ. ಇದು ನರವೈಜ್ಞಾನಿಕ ಸಮಸ್ಯೆಗಳು ಉಂಟಾಗುವುದನ್ನು ನಿಧಾನಗೊಳಿಸುತ್ತದೆ. ವಿಶೇಷವಾಗಿ ಮಕ್ಕಳಲ್ಲಿ, ಪೌಷ್ಠಿಕಾಂಶದ ಕೊರತೆಯಿಂದ ನರವೈಜ್ಞಾನಿಕ ಸಮಸ್ಯೆಗಳು ಉಂಟಾದಲ್ಲಿ, ಸಾಧ್ಯವಾದಷ್ಟು ಶೀಘ್ರವಾಗಿ ಗುರುತಿಸಿ ಚಿಕಿತ್ಸೆ ನೀಡುವುದು ಮುಖ್ಯವಾಗುತ್ತದೆ. ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯು ಆರೋಗ್ಯವನ್ನು ಸುಧಾರಿಸಬಹುದಾದರೂ, ದೀರ್ಘಕಾಲೀನ ನರಮಂಡಲದ ಕಾಯಿಲೆಗಳಿಗೆ ಮಕ್ಕಳ ಚಿಕಿತ್ಸೆಯಲ್ಲಿ ತರಬೇತಿ ಪಡೆದ ವೈದ್ಯಕೀಯ ನರವಿಜ್ಞಾನಿಗಳ ಮಾರ್ಗದರ್ಶನ ಅಗತ್ಯ. ಆಹಾರ ತಜ್ಞರು, ಮನೋವೈದ್ಯರು ಸೇರಿದಂತೆ ಬಹು ತಜ್ಞರ ತಂಡದ ಚಿಕಿತ್ಸೆ, ಮಾರ್ಗದರ್ಶನ ಹಾಗೂ ಸಲಹೆಯಿಂದ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.

ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.

ಹಿಂದಿನ ಲಿಂಕ್ ಗಳು
  1. Pellagra or the three D disease : https://www.ncbi.nlm.nih.gov/pmc/articles/PMC6412771/
  2. Nicotinamide nucleotide metabolism : https://academic.oup.com/jn/article/137/9/2013/4750720
  3. Casal Necklace : https://www.healthline.com/health/pellagra#symptoms

ಉಲ್ಲೇಖಗಳು
  1. Gasperi V, Sibilano M, Savini I, Catani MV. Niacin in the Central Nervous System: An Update of Biological Aspects and Clinical Applications. Int J Mol Sci. 2019;20(4):974. Published 2019 Feb 23. doi:10.3390/ijms20040974
  2. Redzic S, Gupta V. Niacin Deficiency. [Updated 2020 May 31]. In: StatPearls [Internet]. Treasure Island (FL): StatPearls Publishing; 2020 Jan-. Available from: https://www.ncbi.nlm.nih.gov/books/NBK557728/
  3. https://ods.od.nih.gov/factsheets/Niacin-HealthProfessional/
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore