Dr C P Ravikumar

ಫೆನಿಟೋಯಿನ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

ಬ್ರ್ಯಾಂಡ್ ಹೆಸರುಗಳು:

ಮಾತ್ರೆ: ಎಪೋಟಿನ್

ಸಿರಪ್/ ದ್ರವೌಷಧ: ಎಪೋಟಿನ್ ಸಸ್ಪೆನ್ಷನ್

ನಿಧಾನಗತಿಯ ಬಿಡುಗಡೆ: ಎಪ್ಸೊಲಿನ್ ಇಆರ್

ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು

ಫೆನಿಟೋಯಿನ್, ಅಪಸ್ಮಾರದ ಹಲವಾರು ವಿಭಿನ್ನ ಸೆಳವು (ಫಿಟ್ಸ್‌) ಗಳನ್ನು ನಿಯಂತ್ರಿಸಲು ಬಳಸುವ ಹಳೆಯ ಔಷಧಿಗಳಲ್ಲಿ ಒಂದು. ಇದು ಪರಿಣಾಮಕಾರಿಯಾಗಿದ್ದು, ವಿವಿಧ ರೀತಿಯ ಸೆಳೆವುಗಳ ಚಿಕಿತ್ಸೆಯಲ್ಲಿ ಬಳಸಲಾಗಿದೆ. ಇದು ಈಗಲೂ ಸೆಳೆವನ್ನು ನಿಯಂತ್ರಿಸಲು ತುರ್ತು ಸಮಯದಲ್ಲಿ ಬಳಸುವ ಪ್ರಮುಖ ಔಷಧವಾಗಿದೆ,.

ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಫೆನಿಟೋಯಿನ್, ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ನಿಮ್ಮ ಮಗುವಿಗೆ ಫೆನಿಟೋಯಿನ್ ನೀಡುವುದನ್ನು ದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.

ಫೆನಿಟೋಯಿನ್ ಯಾವ ರೂಪದಲ್ಲಿ ಲಭ್ಯವಿದೆ?

ದ್ರವ ಹಾಗೂ, ಮಾತ್ರೆಗಳು, ಮಾರ್ಪಾಡಿತ ಬಿಡುಗಡೆ (ಸೇವಿಸಿದ ನಂತರ ಔಷಧಿಯ ಅಂಶವು ನಿಧಾನವಾಗಿ ಬಿಡುಗಡೆಯಾಗಿ ರಕ್ತದಲ್ಲಿ ಸೇರಿಕೊಳ್ಳುತ್ತದೆ).

ಫೆನಿಟೋಯಿನ್ ಅನ್ನು ಯಾವಾಗ ನೀಡಬೇಕು?

ದಿನಕ್ಕೆ ಎರಡು ಬಾರಿ. ಬೆಳಗ್ಗೆ ಮತ್ತು ಸಂಜೆ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.

ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ ವೈದ್ಯರು ದಿನಕ್ಕೆ ಮೂರು ಬಾರಿ ಔಷಧಿ ನೀಡುವಂತೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನ ಅನುಸರಿಸಿ.

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನು ಮರೆತರೆ ಏನು ಮಾಡಬೇಕು?

ಮಾತ್ರೆಗಳು: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಮಾರ್ಪಾಡಿತ ಬಿಡುಗಡೆ: ಔಷಧಿ ಕೊಡುವುದನ್ನು ಮರೆತರೆ, ಮುಂದಿನ ಎಂಟು ಗಂಟೆಗಳ ಒಳಗಾಗಿ ಯಾವಾಗಲಾದರೂ ನೀಡಬಹುದು, ಆದರೆ, ಈ ಸಮಯ ಮೀರಿದರೆ, ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಫೆನಿಟೋಯಿನ್ ನೀಡಬೇಡಿ

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಪೆರಂಪನೆಲ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪೆರಂಪನೆಲ್ ನೀಡಿ.. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.

ಔಷಧಿಯನ್ನು ಹೇಗೆ ನೀಡಬೇಕು?“ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ದ್ರವ ಅಥವಾ ಸಿರಪ್: ಸಿರಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನು ಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”

ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ,ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು(ಅಡ್ಡಪರಿಣಾಮಗಳು) ಉಂಟು ಮಾಡಬಹುದು.

ಸಾಮಾನ್ಯವಾಗಿ ಉಂಟಾಗುವ ಅಡ್ಡಪರಿಣಾಮಗಳು

• ಗಮ್ (ಜಿಂಗೈವಲ್) ಹೈಪರ್ಟ್ರೋಫಿ

• ದೇಹದ ಕೂದಲು ಹೆಚ್ಚಾಗುವುದು

• ಮಂದವಾದ ಮಾತು, ದ್ವಿ-ದೃಷ್ಟಿ, ಅಟಾಕ್ಸಿಯಾ ಮತ್ತು ನರರೋಗ

• ಹೆಚ್ಚು ನಿದ್ರೆ

ಫೆನಿಟೋಯಿನ್ ಅನ್ನು ನೀಡಿದ ನಂತರ (ಅಥವಾ ರಕ್ತಕ್ಕೆ), drug ಷಧದ ಮಟ್ಟವು ಅನಿರೀಕ್ಷಿತವಾಗಿರುತ್ತದೆ. ಉದಾಹರಣೆ, ಒಬ್ಬ ವ್ಯಕ್ತಿಯಲ್ಲಿ ಅದೇ ಪ್ರಮಾಣವು ಉಪ ಚಿಕಿತ್ಸಕ ಮಟ್ಟಕ್ಕೆ ಕಾರಣವಾಗಬಹುದು (ನಿರೀಕ್ಷಿತ ರಕ್ತದ ಮಟ್ಟಕ್ಕಿಂತ ಕಡಿಮೆ) ಮತ್ತು ಇನ್ನೊಬ್ಬ ವ್ಯಕ್ತಿಯಲ್ಲಿ ಇದು ವಿಷಕಾರಿ ಯಾಗಬಹುದು, ಆದ್ದರಿಂದ, ನೀಡಲಾಗುವ ಔಷಧಿಯ ಮಟ್ಟವನ್ನು ಆಗಾಗ್ಗೆ (ವಿಶೇಷವಾಗಿ ಇದನ್ನು ದೀರ್ಘಕಾಲದವರೆಗೆ ಬಳಸಿದಾಗ) ಗಮನಿಸಿಕೊಳ್ಳುತ್ತಿರಬೇಕು,. ನಿಮ್ಮ ವೈದ್ಯರು ವೈದ್ಯಕೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಅಗತ್ಯವಿದ್ದಾಗ ಸಲಹೆ ನೀಡುತ್ತಾರೆ.

ನಿಮ್ಮನ್ನು ಚಿಂತೆಗೀಡುವ ಅಡ್ಡಪರಿಣಾಮಗಳು – ಅಪರೂಪ

ಯಕೃತ್ತಿನ ಕಾಯಿಲೆ: ಯಾವುದೇ ನಿಮ್ಮ ಮಗು ಪ್ರತಿ ಕೆಲವು ಗಂಟೆಗಳಿಗೊಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಅಥವಾ ಹೊಟ್ಟೆ ನೋವು, ತುಂಬಾ ನಿದ್ರೆ, ಕಾಮಾಲೆ ಉಂಟಾದರೆ (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಫಿಟ್ಸ್ ಗೆ ಒಳಗಾಗುತ್ತಿದ್ದರೆ, ಅವರನ್ನು ನಿಮ್ಮ ವೈದ್ಯರಿಗೆ ತೋರಿಸಿ ಅಥವಾ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ.

ನೀವು ಗಮನಿಸಿಕೊಳ್ಳಬೇಕಾದ ಇತರೆ ಅಡ್ಡಪರಿಣಾಮಗಳು

ಮಗುವು ಔಷಧಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಈ ಅಡ್ಡಪರಿಣಾಮಗಳು. ಉಂಟಾಗಬಹುದು. ಆದರೆ, ನಿಮ್ಮ ಮಗುವಿನ ದೇಹ ಔಷಧಿಗೆ ಹೊಂದಿಕೊಂಡಂತೆ ಅಥವಾ ಒಂದು ವಾರಗಳಷ್ಟರಲ್ಲಿ ಇವು ಕಡಿಮೆಯಾಗುತ್ತವೆ. ನಿಮ್ಮ ವೈದ್ಯರ ಸಲಹೆಯಂತೆ ಫೆನಿಟೋಯಿನ್ ನೀಡುವುದನ್ನು ಮುಂದುವರೆಸಿ.

• ನಿಮ್ಮ ಮಗು ಅಸಹಜ ಎನಿಸುವಷ್ಟು ನಿದ್ರಿಸಬಹುದು.

• ಮಗುವಿಗೆ ಕಡಿಮೆ ಹಸಿವು ಉಂಟಾಗಬಹುದು (ಹಸಿವು ಉಂಟಾಗದಿರಬಹುದು) ಮತ್ತು ವಾಕರಿಕೆ ಅಥವಾ ವಾಂತಿಯಾಗಬಹುದು. ಪ್ರಾರಂಭದಲ್ಲಿ ಆಹಾರದೊಂದಿಗೆ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ನೀಡಿ. ದಿನಕಳೆದಂತೆ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಿದ್ದಲ್ಲಿ, ಕ್ರಮೇಣ ಈ ಸಮಸ್ಯೆಗಳನ್ನು ತಪ್ಪಿಸಬಹುದು.

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ. ಮಗುವಿನ ಚರ್ಮದ ಮೇಲೆ ಗುಳ್ಳೆಗಳು ಅಥವಾ ಬಾಯಿ/ ಜನನಾಂಗದಲ್ಲಿ ದದ್ದುಗಳು ಕಂಡು ಬಂದರೆ, ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಿರಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇಷ್ಟೆಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ, ಪೊನೊಬಾರ್ಬಿಟೋನ್ ಉತ್ತಮ ಅಪಸ್ಮಾರ ನಿರೋಧಕ ಔಷಧವಾಗಿದ್ದು, ಮಗುವಿನ ವರ್ತನೆ, ಎಚ್ಚರಿಕೆ ಮತ್ತು ಕಲಿಕಾ ಸಾಮರ್ಥ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.

ಮೇಲೆ ತಿಳಿಸಿದ ಗಂಭಿರ ಅಡ್ಡಪರಿಣಾಮವನ್ನು ತಡೆಯಬಹುದೇ?

HLA – B 1502 ವಂಶವಾಹಿ ಹೊಂದಿದವರಿಗೆ ಈ ಆಯ್ಕೆಯಿದ್ದು, ಔಷಧಿ ಸೇವನೆಯಿಂದ ಅಡ್ಡಪರಿಣಾಮ ಉಂಟಾಗುತ್ತದೆಯೇ ಇಲ್ಲವೇ ಎಂಬುದನ್ನು ಕಂಡು ಹಿಡಿಯಬಹುದು. ಈ ವಂಶವಾಹಿ ಹೊಂದಿದವರು ಈ ಔಷಧಿ ಸೇವಿಸಿದಾಗ ಮೇಲಿನ ಅಡ್ಡಪರಿಣಾಮ (ಸ್ಟೀವ್ಸ್ ಜಾನ್ಸನ್ ಸಿಂಡ್ರೋಮ್) ಕಂಡು ಬರುವುದರಿಂದ ಅವರಿಗೆ ಈ ಆಯ್ಕೆಯಿದ್ದು, ಇದೊಂದು ಅನುಕೂಲವೆಂದೇ ಹೇಳಬಹುದು.

ಫೆನಿಟೋಯಿನ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

• ಪ್ಯಾರಾಸಿಟಮೆಲ್ ಅಥವಾ ಇಬುಪ್ರೊಫೆನ್‌ವುಳ್ಳ ಔಷಧಿಗಳು, ಆಂಟಿಬಯಾಟಿಕ್ಸ್ ಅಥವಾ ಇತರೆ ಸಾಮಾನ್ಯ ಔಷಧಿಗಳನ್ನು ನಿಮ್ಮ ಮಗುವಿಗೆ ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.

• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರೆ ಔಷಧಿಗಳು, ಫೆನಿಟೋಯಿನ್ ನಷ್ಟೇ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಅಥವಾ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಾದರೆ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಫೆನಿಟೋಯಿನ್ ಮತ್ತು ಗರ್ಭದಾರಣೆ

• ಫೆನಿಟೋಯಿನ್ ಸೇವನೆಯಿಂದ ಭ್ರೂಣಕ್ಕೆ ಸಮಸ್ಯೆಯಾಗಬಹುದು

• ಗರ್ಭನಿರೋಧಕ ಮಾತ್ರೆಯ ಪ್ರಮಾಣವನ್ನು ಹೆಚ್ಚಿಸಬೇಕಾಗಬಹುದು.

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು…

• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.

• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.

• ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

 

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore