Dr C P Ravikumar

ಮಕ್ಕಳಲ್ಲಿ ರೈಬೋಫ್ಲೇವಿನ್ (Riboflavin) (ವಿಟಮಿನ್ ಬಿ 2) ಕೊರತೆ
ರೈಬೋಫ್ಲೇವಿನ್, ಪೌಷ್ಠಿಕಾಂಶಗಳಲ್ಲಿಯೇ ಅತ್ಯುತ್ತಮವಾದ ವಿಟಮಿನ್ ಆಗಿದ್ದು, ದೇಹದ ಬೆಳವಣಿಗೆ, ಅಂಗಾಂಗಳಲ್ಲಿ ಸಮಸ್ಯೆಯುಂಟಾದಾಗ ಗುಣಪಡಿಸುವುದು ಸೇರಿದಂತೆ, ಶರೀರದಲ್ಲಿ ಶಕ್ತಿಯ ಉತ್ಪಾದನೆ, ಜೀವಕೋಶಗಳ ಕಾರ್ಯ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮೈಗ್ರೇನ್‌ನ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ರೈಬೋಫ್ಲೇವಿನ್ ನ ಪರಿಣಾಮಕಾರಿತ್ವವನ್ನು ತಿಳಿಯಲು ಸಂಶೋಧನೆಗಳು ನಡೆಯುತ್ತಿವೆ.
ದೈನಂದಿನ ಪ್ರಮಾಣ
ಸೇವನೆಗೆ ಶಿಫಾರಸು ಮಾಡಲಾದ ವಿಟಮಿನ್ ಬಿ 2 ನ ದೈನಂದಿನ ಪ್ರಮಾಣ:
ವಯಸ್ಸು ಪುರುಷ ಮಹಿಳೆ ಗರ್ಭಿಣಿಯರು ಸ್ತನ್ಯಪಾನ್ಯ ಮಾಡಿಸುವ ಮಹಿಳೆಯರು

ವಯಸ್ಸು  ಪುರುಷ ಮಹಿಳೆ ಗರ್ಭಿಣಿಯರು ಸ್ತನ್ಯಪಾನ್ಯ
0 – 6 ತಿಂಗಳು 0.3 mg 0.3 mg
7 – 12 ತಿಂಗಳು 0.4 mg o.4 mg
1 – 3 ವರ್ಷ 0.5 mg 0.5 mg
4 – 8 ವರ್ಷ 0.6 mg 0.6 mg
9 – 13 ವರ್ಷ 0.9 mg 0.9 mg
14 – 18 ವರ್ಷ 1.3 mg 1.0 mg 1.4 mg 1.6 mg
19 – 50 ವರ್ಷ 1.3 mg 1.1 mg 1.4 mg 1.6 mg

ರೈಬೋಫ್ಲೇವಿನ್ ನ ಆಹಾರ ಮೂಲಗಳು ವಿಟಮಿನ್ ಬಿ 2 ನ ನೈಸರ್ಗಿಕ ಮೂಲಗಳು o ರೈಬೋಫ್ಲೇವಿನ್ ಒಂದು ವಿಧದ ವಿಟಮಿನ್ ’ಬಿ’ ಯಾಗಿದ್ದು, ಈ ಕೆಳಗಿನ ಆಹಾರ ಪದಾರ್ಥಗಳಲ್ಲಿ ಕಂಡು ಬರುತ್ತದೆ
  • ಹಾಲು
  • ಮಾಂಸ
  • ಮೊಟ್ಟೆ,
  • ಮೀನು,
  • ಬೀಜಗಳು,
  • ದ್ವಿದಳ ಧಾನ್ಯಗಳು,
  • ಕಡು ಹಸಿರು ಎಲೆಗಳುಳ್ಳ ತರಕಾರಿಗಳು,
  • ಗಿಣ್ಣು ಮತ್ತು ಡೈರಿ ಉತ್ಪನ್ನಗಳು
ಭಾರತದಲ್ಲಿ, ಈ ಕೆಳಗಿನ ಆಹಾರ ಪದಾರ್ಥಗಳಲ್ಲಿ ರೈಬೋಫ್ಲೇವಿನ್ ಅಂಶ ಸಮೃದ್ಧವಾಗಿರುತ್ತದೆ.
  • ಸೋಯಾ ಹುರುಳಿ
  • ಹೆಸರು ಕಾಳು
  • ಬಜ್ರಾ (ಸಿರಿಧಾನ್ಯ)
  • ಹಸಿರು ಬಟಾಣಿ

ವಿಟಮಿನ್ ಬಿ 2 ನ ಪೂರಕಗಳು
ರೈಬೋಫ್ಲೇವಿನ್, ಮಲ್ಟಿವಿಟಮಿನ್ ಮತ್ತು ಬಹು ಖನಿಜಯುಕ್ತ ಮಾತ್ರೆಗಳಲ್ಲಿ ಲಭ್ಯವಿದೆ.
ವಿಟಮಿನ್ ಬಿ 2 ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
ಮೈಗ್ರೇನ್ ತಲೆನೋವು ತಡೆಗಟ್ಟುವಲ್ಲಿ ರೈಬೋಫ್ಲೇವಿನ್ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ವಿಟಮಿನ್ ಬಿ 2 ನ ಕೊರತೆ

ಎ. ಆಹಾರದ ಕಾರಣಗಳು
ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚುತ್ತಿರುವ ವಿಗನ ಆಹಾರ (vegan diet), (ಒಂದು ರೀತಿಯ ಸಸ್ಯಾಹಾರಿ ಆಹಾರ) ಪ್ರವೃತ್ತಿಯಿಂದಾಗಿ ಜನರಲ್ಲಿ ರೈಬೋಫ್ಲೇವಿನ್ ಕೊರತೆಯು ಹೆಚ್ಚಾಗುತ್ತಿದೆ. ಹಾಲಿನ ಉಪ ಉತ್ಪನ್ನಗಳನ್ನು ಸೇವಿಸದವರು ರೈಬೋಫ್ಲೇವಿನ್ ಮಾತ್ರೆಗಳು ಅಥವಾ ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಶೇಷವಾಗಿ ಸಸ್ಯಾಹಾರಿ ಕ್ರೀಡಾಪಟುಗಳು ವಿಟಮಿನ್ ಬಿ 2 ಅಂಶವುಳ್ಳ ಆಹಾರವನ್ನು ಸೇವಿಸುವುದು ಬಹು ಮುಖ್ಯ .
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಅಪೌಷ್ಟಿಕತೆಯ ಸಮಸ್ಯೆ, ಆರೋಗ್ಯಕರ ಆಹಾರದ ಅಲಭ್ಯತೆಯು ರೈಬೋಫ್ಲೇವಿನ್ ಕೊರತೆಗೆ ಕಾರಣವಾಗಬಹುದು. ವಿಶೇಷವಾಗಿ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ರೈಬೋಫ್ಲೇವಿನ್ ಸೇವಿಸದಿದ್ದಲ್ಲಿ, ಜನಿಸುವ ಮಗುವಿನಲ್ಲಿ ವಿಟಮಿನ್ ಬಿ 2 ಕೊರತೆ ಉಂಟಾಗಬಹುದು.
ದೇಹದಲ್ಲಿ ವಿಟಮಿನ್ ಬಿ2 ಕೊರತೆ ಉಂಟಾದಲ್ಲಿ, ಕೆಲವು ಮಕ್ಕಳಲ್ಲಿ ಹೊಟ್ಟೆ ಮತ್ತು ಕರುಳಿನ ಒಳಪದರ, ಥೈರಾಯ್ಡ್ ಅಥವಾ ಪಿತ್ತಜನಕಾಂಗದ ಕಾರ್ಯದಲ್ಲಿ ಸಮಸ್ಯೆಗಳು ಕಂಡು ಬರಬಹುದು. ಇದು ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಅಥವಾ ಚಯಾಪಚಯ ಕ್ರಿಯೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಬಿ. ಆನುವಂಶಿಕ ಕಾರಣಗಳು
ಕರುಳಿನಲ್ಲಿ ರೈಬೋಫ್ಲೇವಿನ್ ನನ್ನು ರವಾನಿಸಲು ಸಹಾಯ ಮಾಡುವ ಅಂಶದ ಉತ್ಪಾದನೆಯನ್ನು ಕಡಿಮೆಗೊಳಿಸುವ ಬ್ರೌನ್-ವೈಲೆಟ್ಟೊ-ವ್ಯಾನ್ ಲಾರೆ ಸಿಂಡ್ರೋಮ್ (Brown–Vialetto–Van Laere syndrome) ಎಂಬ ಅಪರೂಪದ, ಆನುವಂಶಿಕ ಸ್ಥಿತಿಯಿಂದಾಗಿಯೂ ಸಹ ವಿಟಮಿನ್ ಬಿ 2 ಕೊರತೆಯು ಕಂಡುಬರುತ್ತದೆ. ಇದರಿಂದ ಸ್ನಾಯು ಮತ್ತು ನರಗಳ ಕಾರ್ಯ ಕ್ಷಮತೆ ಕಡಿಮೆಯಾಗುತ್ತವೆ. ಮುಖ್ಯವಾಗಿ ಒಳಗಿನ ಕಿವಿ ಮತ್ತು ಮೆದುಳಿನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಎ. ವಿಟಮಿನ್ ಬಿ 2 ಕಡಿಮೆಯಾಗುವುದು
ಜನನದ ಸಮಯದಲ್ಲಿ ಕಾಮಾಲೆ (hyperbilirubinemia) ಸಮಸ್ಯೆಯುಳ್ಳ ಕೆಲವು ಶಿಶುಗಳಿಗೆ ಫೋಟೊಥೆರಪಿ (light therapy) ಅನ್ನು ಸೂಚಿಸಲಾಗುತ್ತದೆ. ರೈಬೋಫ್ಲೇವಿನ್, ಬೆಳಕಿನಲ್ಲಿ ತ್ವರಿತವಾಗಿ ಕ್ಷೀಣಿಸುವುದರಿಂದ ಪೂರಕವಾಗಿ ಇವನ್ನು ನೀಡದಿದ್ದರೆ ಮಕ್ಕಳಲ್ಲಿ ಇದರ ಮಟ್ಟ ಕಡಿಮೆಯಾಗಬಹುದು. ಆಹಾರವನ್ನು ಬಿಸಿ ಮಾಡುವುದು, ಬೇಯಿಸುವುದು ಮತ್ತು ಸಂಸ್ಕರಿಸುವುದು ಮತ್ತು ಅವುಗಳನ್ನು ನೀರಿನಲ್ಲಿ ಕುದಿಸುವುದರಿಂದ ರೈಬೋಫ್ಲೇವಿನ್ ನಾಶವಾಗುತ್ತದೆ. ವಿಟಮಿನ್ ಬಿ 2 ನೀರಿನಲ್ಲಿ ಕರಗುವ ಗುಣವನ್ನು ಹೊಂದಿರುವುದರಿಂದ ಅಡುಗೆ ನೀರಿನಲ್ಲಿ ಕರಗುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ರೈಬೋಫ್ಲೇವಿನ್ ಸೇವಿಸದಿದ್ದಲ್ಲಿ, ಜನಿಸುವ ಶಿಶುಗಳಲ್ಲಿ ಇದರ ಕೊರತೆ ಉಂಟಾಗಬಹುದು. ಶಾಲಾ ವಯಸ್ಸಿನ ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯವಾಗದಿದ್ದಲ್ಲಿ, ರೈಬೋಫ್ಲೇವಿನ್ ಮಟ್ಟ ಕಡಿಮೆಯಾಗಬಹುದು. ಹದಿಹರೆಯದ ಹುಡುಗರಿಗೆ ಹೋಲಿಸಿದರೆ ಹುಡುಗಿಯರಲ್ಲಿ ರೈಬೋಫ್ಲೇವಿನ್ ಕೊರತೆಯ ಪ್ರಮಾಣ ಹೆಚ್ಚು.
ರೈಬೋಫ್ಲೇವಿನ್ ಕೊರತೆಯ ಸಾಮಾನ್ಯ ಲಕ್ಷಣಗಳು
• ಆಲಸ್ಯ, ಕಿರಿಕಿರಿ, ಕಡಿಮೆ ಜನನ ತೂಕ, ಶಿಶುಗಳಲ್ಲಿ ಕುಂಠಿತ ಬೆಳವಣಿಗೆ
• ಅರಿಬೋಫ್ಲಾವಿನೋಸಿಸ್ (Ariboflavinosis): ಒಣಗಿದ, ಬಿರುಕು ಬಿಟ್ಟ ತುಟಿಗಳು, ಬಾಯಿಯ ಮೂಲೆಗಳಲ್ಲಿ ಉರಿಯೂತ (ಇದನ್ನು ಆಂಗುಲರ‍್ ಚೀಲೈಟಿಸ್ (angular cheilitis) ಎಂದು ಕರೆಯಲಾಗುತ್ತದೆ). ನಾಲಿಗೆಯು ಒಣಗಿದಂತಾಗುತ್ತದೆ ಮತ್ತು ಕೆನ್ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ (glossitis), ಚರ್ಮದಲ್ಲಿ ತುರಿಕೆಯುಂಟಾಗುವುದು ಮತ್ತು ಚಕ್ಕೆಯಂತಾಗುವುದು. ವಿಶೇಷವಾಗಿ, ಜನನಾಂಗದ ಪ್ರದೇಶಗಳು, ಮುಖದ ಕಿವಿ ಮತ್ತು ನೆತ್ತಿಯ ಭಾಗ
• ಬೆಳಕಿಗೆ ಕಣ್ಣುಗಳು ಸೂಕ್ಷ್ಮವಾಗುವುದು
• ಗಂಟಲು ಕೆರತ
• ಬ್ರೌನ್-ವಯಲೆಟ್ಟೊ-ವ್ಯಾನ್ ಲಾರೆ ಸಿಂಡ್ರೋಮ್ (Brown–Vialetto–Van Laere syndrome) ಹೊಂದಿರುವ ಮಕ್ಕಳಲ್ಲಿ ಕಿವುಡುತನ, ಬಣ್ಣ ಕುರುಡುತನ, ಅಪಸ್ಮಾರ, ಸ್ನಾಯು ಸಮನ್ವಯತೆಯಲ್ಲಿ ಸಮಸ್ಯೆ ಅಥವಾ ಪಾರ್ಶ್ವವಾಯು ತೊಂದರೆ ಕಂಡು ಬರಬಹುದು.

ದೇಹದಲ್ಲಿ ರೈಬೋಫ್ಲೇವಿನ್ ಕೊರತೆಯನ್ನು ಗುರುತಿಸುವುದು

ಮಕ್ಕಳ ವೈದ್ಯರು ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರ ಮೂಲಕ ಶಿಶುಗಳು ಮತ್ತು ಮಕ್ಕಳಲ್ಲಿನ ರೈಬೋಫ್ಲೇವಿನ್ ಕೊರತೆಯ ಲಕ್ಷಣಗಳನ್ನು ಗುರುತಿಸುತ್ತಾರೆ. ನರಮಂಡಲದ ನ್ಯೂನತೆಗಳಿದ್ದಲ್ಲಿ, ಮಕ್ಕಳ ನರವಿಜ್ಞಾನಿಗಳನ್ನು ಸಂಪರ್ಕಿಸಬಹುದು. ದೇಹದಲ್ಲಿನ ವಿಟಮಿನ್ ಬಿ 2 ಪ್ರಮಾಣವನ್ನು ತಿಳಿಯಲು ರಕ್ತ ಪರೀಕ್ಷೆ ಸಹ ಸೂಕ್ತವಾದುದು.

ರೈಬೋಫ್ಲೇವಿನ್ ಕೊರತೆಗೆ ಚಿಕಿತ್ಸೆ

ವಿಟಮಿನ್ ಕೊರತೆಯನ್ನು ತಡೆಗಟ್ಟಲು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಮಕ್ಕಳಿಗೆ ಧಾನ್ಯಗಳು, ಡೈರಿ ಉತ್ಪನ್ನಗಳು ಮತ್ತು ಫಾರ್ಮುಲಾ ಹಾಲನ್ನು ಸಹ ನೀಡಬಹುದು. ರೈಬೋಫ್ಲೇವಿನ್ ಜೊತೆಗೆ ಬಾಯಿಯ ಮೂಲಕ ಸೇವಿಸಬಹುದಾದ ಪೂರಕಗಳನ್ನು ಸಹ ವೈದ್ಯರು ಸೂಚಿಸಬಹುದು. ರೈಬೋಫ್ಲೇವಿನ್ ಕೊರತೆಯಿಂದಾಗಿ ಮಗುವಿನಲ್ಲಿ ನರವೈಜ್ಞಾನಿಕ ಸಮಸ್ಯೆಗಳು ಕಂಡು ಬಂದಲ್ಲಿ, ಉತ್ತಮ ಪೋಷಕಾಂಶವುಳ್ಳ ಆಹಾರ ನೀಡುವುದರೊಂದಿಗೆ, ಮಾತು (speech therapy) ಮತ್ತು ಭೌತಚಿಕಿತ್ಸೆ (physiotherapy) ಹಾಗೂ ವೈದ್ಯಕೀಯ ನರವಿಜ್ಞಾನಿ ಅಥವಾ ಮಕ್ಕಳ ನರವಿಜ್ಞಾನಿಗಳ ಮಾರ್ಗದರ್ಶನ ಪಡೆದು ಸಮಸ್ಯೆಯನ್ನು ಸುಧಾರಿಸಬಹುದು.

ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.

ಹಿಂದಿನ ಲಿಂಕ್ ಗಳು
1. Ariboflavinosis: https://www.infonet-biovision.org/HumanHealth/Ariboflavinosis-Vit-B2-deficiency
2. Brown–Vialetto–Van Laere syndrome: https://ghr.nlm.nih.gov/condition/riboflavin-transporter-deficiency-neuronopathy

ಉಲ್ಲೇಖಗಳು:
  1. https://ods.od.nih.gov/factsheets/Riboflavin-HealthProfessional/#:~:text=Infants%20of%20mothers%20with%20riboflavin,)%20%5B24%2C27%5D.
  2. Riboflavin (vitamin B-2) and health :The American Journal of Clinical Nutrition, Volume 77, Issue 6, June 2003, Pages 1352–1360, https://doi.org/10.1093/ajcn/77.6.1352
  3. https://ods.od.nih.gov/factsheets/Riboflavin-HealthProfessional/
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore